ರಾಷ್ಟ್ರೀಯ

ಮಲ್ಯ ಭಾರತ ಬಿಡಲು ಅವಕಾಶ ಕೊಟ್ಟಿದ್ದು ಯಾಕೆ: ಮೋದಿಗೆ ಕೇಜ್ರಿವಾಲ್ ಪ್ರಶ್ನೆ

Pinterest LinkedIn Tumblr

Arvind_Keijriwal

ನವದೆಹಲಿ; ಮದ್ಯದ ದೊರೆ ವಿಜಯ್ ಮಲ್ಯ ಅವರು ವಿದೇಶಕ್ಕೆ ಹಾರಲು ಯಾವ ಕಾರಣಕ್ಕೆ ಅವಕಾಶಕೊಟ್ಟಿರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಕುರಿತಂತೆ ಕೂಡಲೇ ಪ್ರತಿಕ್ರಿಯೆ ನೀಡಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.

ಈ ಕುರಿತಂತೆ ಟ್ಟಿಟರ್ ನಲ್ಲಿ ಪ್ರಶ್ನೆ ಕೇಳಿರುವ ಅವರು, ಮಲ್ಯ ವಿವಾದಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ನೇರವಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವರದಿಯನ್ನು ನೀಡಿದ್ದಾರೆ. ಮೇಲಿನ ಅಧಿಕಾರಿಗಳ ಸಮ್ಮತಿಯಿಲ್ಲದೆಯೇ ವಿಜಯ್ ಮಲ್ಯ ವಿದೇಶಕ್ಕೆ ಹಾರಲು ಸಿಬಿಐ ಅನುವು ಮಾಡಿಕೊಡುವುದಿಲ್ಲ. ಹಾಗೆಂದಾದ ಮೇಲೆ ಮಲ್ಯ ವಿಜಯ್ ಮಲ್ಯ ವಿದೇಶಕ್ಕೆ ಹಾರಲು ಯಾವ ಕಾರಣಕ್ಕೆ ಅನುಮತಿ ನೀಡಿದಿರಿ ಎಂದು ಮೋದಿಯವರಿ ಪ್ರಶ್ನೆ ಕೇಳಿದ್ದಾರೆ. ಅಲ್ಲದೆ, ಈ ಕುರಿತಂತೆ ಕೂಡಲೇ ಮೋದಿಯವರು ಉತ್ತರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ವಿಜಯ್ ಮಲ್ಯ ವಿದೇಶ ಹಾರಿರುವ ಪ್ರಕರಣ ಕಳೆದೆರಡು ದಿನಗಳಿಂದಲೂ ಸಂಸತ್ತಿನಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ ಪ್ರತಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರಿ ಮೋದಿ ಸರ್ಕಾರ ವಿರುದ್ಧ ಕಿಡಿಕಾರುತ್ತಿವೆ. ಈ ಮಧ್ಯೆ ನಿನ್ನೆಯಷ್ಟೇ ಜಾರಿ ನಿರ್ದೇಶನಾಲಯವು ಮಾರ್ಚ್ 18ರೊಳಗೆ ವಿಚಾರಣೆಗೆ ಹಾಜರಾಗುವಂತೆ ಮಲ್ಯ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

Write A Comment