ಮನೋರಂಜನೆ

ಕುಸ್ತಿಗೆ ಸಿದ್ಧವಾದ ಸಲ್ಮಾನ್

Pinterest LinkedIn Tumblr

Sultan

ಸಲ್ಮಾನ್‌ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಸುಲ್ತಾನ್’ನ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಅಲಿ ಅಬ್ಬಾಸ್ ಜಾಫರ್ ‘ಸುಲ್ತಾನ್’ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಭಾರಿ ಸುದ್ದಿ ಮಾಡಿದೆ.

‘ಸುಲ್ತಾನ್’ ಸಿನಿಮಾದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಳ್ಳಲಿರುವ ಸಲ್ಮಾನ್ ಖಾನ್, ಶರ್ಟ್ ಇಲ್ಲದೆ ಅರೆ ನಗ್ನವಾಗಿ ಕುಸ್ತಿಪಟುವಿನಂತೆ ನಿಂತಿರುವ ಮೂರು ಪೋಸ್ಟರ್‌ಗಳನ್ನು ಟ್ವಿಟರ್ ಮೂಲಕ ಬಿಡುಗಡೆ ಮಾಡಲಾಗಿದೆ.

ಸಲ್ಮಾನ್ ಜೊತೆ ‘ಸುಲ್ತಾನ್’ ಸಿನಿಮಾದಲ್ಲಿ ಕುಸ್ತಿಯಾಡಲು ಅನುಷ್ಕಾ ಶರ್ಮ ತಯಾರಾಗಿದ್ದಾರೆ. ಸಿನಿಮಾದ ಟ್ರೇಲರ್ ಇದೇ ತಿಂಗಳ 14ರಂದು ಬಿಡುಗಡೆಯಾಗಲಿದೆ. ಈ ಬಾರಿಯ ಈದ್‌ ಹಬ್ಬಕ್ಕೆ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಿಗೆ ‘ಸುಲ್ತಾನ್’ ಸಿನಿಮಾವನ್ನು ಉಡುಗೊರೆಯಾಗಿ ನೀಡಲಿದ್ದಾರೆ.

ಶಾರುಖ್‌ ಖಾನ್ ಅಭಿನಯದ ‘ರಯೀಸ್’ ಸಿನಿಮಾ ಕೂಡ ಈದ್‌ ಹಬ್ಬದಂದೇ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲೂ ಅನುಷ್ಕಾ ಶರ್ಮಾ, ರಣ್‌ದೀಪ್ ಹೂಡ, ಅಮಿತ್ ಸಾದ್ ಅಭಿನಯಿಸಿದ್ದಾರೆ.

ಇದೇ ಸಮಯಕ್ಕೆ ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಸಹ ಬಿಡುಗಡೆಯಾಗಲಿದ್ದು, ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯನ್ನು ಬಾಲಿವುಡ್‌ನ ಇಬ್ಬರೂ ಬಿಗ್‌ಸ್ಟಾರ್‌ಗಳು ನೀಡಲಿದ್ದಾರೆ.

Write A Comment