ಕನ್ನಡ ವಾರ್ತೆಗಳು

ರಾಜ್ಯದಲ್ಲಿ ಭ್ರಷ್ಟಾಚಾರ ಸೇರಿದಂತೆ ಸಮಸ್ಯೆಗಳ ಮಹಾಪೂರ : ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲ : ಕುಮಾರಸ್ವಾಮಿ ಆರೋಪ

Pinterest LinkedIn Tumblr

Kumara_swami_Press_1

ಮಂಗಳೂರು : ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಜನ ಸಾಮಾನ್ಯರಿಂದ ಹಿಡಿದು ಎಲ್ಲರನ್ನು ದರೋಡೆ ಮಾಡುವಲ್ಲಿ ಮಾತ್ರ ಸಂಪೂರ್ಣ ಸಫಲವಾಗಿದೆ ಎಂದು ಜೆಡಿಎಸ್ ರಾಜ್ಯಾದ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುವುದರ ಜೊತೆಗೆ ಬರ ಪರಿಸ್ಥಿತಿ ನಿರ್ಲಕ್ಷ್ಯ, ವಿದ್ಯುತ್ ದರ ಏರಿಕೆ ಮುಂತಾದ ಸಮಸ್ಯೆಗಳ ಮಹಾಪೂರವೇ ಇದೆ.ಮಳೆಯಿಲ್ಲದೆ ನೀರಿನ ಅಭಾವ ಎದುರಾಗಿದ್ದು, ವಿದ್ಯುತ್ ಸಮಸ್ಯೆ ಕೂಡ ತಲೆಯೆತ್ತಿದೆ. ಇಷ್ಟೆಲ್ಲಾ ಆದರೂ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

Kumara_swami_Press_2 Kumara_swami_Press_3 Kumara_swami_Press_4

ಅಧಿಕಾರಿಗಳಿಗೆ ತಮ್ಮ ಕರ್ತವ್ಯದ ಮೇಲೆ ಭಯಭಕ್ತಿ ಇಲ್ಲದಂತಾಗಿದೆ. ಸುಪ್ರೀಂ ಕೋರ್ಟ್‌ ಕೂಡಾ ಈ ಬಗ್ಗೆ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಮಾತ್ರವಲ್ಲದೇ ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಹಿಂದೆ ಬಿದ್ದಿದ್ದು, ಕೂಲಿ ಕಾರ್ಮಿಕರಿಗೂ ಕೆಲಸ ಇಲ್ಲದಂತಾಗಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಎತ್ತಿನಹೊಳೆ ಯೋಜನೆಯಿಂದ ಬಹಳಷ್ಟು ಅಧಿಕಾರಿಗಳು ದುಡ್ಡು ಮಾಡುತ್ತಿದ್ದಾರೆ. ಯೋಜನೆಯ ಬಗ್ಗೆ ಸರ್ಕಾರಕ್ಕೂ ಸ್ಪಷ್ಟತೆ ಇಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರ ಸ್ವಾಮಿ, ರಾಜ್ಯದಲ್ಲಿ ಭ್ರಷ್ಟಾಚಾರ ಹುಟ್ಟುಹಾಕಿದ್ದೇ ಬಿಜೆಪಿ ಸರ್ಕಾರ, ಅಂಥವರು ಇದೀಗ ಭ್ರಷ್ಟಾಚಾರ ವಿರುದ್ದ ಹೋರಾಟ ಮಾಡ್ತಾರೆ ಅವರಿಗೆ ನೈತಿಕತೆ ಇಲ್ಲ ಎಂದು ಲೇವಾಡಿ ಮಾಡಿದರು.

Kumara_swami_Press_5 Kumara_swami_Press_6 Kumara_swami_Press_7

ಎಸಿಬಿಯಿಂದ ಲೋಕಾಯುಕ್ತ ನಿಷ್ಕಿಯ : ಸ್ವಾಮಿ ಆರೋಪ

ಎಸಿಬಿ ರಚನೆ ಮೂಲಕ ಲೋಕಾಯುಕ್ತ ಸಂಸ್ಥೆಯನ್ನೇ ನಿಷ್ಕಿಯಗೊಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕುಮಾರ ಸ್ವಾಮಿ ಆರೋಪಿಸಿದ್ದಾರೆ. ಭ್ರಷ್ಟ ಅಧಿಕಾರಿಗಳು, ರಾಜಕಾರಣಿ ಗಳ ರಕ್ಷಣೆಗಾಗಿ ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಎಸಿಬಿ ರಚನೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ವಾದ ಮಾಡುತ್ತಿದ್ದು, ಯಾವ ರಾಜ್ಯಗಳಲ್ಲಿ ಎಸಿಬಿ ಭ್ರಷ್ಟ ಅಧಿಕಾರಗಳ ವಿರುದ್ಧಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ. ಈ ಎಲ್ಲಾ ಸಮಸಿಅಗಳ ವಿರುದ್ಧ ಜೆಡಿಎಸ್ ಬಲವಾದ ಹೋರಾಟ ನಡೆಸಲಿದೆ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

Write A Comment