ಮಂಗಳೂರು : ದೋಣಿಗಳನ್ನು ಸಾಲು ಸಾಲಾಗಿಟ್ಟು ಅದರ ಮೆಲೆ ಹಲಗೆಯನ್ನಿಟ್ಟು, ತಾತ್ಕಾಲಿಕ ಸೇತುವೆಯನ್ನಾಗಿ ಮಾಡಿ ಜನರು ನದಿ ದಾಟ್ತಾರೆ, ಆ ಮೂಲಕ ಹುತಾತ್ಮರಾದ ಮುಸ್ಲಿಂ ಸಂತರ ಉರೂಸ್ ಗೆ ತೆರಳುತ್ತಾರೆ. ಹೌದು ಅಡ್ಯಾರ್ ಕಣ್ಣೂರಿನ ಬದ್ರಿಯಾ ಜುಮಾ ಮಸಿದಿಗೊಳಪಟ್ಟ ನೇತ್ರಾವತಿ ನದಿಯ ಮದ್ಯ ಭಾಗದ (ನಡುಪಳ್ಳಿ) ರಹ್ಮಾನಿಯ ಮಸ್ಜಿದ್ ವಠಾರದ ದರ್ಗಾದಲ್ಲಿ ಅಂತ್ಯ ವಿಶ್ರಮ ಹೊಂದಿರುವ ವಲಿಯುಲ್ಲಾಹ್(ರ.ಅ) ರವರ ಪುಣ್ಯ ಸ್ಮರಣೆಗಾಗಿ ತೆರಳಿ, ಜಾತಿ ಬೇಧ ಮರೆತು ಪ್ರಾರ್ಥನೆ ಸಲ್ಲಿಸುತ್ತಾರೆ.
ಹಲವು ಕರಾಮತ್ ಗಳಿಂದ ಪುನೀತಗೊಂಡ ಈ ಧಾರ್ಮಿಕ ತಾಣವು ಈ ಪ್ರದೇಶದ ಜನರ ಮನದಾಳದಲ್ಲಿ ಭಕ್ತಿ ಹಾಗೂ ಮಹತ್ವದ್ದಾಗಿದೆ. ಜಾತಿ ಬೇಧ ಮರೆತು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಇಲ್ಲಿನ ಜನರು ವಿಶೇಷವಾಗಿ ಕೃಷಿಕರು, ಮಳೆ ಬಾರದೇ ಕ್ಷಾಮವುಂಟಾದಾಗ ಜಾತಿ ಬೇಧ ಮರೆತು, ಇಲ್ಲಿ ಸೇರಿ ಬೆಲ್ಲಗಂಜಿ ಮಾಡಿ ವಿತರಿಸಿ, ಮಳೆಗಾಗಿ ಪ್ರಾರ್ಥಿಸುವಂತಹ ರೂಢಿ ಬೆಳೆಸಿದ್ದು, ಪ್ರಾರ್ಥಿಸಿ ಹಿಂತಿರುಗುವಾಗಲೇ ಧಾರಾಕಾರ ಮಳೆ ಸುರಿದ ಅದೆಷ್ಟೋ ಉಧಾರಣೆಗಳು ಇಂದಿಗೂ ಪ್ರಚಲಿತದಲ್ಲಿದೆ.
6ನೇ ಶತಮಾನದಲ್ಲಿ ಶಾಂತಿಯ ಧರ್ಮವಾದ ಇಸ್ಲಾಂ ಪ್ರಚಾರಾಕ್ಕಾಗಿ ದೇಶ ಸಂಚಾರಕ್ಕೆಂದು ಹೊರಟು ಇರಾನ್ ದೇಶದಿಂದ ಭಾರತಕ್ಕೆ ತಲುಪಿದ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ (ರ) ಹಾಗೂ ಅವರ ಶಿಷ್ಯ ವರ್ಗ ಬಂಟ್ವಾಳದ ಅಜಿಲಮೊಗರು, ಎಂಬಲ್ಲಿಗೆ ಬಂದು ಅನೇಕ ವರ್ಷಳ ಕಾಲ ಇಸ್ಲಾಂ ಧರ್ಮ ಪ್ರಚಾರ ಕೈಗೊಂಡರು. ಅಜಿಲಮೊಗರು, ವಲವೂರು ಪೊಳಲಿ ಸಹಿತ ದ.