ಅಂತರಾಷ್ಟ್ರೀಯ

ಪಾಕ್‌ ಜೈಲಿನಲ್ಲಿ ಕೈದಿ ಕೃಪಾಲ್‌ ಸಿಂಗ್‌ ಸಾವು

Pinterest LinkedIn Tumblr

krapal

ಲಾಹೋರ್‌ (ಪಿಟಿಐ): ಕಳೆದ 25 ವರ್ಷಗಳಿಂದ ಪಾಕಿಸ್ತಾನ ಜೈಲಿನಲ್ಲಿದ್ದ ಚಂಡೀಗಡದ 50 ವರ್ಷದ ಕೃಪಾಲ್‌ ಸಿಂಗ್‌ ಅವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

1992ರಲ್ಲಿ ವಾಘಾ ಗಡಿ ಉಲ್ಲಂಘನೆ ಆರೋಪದ ಅಡಿ ಕೃಪಾಲ್‌ ಸಿಂಗ್‌ ಅವರನ್ನು ಬಂಧಿಸಲಾಗಿತ್ತು. ತರುವಾಯ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ ಭಾಗಿಯಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ‘ಸಿಂಗ್‌ ಸೋಮವಾರ ಮುಂಜಾನೆ ತಾವಿದ್ದ ಸೆಲ್‌ನಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಕೋಟಾ ಲಾಖ್‌ಪತ್‌ ಜೈಲು ಸಿಬ್ಬಂದಿ ತಿಳಿಸಿದ್ದಾರೆ.

ಸಾವಿಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶರ ಸಲಹೆ ಆಧಾರದಲ್ಲಿ ಕೆಲವು ಕೈದಿಗಳ ಹೇಳಿಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ಪತ್ರ– (ಚಂಡೀಗಡ ವರದಿ): ಕೃಪಾಲ್‌ ಸಿಂಗ್‌ ಪಂಜಾಬ್ ರಾಜ್ಯದ ಗುರುದಾಸ್‌ ಪುರ ಜಿಲ್ಲೆಯ ಮುಸ್ತಫಾಬಾದ್‌ ಹಳ್ಳಿಯವರು. ಸೋಮವಾರ ಬೆಳಿಗ್ಗೆಯೇ ಹೃದಯಾಘಾತ ಸಂಭವಿಸಿ ಸಿಂಗ್‌ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

‘ಕೃಪಾಲ್ ಸಿಂಗ್ ಜೀವ ಉಳಿಸುವಲ್ಲಿ ಹಾಗೂ ಜೈಲು ಶಿಕ್ಷೆ ಕಡಿತಗೊಳಿಸುವಲ್ಲಿ ಕೇಂದ್ರ ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ದೂರಿದ ಸಂಬಂಧಿಗಳು, ಕೊನೇ ಪಕ್ಷ ಪಾರ್ಥಿವ ಶರೀರವನ್ನು ಇಲ್ಲಿಗೆ ತರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಾರ್ಚ್‌ ಮೊದಲ ವಾರದಲ್ಲಿ ಸಿಂಗ್‌ ಉರ್ದು ಭಾಷೆಯಲ್ಲಿ ಎರಡು ಪತ್ರ ಬರೆದಿದ್ದರು. ಅದರಲ್ಲಿ ಜೈಲಿನ ಕುರಿತು ಮಾಹಿತಿ ಮತ್ತು ಇಲ್ಲಿ ಬದುಕು ಕಷ್ಟವಾಗಿದೆ ಎಂದು ಬರೆದಿದ್ದರು ಎಂದಿದ್ದಾರೆ ಸಂಬಂಧಿಕರು.

Write A Comment