
ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಬಿಲ್ಲವ ಜಾಗೃತಿ ಬಳಗದ ಯುವ ವಿಭಾಗದ ವತಿಯಿಂದ “ಜಾಗೃತಿ ಕ್ರೀಡೊತ್ಸವ – 2016” ಜ. 17ರಂದು ಚರ್ಚ್ ಗೇಟ್ ಕರ್ನಾಟಕ ಸ್ಪೊರ್ಟಿಂಗ್ ಅಸೋಷಿಯೇಷನ್ ಮೈದಾನದಲ್ಲಿ ನಡೆಯಿತು. ಸದಸ್ಯರು, ಮಹಿಳೆಯರು ಹಾಗೂ ಹಿರಿ ಕಿರಿಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.
ಅಧ್ಯಕ್ಷ ಎನ್. ಟಿ. ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಬಿಲ್ಲವರ ಅಸೋಷಿಯೇಶನ್ ನ ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್ ಉಪಸ್ಥಿತರಿದ್ದು ನಾಯಕತ್ವ ಬೆಳೆಸಲು ಇಂತಹ ಕ್ರೀಡೆಯು ಅಗತ್ಯವಾಗಿದೆ . ನಮ್ಮ ಹಿರಿಯರು ನಾಲ್ಕು ಸಂಘಟನೆಯನ್ನು ಕಟ್ಟಿದ್ದು ಪದತ್ಯಾಗ ಮಾಡಿ ಹೆಮ್ಮರದಂತಿರುವ ಬಿಲ್ಲವರ ಸಂಘಟನೆಯನ್ನು ಕಟ್ಟಿ ಕಾರಣಾಂತರದಿಂದ ಸುಂಟರಗಾಳಿಯಂತಹ ಕಹಿ ಘಟನೆಯಿಂದ ಮರದ ಕೊಂಬು ತುಂಡಾಗಿ ಮರಕ್ಕೂ, ಮರದ ಕೊಂಬಿಗೂ ನೋವುಂಟಾಗಿದೆ. ಆದರೂ ನಾವೆಲ್ಲರೂ ಬಿಲ್ಲವರಾಗಿ ಇಂದು ಕಾರ್ಯ ನಿರ್ವಹಿಸುತಿದ್ದೇವೆ. ಎಲ್ಲರೂ ಒಂದಾಗಿ ಸಮಾಜವನ್ನು ಮತ್ತೂ ಗಟ್ಟಿಗೊಳಿಸೋಣ ಎಂದರು.

ಅಧ್ಯಕ್ಷರಾದ ಎನ್. ಟಿ. ಪೂಜಾರಿಯವರು ಮಾತನಾಡುತ್ತಾ ನಾವು ಬಿಲ್ಲವ ಚೇಂಬರ್ ಆಫ್ ಕಾಮರ್ಸನ್ನು ಸ್ಥಾಪಿಸಿದ್ದು ಸದ್ಯದಲ್ಲೇ ಕಾರ್ಯಾನಿರತವಾಗಲಿದೆ. ಕ್ರೀಡೋತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಯುವ ವಿಭಾಗದ ಕಾರ್ಯಾಧ್ಯಕ್ಷ ಮಹೇಂದ್ರ ಎಸ್. ಕರ್ಕೇರ ಮಾತನಾಡುತ್ತಾ ಯುವ ಜನಾಂಗವನ್ನು ಪ್ರೋತ್ಸಾಹಿಸಲು ಇಂತಹ ಕ್ರೀಡೊತ್ಸವವನ್ನು ಹಮ್ಮಿಕೊಂಡಿದ್ದೇವೆ. ಇದರ ಯಶಸ್ಸಿಗೆ ಬಳಗದ ಎಲ್ಲಾ ವಿಭಾಗಗಳ ಸದಸ್ಯರು ದುಡಿದಿದ್ದರೆ ಎಂದರು.
ಬಳಗದ ಸ್ಥಾಪಕಾಧ್ಯಕ್ಷ ಸೂರು ಸಿ. ಕರ್ಕೇರ, ಗೌರವ ಅಧ್ಯಕ್ಷ ಸುರೇಶ್ ಪೂಜಾರಿ ಉಪಾಧ್ಯಕ್ಷ ಪುರುಷೋತ್ತಮ ಕೋಟ್ಯಾನ್, ಮತ್ತು ಡಿ. ಬಿ. ಕೋಟ್ಯಾನ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸಂತೋಇ ಪೂಜಾರಿ, ಗುರುತು ಸಂಪಾದಕ ಬಾಬು ಶಿವ ಪೂಜಾರಿ, ರವಿ ರಾ. ಅಂಚನ್, ಕೆ. ಎಂ. ಕೋಟ್ಯಾನ್, ಹರೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಕೇಶವ ಕೋಟ್ಯಾನ್ ಮತ್ತು ಲಕ್ಷಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಜೆ. ಎಂ. ಕೋಟ್ಯಾನ್ ವಂದನಾರ್ಪಣೆ ಮಾಡಿದರು.