ಉಳ್ಳಾಲ. ಜ, 22: ಎಸ್ಸೆಸ್ಸೆಫ್ ಬೆಳ್ಮ ರೆಂಜಾಡಿ ಶಾಖೆ ಇದರ 21ನೇ ವಾರ್ಷಿಕದ ಪ್ರಯುಕ್ತ ಹಮ್ಮಿಕೊಳ್ಳಲಾದ 21ನೇ ಕಾರ್ಯಕ್ರಮಗಳಲ್ಲಿ 9ನೇ ಕಾರ್ಯಕ್ರಮವಾದ “ರೆಂಜಾಡಿ ಪರಿಸರದ ಮೂಲ ಸೌಕರ್ಯಕ್ಕಾಗಿ ಅಧಿಕಾರಿಗಳಿಗೆ ಮನವಿ” ಕಾರ್ಯಕ್ರಮವು ನೀರಿನ ಮತ್ತು ಸರ್ಕಾರಿ ಬಸ್ಸಿನ ಅವಶ್ಯಕತೆಯನ್ನಿಟ್ಟು ಕ್ಷೇತ್ರದ ಶಾಸಕರು, ಸಚಿವ ಯು.ಟಿ ಖಾದರ್‌ರವರಿಗೆ ಮನವಿಯನ್ನು ಇತ್ತೀಚೆಗೆ ಎಸ್ಸೆಸ್ಸೆಫ್ ರೆಂಜಾಡಿ ಶಾಖೆಯ ಪ್ರ.ಕಾರ್ಯದರ್ಶಿ ಮುಹಮ್ಮದ್ ಸಫೀರ್ ಯು.ಎ ಮನವಿಯನ್ನು ನೀಡಿದರು.
ಎಸ್.ವೈ.ಎಸ್ ಸದಸ್ಯರಾದ ಕರೀಂ ಸಖಾಫಿ, ಎಸ್.ವೈ.ಎಸ್ ಕೋಶಾಧಿಕಾರಿ ಲತ್ತೀಫ್ ಎಮ್.ಎಲ್.ವಿ, ಎಸ್ಸೆಸ್ಸೆಫ್ ಉಪಾಧ್ಯಕ್ಷ ಸತ್ತಾರ್ ಬಿ.ಎಲ್.ಕೆ, ಎಸ್ಸೆಸ್ಸೆಫ್ ಉಪಾಧ್ಯಕ್ಷರಾದ ಅಶ್ರಫ್ ಕೆ.ಬಿ, ಮೊದಲಾದವರು ಈ ಸಂದರ್ಭ ಉಪಸ್ಥಿತರಿದರು.