ಕನ್ನಡ ವಾರ್ತೆಗಳು

ನ್ಯಾಯಾಲಯಕ್ಕೆ ಹಾಜರಾಗದೇ ತೆಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ಅಭಿಯಾನ : 10 ಆರೋಪಿಗಳು ಅಂದರ್

Pinterest LinkedIn Tumblr

ಮಂಗಳೂರು : ನ್ಯಾಯಾಲಯಕ್ಕೆ ಹಾಜರಾಗದೇ ತೆಲೆಮರೆಸಿಕೊಂಡು ತಿರುಗುತ್ತಿರುವ ಆರೋಪಿಗಳ ಪತ್ತೆಗೆ ಮಂಗಳೂರು ಕಮಿಷನರೇಟ್ ವತಿಯಿಂದ ವಿಶೇಷ ಅಭಿಯಾನವನ್ನು ಆರಂಭಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದ ವಿವಿಧ ಪ್ರಕರಣಗಳ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯಾಯಾಲಯವು ಹಲವು ಬಾರಿ ವಾರಂಟ್ ಹೊರಡಿಸಿದ್ದರೂ ಹಾಜರಾಗದೇ ತೆಲೆಮರೆಸಿಕೊಂಡ ಆರೋಪಿಗಳ ಪತ್ತೆಯ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎಂ.ಚಂದ್ರಶೇಖರ ರವರು ಪೊಲೀಸ್ ಉಪ ಆಯುಕ್ತರಾದ ಕೆ.ಎಂ. ಶಾಂತರಾಜು,(ಕಾನೂನು ಮತ್ತು ಸು-ವ್ಯವಸ್ಥೆ) ಮತ್ತು ಪೊಲೀಸ್ ಉಪ ಆಯುಕ್ತ ಡಾ|| ಸಂಜೀವ ಪಾಟೀಲ್ (ಅಪರಾಧ) ರವರ ಮಾರ್ಗದರ್ಶನದಲ್ಲಿ ತೆಲೆಮರೆಸಿಕೊಂಡ ಆರೋಪಿಗಳ ದಸ್ತಗಿರಿ ಬಗ್ಗೆ ವಿಶೇಷ ಅಭಿಯಾನವನ್ನು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲಿಸ್ ಆಯುಕ್ತರಾದ ಮದನ್ ಎ ಗಾಂವಕರ್ ನೇತೃತ್ವದಲ್ಲಿ ಉಪವಿಭಾಗದ ಪೊಲಿಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪನಿರೀಕ್ಷರನ್ನೊಳಗೊಂಡ ತಂಡವನ್ನು ರಚಿಸಿ ಅಭಿಯಾನವನ್ನು ನಡೆಸಿ ಹಲವು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಬಂಧಿತ ಆರೋಪಿಗಳು :

ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಧಿಸಿದ ರವಿ ಮತ್ತು ಹಸನ್ ಬಶೀರ್ @ ಬಶೀರ್, / ಮೂಡಬಿದ್ರೆ ಠಾಣಾ ಪ್ರಕರಣದ ಅನಂದ ಕೊಟ್ಯಾನ್ / ಸುರತ್ಕಲ್ ಠಾಣಾ ಪ್ರಕರಣದ ಅಬ್ದುಲ್ ಖಾದರ್ ಮತ್ತು ಗಿರೀಶ್ ಶೆಟ್ಟಿ / ಪಣಂಬೂರು ಠಾಣಾ ಪ್ರಕರಣಕ್ಕೆ ಸಂಬಂಧಿಸಿದ ಮಹಮ್ಮದ್ ಅನ್ವರ್, ಮಹಮ್ಮದ್ ಆಸೀಫ್ ಮತ್ತು ತನ್ವೀರ್ ಗೋರಿಗುಡ್ಡೆ / ಬಜಪೆ ಠಾಣಾ ಪ್ರಕರಣಕ್ಕೆ ಸಂಬಂಧಿಸಿದ ಮನೀಶ್ ಶೆಟ್ಟಿ ಮತ್ತು ವೆಂಕಟೇಶ್ @ ವೆಂಕ

ಈ ಮೇಲಿನ ಒಟ್ಟು 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತೆಲೆಮರೆಸಿಕೊಂಡಿರುವ ಬಗ್ಗೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿಗಳು ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

Write A Comment