ಕನ್ನಡ ವಾರ್ತೆಗಳು

ಕುಂದಾಪುರದ ಹಲವೆಡೆ ರೈಲ್ವೇ ಟ್ರ್ಯಾಕ್ ಬಳಿ ಬೆಂಕಿ ಅವಘಡ; ಕಾರಣ ಮಾತ್ರ ನಿಗೂಢ.?

Pinterest LinkedIn Tumblr

ಚಿತ್ರ,ವರದಿ- ಯೋಗೀಶ್ ಕುಂಭಾಸಿ

ಕುಂದಾಪುರ: ತಾಲೂಕಿನ ಹಲವೆಡೆಯಲ್ಲಿ ರೈಲು ಹಳಿಗಳ ಸಮೀಪ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಅಕ್ಕಪಕ್ಕದ ಗೇರು ಫ್ಲ್ಯಾಂಟೇಶನ್,ಮರಮಟ್ಟುಗಳು, ಗಿಡಗಂಟಿಗಳು ಬೆಂಕಿಗೆ ಆಹುತಿಯಾಗಿದ್ದಲ್ಲದೇ ಅಕ್ಕಪಕ್ಕದ ಮನೆಮಂದಿ ಹಾಗೂ ರೈಲು ಪ್ರಯಾಣಿಕರು ಆತಂಕಕ್ಕೀಡಾದ ಘಟನೆ ಶನಿವಾರ ವರದಿಯಾಗಿದೆ.

Udp_Railway Track_Fire Problem (30) Udp_Railway Track_Fire Problem (20) Udp_Railway Track_Fire Problem (31) Udp_Railway Track_Fire Problem (32) Udp_Railway Track_Fire Problem (27) Udp_Railway Track_Fire Problem (19) Udp_Railway Track_Fire Problem (18) Udp_Railway Track_Fire Problem (15) Udp_Railway Track_Fire Problem (16) Udp_Railway Track_Fire Problem (17) Udp_Railway Track_Fire Problem (12) Udp_Railway Track_Fire Problem (14) Udp_Railway Track_Fire Problem (13)  Udp_Railway Track_Fire Problem (10) Udp_Railway Track_Fire Problem (7) Udp_Railway Track_Fire Problem (5) Udp_Railway Track_Fire Problem (6) Udp_Railway Track_Fire Problem (4) Udp_Railway Track_Fire Problem (3) Udp_Railway Track_Fire Problem (1) Udp_Railway Track_Fire Problem (2) Udp_Railway Track_Fire Problem (9) Udp_Railway Track_Fire Problem (21) Udp_Railway Track_Fire Problem (26) Udp_Railway Track_Fire Problem (24) Udp_Railway Track_Fire Problem (25) Udp_Railway Track_Fire Problem (22)