ಕ ಜಿಲ್ಲೆಯ ೭ ಕಡೆ ಮಸಈದಿಯನ್ನು ಕೂಡ ಸ್ಥಾಪಿಸಿದ್ರು. ಅಂತಹ ಮಸೀದಿಗಳ ಪೈಕಿ ಅಡ್ಯಾರ್ ಕಣ್ಣೂರು ನೇತ್ರಾವತಿ ನದಿ ಮದ್ಯ ಭಾಗದ ರಹ್ಮಾನಿಯಾ ಮಸೀದಿಯು ಒಂದಾಗಿದೆ. ಹಿಜರಿ ೬ನೇ ಶತಮಾನದಲ್ಲಿ ಈ ಮಸಿದಿಯ ನಿರ್ಮಾಣವಾಗಿದ್ದು, ಪುಟ್ಟ ದ್ವೀಪದೋಪಾದಿಯಲ್ಲಿ ಕಾಣುವ ಈ ಮಸೀದಿಯು ಅಂದು, ಅಳಪೆ, ಕಂಕನಾಡಿ, ಬಜಾಲು, ನಂತೂರು, ಹರೇಕಳ, ಪಾವೂರು, ಅಡ್ಯಾರ್, ಕಣ್ಣೂರು ಮುಂತಾದ ಪ್ರದೇಶಗಳ ಧಾರ್ಮಿಕ ಕೇಂದ್ರವಾಗಿತ್ತು. ೧೯೨೩ನೇ ಇಸವಿಯಲ್ಲಿ ಬಂದ ಭೀಕರ ನೆರೆಗೆ ಸಿಲುಕಿ ಮಸೀದಿಯ ಕಟ್ಟಡ ಹಾನಿಗೊಳಗಾದ ಬಳಿಕ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂತನ ಬದ್ರಿಯಾ ಜುಮಾ ಮಸೀದಿ ನಿರ್ಮಾನಗೊಂಡಿತು.
ಶತಮಾನಗಳ ಹಿಂದೆ ತಮ್ಮ ಆಧ್ಯಾತ್ಮಿಕ ಮಾರ್ಗದ ಮೂಲಕ ಜನಸೇವೆಗಿಳಿದು, ಹುತಾತ್ಮರಾದ ಮೂರು ಶುಹದಾ ಮಹಾತ್ಮಾರುಗಳ ದರ್ಗಾ ಇಲ್ಲಿದೆ. ಹಿಂದೆ ಕಡಲ ತೀರದಲ್ಲಿ ಸಂಭವಿಸಿದ ಒಂದು ಘಟನೆ ಯ ನಿಮಿತ್ತ ಹುತಾತ್ಮರಾದ 2ಸಹೋದರರು ಹಾಗೂ ಒಬ್ಬಳು ಸಹೊದರಿಯ ಪವಿತ್ರ ಮೃತದೇಹಗಳು ಪಶ್ಚಿಮದಿಂದ ಪೂರ್ವಕ್ಕೆ ನೇರವಾಗಿ ನದಿಯಲ್ಲಿ ತೇಲಿಬಂತು. ಹಲವು ಸಿದ್ಧಿಗಳೊಂದಿಗೆ ಗೋಚರಿಸಿದ ಈ ಮೃತದೇಹಗಳನ್ನು ಅಂದಿನ ಹಿರಿಯ ಸಜ್ಜನ ಧಾರ್ಮಿಕ ಮುಖಂಡರು ಸೇರಿ್ ಮಸಿದಿಯ ಬಲಭಾಗದಲ್ಲಿ ದಫನ ಮಾಡಿದರು.ಹಿಂದಿನಿಂದಲೂ ವರ್ಷಂಪ್ರತಿ ಆಚರಿಸುತ್ತಿರುವ ಉರೂಸ್ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಈ ಮಹಾನುಭಾವರ ಸ್ಮರಣೆಗೋಸ್ಕರೆ ಆಚರಿಸಲಾಗುತ್ತಿದೆ.
ಜಾತಿ ಮತ ಬೇಧವಿಲ್ಲದೇ ತಮ್ಮ ಇಷ್ಟಾರ್ಥ ಪೂರೈಸಿಕೊಳ್ಳಲು ಲಕ್ಶಾಂತರ ಭಕ್ತರು ಇಲ್ಲಿ ಸಂದರ್ಶನ ಮಾಡಿ ಹರಕೆ ಸಲ್ಲಿಸುತ್ತಾರೆ. ಇಲ್ಲಿಯ ಉರೂಸ್ ಸಮಾರಂಭದಲ್ಲಿ ಬೆಲ್ಲಗಂಜಿ ಪ್ರಸಾದ ವಿಶೇಷತೆಯನ್ನು ಹೊಂದಿದ್ದು, ರೋಗ ರುಜಿನ, ಸುಖ ದುಖ ಇತ್ಯಾದಿ ಕಾರ್ಯಗಳಿಗೆ ಪರಿಹಾರ ಹುಡುಕಿ ಬರುವಂತಹ ಶಾಂತಿ ಸಮಾಧಾನದ ಪುಣ್ಯ ಕ್ಶೇತ್ರ ಇದಾಗಿದೆ ಎನ್ನುತ್ತಾರೆ ಬದ್ರಿಯಾ ಮಸಿದಿಯ ಅಧ್ಯಕ್ಷ ಅಬ್ದುಲ್ ಖಾದರ್.
