ಕನ್ನಡ ವಾರ್ತೆಗಳು

ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರ ಸೆರೆ : ಆರೋಪಿಗಳಿಂದ ಮೊಬೈಲ್, ತಲವಾರು ಹಾಗೂ ಕಾರು ವಶ

Pinterest LinkedIn Tumblr

Hakim_Amin_arest_1

ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ನಗರದ ಕೂಳೂರು ರಿಲಯನ್ಸ್ ಪೆಟ್ರೋಲ್ ಪಂಪ್ ಬಳಿಯಲ್ಲಿ ವ್ಯಕ್ತಿಯೊಬ್ಬನ ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳಿಂದ 3 ತಲವಾರು ಹಾಗೂ ಮಾರುತಿ ಸ್ವಿಪ್ಟ್ ಕಾರನ್ನು ವಶಪಡಿಸಿಕೊಂಡಿದ್ದು, ಈ ಮೂಲಕ ನಗರದಲ್ಲಿ ನಡೆಯಲಿದ್ದ ಇನ್ನೊಂದು ಕೊಲೆ ಸಂಚನ್ನು ವಿಫಲಗೊಳಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಕಾವೂರು ಸಮೀಪದ ಶಾಂತಿನಗರ ನಿವಾಸಿಗಳಾದ ಮೊಹಮ್ಮದ್ ಅಮೀನ್ (21) ಹಾಗೂ ಅಬ್ದುಲ್ ಹಕೀಂ 26) ಎಂದು ಹೆಸರಿಸಲಾಗಿದೆ. ಬಂಧಿತರಿಂದ 2 ಮೊಬೈಲ್ ಫೋನ್ ಗಳು, 3 ತಲವಾರುಗಳು, ಹಾಗೂ ಮಾರುತಿ ಸ್ವಿಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ದಿನಾಂಕ: 01-03-2016 ರಂದು ಸಂಜೆ ಮಂಗಳೂರು ನಗರದ ರಿಲಾಯೆನ್ಸ್ ಪೆಟ್ರೋಲ್ ಪಂಪ್ ಬಳಿಯಲ್ಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಯೊಬ್ಬನ ಕೊಲೆಗೆ ಸಂಚು ರೂಪಿಸುತ್ತಿದ್ದ ಬಗ್ಗೆ ಮಂಗಳೂರು ಸಿಸಿಬಿ ನಿರೀಕ್ಷಕರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಸದ್ರಿ ಸ್ಥಳಕ್ಕೆ ದಾಳಿಮಾಡಿ ಸ್ಥಳದಲ್ಲಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಅಬ್ದುಲ್ ಹಕೀಂ ಎಂಬಾತನು ಈ ಹಿಂದೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಹಿಂದೂಸ್ಥಾನ ಭಾವ ಬಿಲ್ಡರ್ ಕಛೇರಿಯಲ್ಲಿ ಹಫ್ತಾ ಹಣ ನೀಡದಕ್ಕೆ ಇತರ 2-3 ಆರೋಪಿಗಳೊಂದಿಗೆ ಸೇರಿ ಕಛೇರಿಯನ್ನು ದ್ವಂಸ ಮಾಡಿದ ಪ್ರಕರಣ ಹಾಗೂ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಮೊಹಮ್ಮದ್ ಅಮೀನ್ ಎಂಬಾತನ ಮೇಲೆ ಈ ಹಿಂದೆ ಕಾವೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿತ್ತು.

ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Write A Comment