ಕನ್ನಡ ವಾರ್ತೆಗಳು

ಸ್ವಚ್ಚತೆಯಲ್ಲಿ ಮಂಗಳೂರಿಗೆ ಮೂರನೇ ಸ್ಥಾನ

Pinterest LinkedIn Tumblr

Mcc_meyor_meet_1

ಮಂಗಳೂರು,ಮಾ.16 : ಭಾರತ ಸರಕಾರದ ನಗರಾಭಿವೃದ್ಧಿ ಸಚಿವಾಲಯ ಸ್ವಚ್ಚತಾ ಶ್ರೇಯಾಂಕದಲ್ಲಿ 2013-15 ನೇ ಸಾಲಿಗೆ ಮಂಗಳೂರು ನಗರ ಭಾರತ ದೇಶದಲ್ಲೇ ಮೂರನೇ ಸ್ಥಾನ ಗಳಿಸಿದ್ದು, ನಗರದ ಪಾಲಿಗೆ ಹೆಮ್ಮೆಯ ವಿಚಾರ ಎಂದು ನೂತನ ಮೇಯರ್ ಹರಿನಾಥ್ ತಿಳಿಸಿದರು.

ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ನಗರಾಭಿವೃದ್ಧಿ ಸಚೈವಾಲಯವು ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಬಯಲು ಮಲ ವಿಸರ್ಜನೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದು, ಮಲ ಹೊರುವ ಪದ್ದತಿಯನ್ನು ನಿರ್ಮೂಲನೆಗೊಳಿಸುವುದು, ಘನತ್ಯಾಜ್ಯಗಳ ವಿಲೇವಾರಿ ಮಾಡುವುದು ಹಾಗೂ ಇದಕ್ಕೆ ಪೂರಕವಾಗಿ ವಾತಾವರಣ ನಿರ್ಮಿಸುವ ವಿಷಯಗಳನ್ನು ಆಧರಿಸಿ ದೇಶದ ಒಟ್ಟು 476 ನಗರಗಳನ್ನು ಆಯ್ಕೆ ಮಾಡಿತು. ಅದರಲ್ಲಿ ಮಂಗಳೂರಿಗೆ ಮೂರನೆ ಸ್ವಚ್ಚ ನಗರ ಸ್ಥಾನವೆಂದು ಶ್ರೇಯಾಂಕ ನೀಡಲಾಗಿದೆ ಎಂದು ಅವರು ಹೇಳಿದರು.

Mcc_meyor_meet_2 Mcc_meyor_meet_3 Mcc_meyor_meet_4

ಉಪಮೇಯರ್ ಸುಮಿತ್ರಾ ಕರಿಯ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸದಸ್ಯರಾದ ಶಶಿಧರ್ ಹೆಗ್ಡೆ, ದೀಪಕ್ ಪೂಜಾರಿ ಲ್ಯಾನ್ಸಿ ಲೋಟ್ ಪಿಂಟೋ, ಪ್ರಕಾಶ್ ಸಾಲಿಯಾನ್, ಕೇಶವ ಮರೋಳಿ ಹಾಗೂ ಇತರರು ಉಪಸ್ಥಿತರಿದ್ದರು.

Write A Comment