ಬೆಳಿಗ್ಗೆ 10.30……
ಕುಂದಾಪುರ ತಾಲೂಕಿನ ವಕ್ವಾಡಿ ರಸ್ತೆಯ ಹೂವಿನಕೆರೆ ಬ್ರಿಡ್ಜ್ ಸಮೀಪ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಕುಂದಾಪುರ ಅಗ್ನಿಶಾಮಕ ದಳಕ್ಕೆ ಫೋನಾಯಿಸುತ್ತಾರೆ. ಕೂಡಲೇ ಅಗ್ನಿಶಾಮಕದಳ ಸ್ಥಳಕ್ಕೆ ದೌಡಾಯಿಸಿದರೂ ಕೂಡ ಬೆಂಕಿಯ ತೀವೃತೆ ಜಾಸ್ಥಿಯಿದ್ದು ಸ್ಥಳದಲ್ಲಿ ಕುರುಚಲು ಗಿಡಗಳು ಜಾಸ್ಥಿಯಿದ್ದ ಕಾರಣ ಬೆಂಕಿ ಸಮೀಪದಲ್ಲೆಲ್ಲಾ ಆವರಿಸಿ ಪಕ್ಕಡ ನೂರಾರು ಎಕ್ರೆಗಟ್ಟಲೇ ಗೇರು ಫ್ಲ್ಯಾಂಟೇಶನ್ ಒಳಕ್ಕೂ ಹಬ್ಬಿ ಬೆಂಕಿ ಜಾಸ್ಥಿಯಾಗುತ್ತಾ ಬಂದಿದೆ. ಅಗ್ನಿಶಾಮಕ ದಳದವರು ಸತತ 3 ಗಂಟೆ ಕಾರ್ಯಾಚರಣೆ ಮೂಲಕ ಈ ಭಾಗದ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಬೇಳೂರಿನಲ್ಲಿ ಬೆಂಕಿ ಹಾವಳಿ..!
ಹೂವಿನಕೆರೆ ಪರಿಸರದಲ್ಲಿ ಬೆಂಕಿ ಕಾಣಿಸಿಕೊಂಡು ಕಾರ್ಯಾಚರಣೆ ನಡೆಯುತ್ತಿದ್ದ ಬೆನ್ನಲ್ಲೇ ತಾಲೂಕಿನ ತೆಕ್ಕಟ್ಟೆ ಸಮೀಪದ ಬೇಳೂರು ರೈಲು ಹಳಿ ಸಮೀಪವೂ ಬೆಂಕಿ ಬಿದ್ದು ಹಲವು ಮನೆಗಳಿಗೆ ಹಾಗೂ ಮರಮಟ್ಟುಗಳಿಗೆ ಸಮಸ್ಯೆಯಿದೆಯೆಂಬ ಬಗ್ಗೆ ಪುನಃ ಕುಂದಾಪುರ ಅಗ್ನಿಶಾಮಕ ಠಾಣೆಗೆ ಕರೆ ಬಂದಿದ್ದು ಖುದ್ದು ಅಗ್ನಿಶಾಮಕ ಠಾಣಾಧಿಕಾರಿ ಭರತ್ ಕುಮಾರ್ ಅವರು ಇನ್ನೊಂದು ಅಗ್ನಿಶಾಮಕ ದಳ ವಾಹನದಲ್ಲಿ ಸ್ಥಳಕ್ಕೆ ದೌಡಾಯಿಸುತ್ತಾರೆ. ಅಗ್ನಿಶಾಮಕ ಬರುವಷ್ಟರಲ್ಲಿ ಬೇಳೂರು ರೈಲ್ವೇ ಹಳಿ ಸಮೀಪದಲ್ಲಿಯೇ ಕಿಲೋಮೀಟರುಗಟ್ಟಲೇ ಬೆಂಕಿ ಹಬ್ಬುತ್ತಾ ಬಂದು ಸ್ಥಳೀಯ ಈಚಲು ಮರಗಳಿಗೆ ಬೆಂಕಿ ಹಿಡಿದು ಎಲ್ಲರ ಕಣ್ಣೇದುರೆ ಮರ ಸುಟ್ಟುಹೋಗಿತ್ತು. ಇನ್ನು ಈ ಭಾಗದ ಹಲವು ಮನೆಗಳು ಹಾಗೂ ದೈವಸ್ಥಾನಗಳಿಗೂ ಬೆಂಕಿ ವ್ಯಾಪಿಸುವ ಭಯದಲ್ಲಿ ಜನರಿದ್ದು ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದಾಗಿ ಸಂಭವ್ಯ ಅನಾಹುತ ತಪ್ಪಿದಂತಾಗಿದೆ.

ಮಧುವನ-ಅಚ್ಲಾಡಿಯಲ್ಲಿ ಬೆಂಕಿ ಆರ್ಭಟ..!
ಇಲ್ಲಿಂದ ಮುಂದೆ ಕೋಟ ಸಮೀಪದ ಮಧುವನ ಹಾಗೂ ಅಚ್ಲಾಡಿಯಲ್ಲಿಯೂ ರೈಲ್ವೇ ಟ್ರ್ಯಾಕ್ ಸಮೀಪ ಬೆಂಕಿ ವ್ಯಾಪಿಸಿದ್ದು ಸಮೀಪದ ಅಕೇಶಿಯಾ ಮರಗಳು ಧಗದಗನೆ ಉರಿದಿದ್ದಲ್ಲದೇ ಸಮೀಪದ ತೋಟಗಳಿಗೂ ಬೆಂಕಿ ವ್ಯಾಪಿಸಿ ಸಮೀಪದ ಮನೆಯವರಲ್ಲಿ ಆತಂಕವನ್ನುಂಟು ಮಾಡಿತ್ತು. ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ಹತೋಟಿಗೆ ತರುವಲ್ಲಿ ಶ್ರಮಿಸಿದರು. ಬೆಂಕಿಯ ತೀವೃತೆ ಜಾಸ್ಥಿಯಿದ್ದ ಕಾರಣ ಕುಂದಾಪುರದ ಎರಡು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದರು. ಇಲ್ಲಿಗೆ ಸಮೀಪದ ಶಾಂತಿನಗರ, ಎಂ.ಜಿ. ಕಾಲನಿಯ ಸಮೀಪವೂ ಬೆಂಕಿ ಆರ್ಭಟಕ್ಕೆ ಜನ ಕಂಗಾಲಾಗಿದ್ದರು.

