ಕನ್ನಡ ವಾರ್ತೆಗಳು

ಪೆಟ್ರೋಲ್ ಬಂಕ್‌ ದರೋಡೆ : ಇಬ್ಬರು ನೌಕರರು ಸೇರಿ 8 ಮಂದಿ ಸೆರೆ

Pinterest LinkedIn Tumblr

PETROL_BUNK

ಬೆಂಗಳೂರು,ಮಾ.28: ಕಳೆದ ಮಾ.20 ರಂದು ಮುಂಜಾನೆ ಕೆ.ಆರ್.ರಸ್ತೆಯ ವಿ.ವಿ.ಪುರಂನ ರಾಜೀವ್ ಫಿಲ್ಲಿಂಗ್ ಸ್ಟೇಷನ್ ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿ ಬೆದರಿಸಿ 4ಲಕ್ಷ 24 ಸಾವಿರ ನಗದನ್ನು ದೋಚಿದ್ದ ಬಂಕ್‌ನ ಇಬ್ಬರು ನೌಕರರು ಸೇರಿ 8 ಮಂದಿಯನ್ನು ಸೆಂಟ್ರಲ್ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆಯ ಮಲ್ಲೇಶ್(34) ಅಣ್ಣಪ್ಪ(27)ಜವರಯ್ಯ(36 )ತ್ಯಾಗರಾಜನಗರದ ನಂದೀಶ(19) ಬನ್ನೇರುಘಟ್ಟದ ಸ್ವಾಮಿ(24)ಸತೀಶ್(24)ಬಸವನಪುರದ ಮೋಹನ್(25) ಹಾಗೂ ಶ್ರೀನಿವಾಪುರದ ಜಯಶಂಕರ್(26) ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ 2 ಲಕ್ಷ ನಗದು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುತ್ತಾರೆ.

ಬಂಧಿತ ಮಲ್ಲೇಶ ಹಾಗೂ ನಂದೀಶ ರಾಜೀವ್ ಫಿಲ್ಲಿಂಗ್ ಸ್ಟೇಷನ್ ಪೆಟ್ರೋಲ್ ಬಂಕ್‌ನ ನೌಕರರಾಗಿದ್ದಾರೆ ಇವರಿಬ್ಬರೂ ಬಂಕ್‌ನಲ್ಲಿ ವ್ಯಾಪಾರವಾಗುತ್ತಿದ್ದ ಹಣವನ್ನು ದರೋಡೆ ಮಾಡಲು ವ್ಯವಸ್ಥಿತ ಸಂಚನ್ನು ರೂಪಿಸಿ ತನ್ನ ಸಹಚರರೊಂದಿಗೆ ಸೇರಿಕೊಂಡು ದರೋಡೆ ಮಾಡಿಸಿರುತ್ತಾರೆ.

ದರೋಡೆ ಮಾಡಿದ್ದ ಮತ್ತೊಬ್ಬ ಕುಖ್ಯಾತ ದರೋಡೆ ಕೋರ ಇಂದ್ರಜಿತ್ ಎಂಬುವನು ತಲೆಮರೆಸಿಕೊಂಡಿದ್ದು ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಲೋಕೇಶ್‌ಕುಮಾರ್ ತಿಳಿಸಿದ್ದಾರೆ.

Write A Comment