ಕನ್ನಡ ವಾರ್ತೆಗಳು

ಏ.14ರಿಂದ 25 : ಮಂಗಳೂರಿನಲ್ಲಿ ಎಂ.ಎಸ್.ಸಿ. ಕಪ್ ಪುಟ್ಭಾಲ್ ಟೂರ್ನಮೆಂಟ್

Pinterest LinkedIn Tumblr

Foot_baal_Press_1

ಮಂಗಳೂರು: ಮಂಗಳೂರು ಸ್ಪೋರ್ಟಿಂಗ್ ಕ್ಲಬ್ ಇದರ ವತಿಯಿಂದ ಏ.14 ರಿಂದ 25ರ ತನಕ ರಾಷ್ಟ್ರೀಯ ಮಟ್ಟದ ಆಹ್ವಾನಿತ ಎಂ.ಎಸ್.ಸಿ. ಕಪ್ ಪುಟ್ಭಾಲ್ ಟೂರ್ನಮೆಂಟ್ ಮಂಗಳೂರಿನ ಕೇಂದ್ರ ಮೈದಾನದ ಪುಟ್ಭಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಟೂರ್ನಮೆಂಟ್ ಕಮಿಟಿಯ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಹಾರ್ದವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪುಟ್ಭಾಲ್ ಟೂರ್ನಮೆಂಟ್ ಅನ್ನು ಸಂಯೋಜಿಸಲಾಗಿದ್ದು, ತಮಿಳುನಾಡು, ಕೇರಳ, ಗೋವಾ ಸೇರಿದಂತೆ 18 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ರಾಷ್ಟ್ರೀಯ ಮಟ್ಟದ ತೀರ್ಪುಗಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Foot_baal_Press_2

ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ ಬಹುಮಾನ 25 ಸಾವಿರ ರೂ. ಹಾಗೂ ಸವ್ಯಸಾಚಿ, ಶಿಸ್ತು ತಂಡ, ಉತ್ತಮ ಆಟಗಾರ, ಉತ್ತಮ ಗೋಲ್ ಕೀಪರ್ ಬಹುಮಾನ ನೀಡಲಾಗುವುದು. ಏ.14 ರಂದು ಸಾಯಂಕಾಲ 4ಗಂಟೆಗೆ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ ಎಂದರು.

ಪ್ರತಿ ದಿನ ಸಾಯಂಕಾಲ 3.30 ಕ್ಕೆ ಪಂದ್ಯಾಟ ಪ್ರಾರಂಭಗೊಳ್ಳಲಿದೆ. ಫೈನಲ್ ಪಂದ್ಯ ಏ.25 ರಂದು ನಡೆಯಲಿದೆ. ಗಣ್ಯ ಅತಿಥಿಗಳ ಜತೆ ಅಂತರಾಷ್ಟ್ರೀಯ ಅತ್ಲಿಟ್ ಅನಿಲ್ ಶೆಟ್ಟಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮಂಗಳೂರು ಸ್ಪೋಟಿಂಗ್ ಫುಟ್‌ಬಾಲ್ ಅಕಾಡೆಮಿ ಸ್ಥಾಪಿಸಿ ತಂಡ ಆರ್ಥಿಕವಾಗಿ ಹಿಂದುಳಿದ ಆಟಗಾರರಿಗೆ ಪ್ರೋತ್ಸಾಹ ನೀಡುವುದು. ಹಿರಿಯ ಆಟಗಾರರಿಗೆ ಚಿಕಿತ್ಸೆ ವೆಚ್ಚವನ್ನು ಕ್ಲಬ್ ವತಿಯಿಂದ ನೀಡುವ ಯೋಜನೆ ಹಮ್ಮಿಕೊಂಡಿದೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಪೋಟಿಂಗ್ ಕ್ಲಬ್‌ನ ಅಧ್ಯಕ್ಷ ಎಂ.ಫಯಾಜ್, ಸಂಚಾಲಕ ಜೀವನ್ ಕುಮಾರ್, ಕಾರ್ಯದರ್ಶಿ ಅನಿಲ್ ಪಿ.ವಿ., ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಶ್ರಫ್, ಉಪಾಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಪಿ.ಪಿ., ಮುಸ್ತಾಫ ಮುಂತಾದವರು ಉಪಸ್ಥಿತರಿದ್ದರು.

Write A Comment