ಬೆಂಕಿಗೆ ಕಾರಣವೇನು..?
ರೈಲು ಹಳಿಯ ಪಕ್ಕವೇ ವಿವಿದೆಡೆ ಬೆಂಕಿ ಅನಾಹುತ ನಡೆದಿರುವುದಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲವಾದರೂ ಕೂಡ ಮೇಲ್ನೋಟಕ್ಕೆ ರೈಲ್ವೆಗೆ ಸಂಬಂದಪಟ್ಟವರೇ ಈ ಬೆಂಕಿ ಹಾಕಿದ್ದಾರೆಂದು ಸ್ಥಳಿಯರು ಆರೋಪಿಸಿದ್ದಾರೆ. ರೈಲು ಹಳಿಗಳ ಸಮೀಪದಲ್ಲಿ ಕುರುಚಲುಗಿಡ ಹಾಗೂ ಪೊದೆಗಳು ಬೆಳೆದಿರುವ ಕಾರಣ ಅದನ್ನು ಶುಚಿಗೊಳಿಸಲು ಈ ಕ್ರಮಕ್ಕೆ ಮುಂದಾಗಿರಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಆಕಸ್ಮಿಕ ಬೆಂಕಿಯಾಗಿದ್ದರೇ ಯಾವುದೋ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರವೇ ಬೆಂಕಿ ಕಾಣಿಸಿಕೊಳ್ಳಬೇಕಿತ್ತು ಆದರೇ ಶನಿವಾರ ಈ ಬೆಂಕಿ ಪ್ರಕರಣವು ವಕ್ವಾಡಿಯ ಹೂವಿನಕೆರೆಯಿಂದ ಮೊದಲ್ಘೊಂಡು ಮಧುವನ (12-15 ಕಿ.ಮೀ ದೂರ) ತನಕವು ಕಂಡುಬಂದಿದೆ. ಅಲ್ಲದೇ ಎಲ್ಲೆಡೆಯು ರೈಲು ಹಳಿ ಸಮೀಪವೇ ಬೆಂಕಿ ಕಾಣಿಸಿಕೊಂಡಿರುವುದು ಜನರ ಆರೋಪವನ್ನು ಸ್ಪಷ್ಟೀಕರಿಸಿದೆ.

Udp_Railway Track_Fire Problem (8) Udp_Railway Track_Fire Problem (23) Udp_Railway Track_Fire Problem (28) Udp_Railway Track_Fire Problem (29) Udp_Railway Track_Fire Problem (11)

(ಕುಂದಾಪುರ ಅಗ್ನಿಶಾಮಕ ದಳದವರ ಕಾರ್ಯಾಚರಣೆ)

ಸಾರ್ವಜನಿಕರು ಫುಲ್ ಗರಂ
ಕುಂದಾಪುರ ತಾಲೂಕಿನ ಹಲವೆಡೆ ರೈಲು ಹಳಿಗಳ ಸಮೀಪವೇ ಬೆಂಕಿ ಅವಘಡಗಳು ಸಂಭವಿಸಿದ್ದು ಇದಕ್ಕೆ ರೈಲ್ವೇ ಇಲಾಖೆಗಯೇ ಕಾರಣ ಎಂದು ಜನರು ಆರೋಪಿಸಿದ್ದಾರೆ. ಟ್ರ್ಯಾಕ್ ಸಮೀಪ ಶುಚಿಗೊಳಿಸುವ ಮಂದಿ ಇಲ್ಲಿನ ಪೊದೆಗೆ ಬೆಂಕಿ ಹಾಕಿರುವುದನ್ನು ಕಂಡ ಮಹಿಳೆಯೋರ್ವರು ಅವರನ್ನು ತಡೆಯಲು ಪ್ರಯತ್ನಿಸಿದರೂ ಕೂಡ ಅವರು ಮಹಿಳೆ ಮಾತಿಗೆ ಕ್ಯಾರೇ ಅನ್ನದೇ ಬೆಂಕಿ ಹಾಕಿಹೋಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಬೇಳೂರಿನ ಮಹಿಳೆಯೋರ್ವರು ಸುದ್ದಿಗಾರರೊಂದಿಗೆ ತಮ್ಮ ಅಳನ್ನು ತೋಡಿಕೊಂಡು ಈ ಭಾಗದಲ್ಲಿ ಬದುಕಲು ಹೆದರಬೇಕಾಗಿದೆ ಎಂದರು. ಇನ್ನು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ರೈಲುಹಳಿಗಳ ಪಕ್ಕವೇ ಇಷ್ಟೆಲ್ಲಾ ಬೆಂಕಿ ಅವಘಡ ನಡೆದರೂ ಸಂಬಂದಪಟ್ಟ ರೈಲು ಇಲಾಖೆಯ ಯಾರೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸ್ಥಳಿಯರಲ್ಲಿ ಆಕ್ರೋಷವನ್ನುಂಟು ಮಾಡಿದೆ.

