ಅಂತರಾಷ್ಟ್ರೀಯ

ಬೆಲ್ಜಿಯಂ ಸೇನೆಯಿಂದ ಪ್ರಧಾನಿ ಮೋದಿಗೆ 3 ಹಂತದ ಭದ್ರತೆ

Pinterest LinkedIn Tumblr

narendra-modi

ನವದೆಹಲಿ: ಬೆಲ್ಜಿಯಂನ ಬ್ರಸೆಲ್ಸ್ ನಲ್ಲಿ ಮಾರ್ಚ್ 30ರಂದು ನಡೆಯಲಿರುವ ಯುರೋಪಿಯನ್ ಒಕ್ಕೂಟದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಬೆಲ್ಜಿಯಂ ಸೇನೆಯು ಮೂರು ಹಂತದಲ್ಲಿ ಭದ್ರತೆ ಒದಗಿಸಲಿದೆ.

ಬ್ರಸೆಲ್ಸ್ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿ ಹಿನ್ನೆಲೆಯಲ್ಲಿ ಮೋದಿ ಪ್ರವಾಸ ರದ್ದುಗೊಳಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಬ್ರಿಟನ್ ಸೇರಿದಂತೆ ಎಲ್ಲ ರಾಷ್ಟ್ರಗಳು ಭಾಗವಹಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಮೋದಿ ಕೂಡ ಭಾಗವಹಿಸುವುದು ಖಚಿತವಾಗಿದೆ. ಪ್ರವಾಸದ ವೇಳೆ ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ಜತೆಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಲಿದ್ದಾರೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮಾ.31 ಹಾಗೂ ಏ.1ರಂದು ವಾಷಿಂಗ್ಟನ್​ನಲ್ಲಿ ನಾಲ್ಕನೇ ಪರಮಾಣು ಸುರಕ್ಷತಾ ಸಮಾವೇಶವನ್ನು ಆಯೋಜಿಸಿದ್ದಾರೆ. ಇದರಲ್ಲಿ ಪಾಲ್ಗೊಳ್ಳುವ ಸಲುವಾಗಿ ತೆರಳಲಿರುವ ಮೋದಿ ಮಾರ್ಗಮಧ್ಯೆ ಬ್ರಸೆಲ್ಸ್​ನಲ್ಲಿ ನಡೆಯುವ ಯುರೋಪಿಯನ್ ಶೃಂಗದಲ್ಲಿ ಭಾಗವಹಿಸಲಿದ್ದಾರೆ. ಸ್ವದೇಶಕ್ಕೆ ಹಿಂತಿರುಗಿ ಬರುವ ಮಾರ್ಗದಲ್ಲಿ ಮೋದಿ ರಿಯಾದ್​ನಲ್ಲಿ ತಂಗಲಿದ್ದು, ಸೌದಿ ಅರೇಬಿಯಾ ಸರ್ಕಾರದ ಜತೆಗೂ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಬೆಲ್ಜಿಯಂಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ 12 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತ ನಾಡಲಿದ್ದಾರೆ. ಮಾ.30ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.

Write A Comment