ಸುಮಾರು ೯೦೦ ವರ್ಷಗಳ ಇತಿಹಾಸವಿರುವ ಈ ಮಸಿದಿಯಲ್ಲಿ ಪ್ರತಿ ವರ್ಷ ಉರೂಸ್ ಸಮಾರಂಭಕ್ಕೆ ಲಕ್ಷಾಂತರ ಜನರು ಆಗಮಿಸುತ್ತಿದ್ದು, ದೋಣಿಯ ಮೂಲಕವೇ ಈ ದರ್ಗಾವನ್ನು ಹಾದುಹೋಗಬೇಕಿತ್ತು, ಆದ್ರೆ ಇದುವರೆಗೂ ಇಲ್ಲಿ ಯಾವುದೇ ದೋಣಿ ಅನಾಹುತ ಸಂಭವಿಸಿಲ್ಲ ಅನ್ನೊದು ವಿಶೇಷವಾಗಿದೆ. ಹೆಚ್ಚು ಜನರನ್ನು ದೋಣಿಯಲ್ಲಿ ಸಾಗಿಸುವುದು ಬಹಳ ಕಷ್ಟ ಮಾತ್ರವಲ್ಲ ಇದರಿಂದ ಅನಾಹುತವುಂಟಾಗುವ ,ಸಂಭವ ವಿದೆ. ಹೀಗಾಗಿ ದೋಣಿಗಳನ್ನೇ ಸೇತುವೆಯನ್ನಾಗಿ ಮಾಡಿ ಜನರು ಹಾದುಹೋಗುವಂತೆ ಮಾಡಲಾಗಿದೆ. ಕಳೆದ ಬಾರಿ 63 ದೋಣಿಗಳನ್ನಇಟ್ಟು ಸೇತುವೆ ಮಾಡಿದ್ರೆ ಈ ಬಾರಿ 64 ದೋಣಿಗಳನ್ನು ಜೋಡಿಸಿ ಸೇತುವೆ ಮಾದಲಾಗಿದೆ ಎಂದು ಹೇಳ್ತಾರೆ ಬದ್ರಿಯ ಹಯಾತುಲ್ ಮದರಸದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್.
ವರ್ಷಕ್ಕೆ ಲಕ್ಷಕ್ಕೂ ಅಧಿಕ ಜನರು ಸೇರುವ, ಜನರ ಇಷ್ಟಾರ್ಥ ಈಡೇರುವ ಈ ಮಸೀದಿಯು ಮೊದಲು 1 ಎಕ್ರೆ ಜಾಗವನ್ನು ಹೊಂದಿತ್ತು, ಆದ್ರೆ, ಇದಿಗ ನದಿಯ ನೀರಿನ ಸೆಳೆತದಿಂದಾಗಿ ಮಣ್ಣಿನ ಕೊರೆತವುಂಟಾಗಿ, ಸುಮಾರು ೫೦ಸೆಂಟ್ಸ್ ಜಾಗ ನೀರು ಪಾಲಾಗಿದೆ. ಸರಕಾರದಿಂದ ಹಾಕಲಾದ ತಾತ್ಕಾಲಿಕ ತಡೆಗೋಡೆಗಳು ನೀರು ಪಾಲಾಗುತ್ತಿವೆ.ತಾತ್ಕಾಲಿಕ ಪರಿಹಾರಗಳನ್ನು ನೀಡುವ ಬದಲು ಶಾಶ್ವತ ಪರಿಹಾರ ಒದಗಿಸುವಂತೆ, ಸೇತುವೆ ನಿರ್ಮಿಸುವಂತೆ ಈಗಾಗಲೆ ಶಾಸಕರು, ಸಂಸದರ ಬಳಿ ವಿನಂತಿಸಿಲಾಗಿದೆ, ಆದರೆ ಇನ್ನು ಕೂಡ ಶಾಶ್ವತ ಪರಿಹಾರ ಸಿಕ್ಕಿಲ್ಲ.ಇನ್ನಾದ್ರು ಇಂತಹ ಪವಿತ್ರ ಸ್ಥಳದ ಸಂರಕ್ಷಣೆಯಾಗಲಿ, ಈ ಬಗ್ಗೆ ಶಾಸಕರು, ಸಂಸದರು, ಮುಖ್ಯಮಂತ್ರಿಗಳು ಗಮನ ಹರಿಸಲಿ ಎಂಬ ಆಶಯ ನಮ್ಮದು ಎನ್ನುತ್ತಾರೆ ಅಬ್ದುಲ್ ಹಮೀದ್.