ಕನ್ನಡ ವಾರ್ತೆಗಳು

ರಾವಣನಾಗಬೇಡಿ….ವೇಷ ಬದಲಿಸಿ ಜನರ ಬಳಿ ಬನ್ನಿ; ಸಿ.ಎಂ. ಸಿದ್ದುಗೆ ಜನಾರ್ಧನ ಪೂಜಾರಿ ಸಲಹೆ

Pinterest LinkedIn Tumblr

ಉಡುಪಿ: ಲೋಕಾಯುಕ್ತವನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಸಿಬಿ ರಚನೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿ ವಿರುದ್ಧ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ತಮ್ಮ ಟೀಕೆಯನ್ನು ಮುಂದುವರಿಸಿದ್ದಾರೆ.

ಉಡುಪಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಜನಾರ್ಧನ ಪೂಜಾರಿ ಅವರು ಸರಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

page

(ಸಾಂದರ್ಭಿಕ ಚಿತ್ರ)

ಒಂದೇ ವ್ಯಕ್ತಿಯನ್ನು ಎರಡು ಬಾರಿ ತನಿಖೆಗೆ ಒಳಪಡಿಸಲು ಕಾರಣವಾಗುವ ಎಸಿಬಿ ಬೇಡ ಅದು ಸಂವಿಧಾನಕ್ಕೆ ವಿರುದ್ಧವಾದ ನಡೆ ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ರಕ್ಷಿಸಲು ಎಸಿಬಿ ಅನುಷ್ಠಾನಕ್ಕೆ ತರುತ್ತೀರಾ ಎಂದವರು ಪ್ರಶ್ನಿಸಿದರು. ಸ್ವತಂತ್ರವಾದ ಲೋಕಾಯುಕ್ತ ಸಂಸ್ಥೆಯ ಬುಡವನ್ನೇ ಕತ್ತರಿಸುವ ಕೆಲಸಕ್ಕೆ ಸಿ‌ಎಂ ಕೈ ಹಾಕಿದ್ದಾರೆ. ಇದರಿಂದಾಗಿ ಪಕ್ಷ ಮತ್ತು ಸಿದ್ದರಾಮಯ್ಯ ಅವರ ವರ್ಚಸ್ಸಿಗೂ ಹಾನಿಯಾಗಿದೆ. ಇದನ್ನು ಸರಿಪಡಿಸಬೇಕಾದರೆ ಎಸಿಬಿಯನ್ನು ರದ್ದುಪಡಿಸಬೇಕು. ಇದು ಪಕ್ಷ ಮತ್ತು ಜನತೆಯ ಹಿತದೃಷ್ಟಿಯಿಂದ ಅತ್ಯಗತ್ಯ’ ಎಂದು ಹೇಳಿದರು.

ರಾವಣನಾಗಬೇಡಿ… ವೇಷ ಬದಲಿಸಿ ಬನ್ನಿ…
ಸಿಎಂ ಸಿದ್ದರಾಮಯ್ಯನವರನ್ನು ರಾವಣನಿಗೆ ಹೋಲಿಸಿದ ಪೂಜಾರಿ ಅವರು, ವಿಭೀಷಣ- ಮಂಡೋದರಿ ಪರಿಪರಿಯಾಗಿ ರಾವಣನಿಗೆ ಹೇಳಿದ್ದರು ಸೀತೆಯ ವಿಚಾರದಲ್ಲಿ ರಾವಣ ಮಾತು ಕೇಳಿಲ್ಲ ಮಾತು ಕೇಳದಿದ್ದದ್ದಕ್ಕೆ ಪರಿಣಾಮ ಗೊತ್ತಾಯಿತು ನಿಮ್ಮ ಒಳ್ಳೆಯದಕ್ಕೆ ನಾವು ಹೇಳುತ್ತಿದ್ದೇವೆ ವೇಷ ಬದಲಿಸಿಕೊಂಡು ಜನರ ಬಳಿಗೆ ಹೋಗಿ ಆಗ ರಾಜ್ಯದ ಪರಿಸ್ಥಿತಿ ಗೊತ್ತಾಗುತ್ತದೆ ಎಂದು ರಾಮಾಯಣದ ಉದಾಹರಣೆ ನೀಡುತ್ತಾ, ಎಸಿಬಿಗೆ ಜನರ ವ್ಯಾಪಕ ವಿರೋಧ ಹಿನ್ನೆಲೆ ಸಿಎಂಗೆ ಜನಾರ್ದನ ಪೂಜಾರಿ ಸಲಹೆ ನೀಡಿದರು.

Write A Comment