ಮಂಗಳೂರು,ಫೆ.29 : ಮಂಗಳೂರಿನ ಎಂ.ಜಿ ರಸ್ತೆಯ ಐಬ್ರೋಸ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡ ಪ್ರಸಿದ್ಧ ಝ್ಯೂಸ್ ಫಿಟ್ನೆಸ್ ಕ್ಲಬ್ ನ 2 ನೇ ಶಾಖೆಯ ಉದ್ಘಾಟನೆ ್ಯ ಶುಭಾಸಮಾರಂಭದ ವೇಳೆ ಜೀರೋ ಗ್ರಾವಿಟಿ ತಂಡದಿಂದ ಮೈನವಿರೇಳಿಸುವ ಬೈಕ್ ಸ್ಟಂಟ್ ನಡೆಯಿತು.
ಜೀರೋ ಗ್ರಾವಿಟಿ ತಂಡದಿಂದ ಸುಮಾರು20 ಕ್ಕೂ ಅಧಿಕ ಸ್ಟಂಟ್ ಮ್ಯಾನ್ ಗಳು ತಮ್ಮ ಕುಶಲತೆಯ ಮೈನವಿರೇಳಿಸುವ ಬೈಕ್ ಸ್ಟಂಟ್ ಪ್ರದರ್ಶಿಸುವ ಮೂಲಕ ಜನರನ್ನು ರಂಜಿಸಿದ್ದರು.
ಸುಮಾರು 9000 ಚದರ ಅಡಿಗಳಲ್ಲಿ ಹರಡಿಕೊಂಡಿರುವ ಈ ಝ್ಯೂಸ್ ಫಿಟ್ನೆಸ್ ಕ್ಲಬ್ ಮಂಗಳೂರಿನ ಅತಿದೊಡ್ಡ ಫಿಟ್ನೆಸ್ ಕ್ಲಬ್ ಎನಿಸಿಕೊಂಡಿದೆ. ಇಲ್ಲಿ ಯೋಗ, ಮಾರ್ಷಲ್ ಆಟ್ರ್ಸ್, ವೈಯಕ್ತಿಕ ತರಬೇತಿ ಮೊದಲಾದ ಹಲವು ಸೌಲಭ್ಯಗಲ್ಲಿ ಜನತೆಗೆ ದೊರಕಲಿದೆ.