ರೈಲು ಆರ್.ಎಂ.ವಿ. ಸಿಬ್ಬಂದಿಗಳ ಉಡಾಫೆ
ಬೇಳೂರು ಸಮೀಪ ಬೆಂಕಿ ನಂದಿಸುತ್ತಾ ಉರಿಬಿಸಿಲಿನಲ್ಲಿ ಸ್ಥಳೀಯರು ಹೈರಾಣಾಗಿದ್ದ ಸಂದರ್ಭದಲ್ಲಿಯೇ ಉಡುಪಿ ಕಡೆಯಿಂದ ಆರ್.ಎಂ.ವಿ. (ರೈಲ್ವೇ ಮೆಂಟೇನೆನ್ಸ್ ವೆಹಿಕಲ್) ಆಗಮಿಸಿದ್ದು ಜನರನ್ನು ನೋಡಿ ಎಂಜಿನ್ ನಿಲ್ಲಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಜನರು ಅವರ ಬಳಿ ಸಮಸ್ಯೆ ಹೇಳಿಕೊಂಡಾಗ ‘ಇದಕ್ಕೂ ನಮಗೂ ಸಂಬಂದವಿಲ್ಲ, ಇಲ್ಲಿನ ಜನರೇ ಯಾರಾದರೂ ಹಾಕಿರಬಹುದು, ನಮ್ಮ ಬಳಿ ಏನು ಕೇಳಬೇಡಿ’ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಪತ್ರಕರ್ತರಿಗೂ ತಮ್ಮ ಕೆಲಸ ಮಾಡದಂತೆ ತಾಕೀತು ಹಾಕಿದ ಸಿಬ್ಬಂದಿಗಳು ಎಲ್ಲರ ಬಳಿಯೂ ಏಕವಚನದಲ್ಲಿಯೇ ಮಾತನಾಡಿ ಅಹಂ ಪ್ರದರ್ಶಿಸಿದ್ದಾರೆ. ಕೂಡಲೇ ಸ್ಥಳೀಯರು ಇದಕ್ಕೆ ಆಕ್ರೋಷ ವ್ಯಕ್ತಪಡಿಸಿದಾಗ ಎಂಜಿನ್ ಮುಂದೆ ಸಾಗಿದೆ.

ಅಗ್ನಿಶಾಮಕ ದಳದ ಹರಸಾಹಸ ಕಾರ್ಯಾಚರಣೆ
ಒಂದೆಡೆ ಗಾಳಿ, ಇನ್ನೊಂದೆಡೆ ಉರಿಬಿಸಿಲಿಗೆ ಬೆಂಕಿ ತೀವ್ರತೆ ಜಾಸ್ಥಿಯಾಗುತ್ತಿದ್ದರೇ ಮತ್ತೊಂದೆಡೆ ಕೆಲವು ಭಾಗಗಳಿಗೆ ಅಗ್ನಿಶಾಮಕ ವಾಹನ ಹೋಗಲು ಅಸಾಧ್ಯವಾಗಿರುವ ಕಾರಣ ಬೆಂಕಿ ನಂದಿಸುವ ಕಾರ್ಯ ನಿಜಕ್ಕೂ ಇಂದಿನ ಮಟ್ಟಿಗೆ ದೊಡ್ಡ ಪ್ರಮಾಣದ ಸವಾಲಾಗಿತ್ತು. ಬೆಳಿಗ್ಗೆನಿಂದ ಸಂಜೆವರೆಗೂ ನಡೆದ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಕುಂದಾಪುರ ಅಗ್ನಿಶಾಮಕ ದಳದ ಕಾರ್ಯವೈಖರಿ ಜನರ ಮೆಚ್ಚುಗೆಗೆ ಪಾತ್ರವಾಯಿತು. ಉಡುಪಿಯ ಅಗ್ನಿಶಾಮಕ ಸಿಬ್ಬಂದಿಗಳು ಮಧುವನ ಭಾಗದಲ್ಲಿ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿದರು. ಒಟ್ಟು ನಾಲ್ಕೈದು ಕಡೆಗಳಲ್ಲಿ 6 ಗಂಟೆ ಸತತ ನಡೆದ ಕಾರ್ಯಾಚರಣೆಯಲ್ಲಿ ಕುಂದಾಪುರದ 2 ಹಾಗೂ ಉಡುಪಿಯ 1 ವಾಹನವಿತ್ತು. ಒಟ್ಟು 5 ಕ್ಕೂ ಅಧಿಕ ವಾಹನ ನೀರು ಕಾರ್ಯಾಚರಣೆಗೆ ಬಳಸಲ್ಪಟ್ಟಿತ್ತು.

 

Write A Comment