ಅಂತರಾಷ್ಟ್ರೀಯ

88ನೇ ಆಸ್ಕರ್ ಪ್ರಶಸ್ತಿ: 8 ಪ್ರಶಸ್ತಿ ಬಾಚಿಕೊಂಡ ‘ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್’ ಚಿತ್ರ; ಅಲಿಶಿಯಾ ವಿಕಂದರ್ ಗೆ ಉತ್ತಮ ಪೋಷಕ ನಟಿ ಪ್ರಶಸ್ತಿ

Pinterest LinkedIn Tumblr

Oscar-Awards

ಲಾಸ್ ಏಂಜಲೀಸ್: ಪ್ರತಿಷ್ಠಿತ 88ನೇ ಆಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ಸೋಮವಾರ ಆರಂಭವಾಗಿದ್ದು, ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ ಚಿತ್ರ ಬರೋಬ್ಬರಿ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಹಾಲಿವುಡ್ ನ ಅದ್ದೂರಿ ಸಮಾರಂಭದಲ್ಲಿ ಭಾರತೀಯ ಬೆಡಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ ‘ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್’ ಚಿತ್ರದ ತಂಡ ಸಂತಸದಲ್ಲಿ ಮಿಂದೇಳುತ್ತಿದ್ದು, ಈ ವರೆಗೂ 8 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಮ್ಯಾಡ್ ಮ್ಯಾಕ್ಸ್ ಫ್ಯೂರಿ ಸಿನಿಮಾ ಖ್ಯಾತ ನಿರ್ದೇಶಕ ಜಾರ್ಜ್ ಮಿಲ್ಲರ್ ಅವರು ನಿರ್ದೇಶಿಸಿದ್ದು, ಉತ್ತಮ ಮೇಕಪ್ ಮತ್ತು ಹೇರ್ ಸ್ಟೈಲ್, ಉತ್ತಮ ವಸ್ತ್ರ ವಿನ್ಯಾಸ ಉತ್ತಮ ಪ್ರೊಡಕ್ಷನ್ ಹಾಗೂ ಡಿಸೈನ್ ಸೇರಿ 8 ವಿಭಾಗಗಳಲ್ಲಿ ಪ್ರಶಸ್ತಿಗಳು ಈ ಚಿತ್ರಕ್ಕೆ ದೊರೆತಿದೆ.

ಪ್ರಶಸ್ತಿಗಳ ಪಟ್ಟಿ ಇಂತಿದೆ
ಆಮಿ ಅತ್ಯುತ್ತಮ ಸಾಕ್ಷ್ಯಚಿತ್ರ
ಇನ್ ಸೈಡ್ ಔಟ್ ಅತ್ಯುತ್ತಮ ಆ್ಯನಿಮೇಟೆಡ್ ಸಿನಿಮಾಗಾಗಿ ನಿರ್ಮಾಪಕ ಜೋನಸ್ ಗೆ ಪ್ರಶಸ್ತಿ
ಅತ್ಯುತ್ತಮ ಆ್ಯನಿಮೇಟೆಡ್ ಕಿರು ಚಿತ್ರ ಬಿಯರ್ ಸ್ಟೋರಿ
ದಿ ಡ್ಯಾನಿಶ್ ಗರ್ಲ್ ಸಿನಿಮಾದ ನಟನೆಗಾಗಿ ಅಲಿಶಿಯಾ ವಿಕಂದರ್ ಗೆ ಉತ್ತಮ ಪೋಷಕ ನಟಿ ಪ್ರಶಸ್ತಿ
ವಸ್ತ್ರ ವಿನ್ಯಾಸಕ್ಕಾಗಿ ಜೆನ್ನಿ ಬೆವನ್ ಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ
ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ ಚಿತ್ರದಉತ್ತಮ ಸಂಕಲನಕ್ಕಾಗಿ ಮಾರ್ಗರೇಟ್ ಸಿಕ್ಸಲ್ ಗೆ ಪ್ರಶಸ್ತಿ
ದಿ ರೆವೆನೆಂಟ್ ಚಿತ್ರದ ಉತ್ತಮ ಛಾಯಾಗ್ರಹಣಕ್ಕಾಗಿ ಇಮ್ಯಾನುಯಲ್ ಗೆ ಪ್ರಶಸ್ತಿ
ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ ಚಿತ್ರದ ಉತ್ತಮ ಸೌಂಡ್ ಎಡಿಟಿಂಗ್ ಗಾಗಿ ಮಾರ್ಕ್ ಮಾಂಗಿನಿ ಮತ್ತು ಡೇವಿಡ್ ವೈಟ್ ಗೆ ಪ್ರಶಸ್ತಿ
ಬೆಸ್ಟ್ ಒರಿಜಿನಲ್ ಸ್ಕ್ರೀನ್ ಪ್ಲೇಗೆ ಜೋಶ್ ಸಿಂಗರ್ ಗೆ ಪ್ರಶಸ್ತಿ
ಸ್ಪಾಟ್ ಲೈಟ್ ಸಿನಿಮಾದ ಚಿತ್ರಕಥೆಗಾಗಿ ಆಸ್ಕರ್ ಪ್ರಶಸ್ತಿ
ಮ್ಯಾಡ್ ಮ್ಯಾಕ್ಸ್ ಫ್ಯೂರಿ ಚಿತ್ರದ ಉತ್ತಮ ಸೌಂಡ್ ಮಿಕ್ಸಿಂಗ್ ಗಾಗಿ ಕ್ರಿಸ್ ಜಂಕೀನ್ಸ್ ಗೆ ಪ್ರಶಸ್ತಿ
ಎಕ್ಸ್ ಮಕೀನಾ ಚಿತ್ರದ ಬೆಸ್ಟ್ ವಿಶ್ಯುಯಲ್ ಎಫೆಕ್ಟ್ ಗಾಗಿ ವೈಟ್ ಹರ್ಟ್ಸ್ ಗೆ ಪ್ರಶಸ್ತಿ

Write A Comment