ಕನ್ನಡ ವಾರ್ತೆಗಳು

ತಲ್ಲೂರು ವಿದ್ಯುತ್ ಶಾಕ್ ಪ್ರಕರಣ: ಮೃತ ಯುವಕರ ಮನೆಗೆ ಬಿ.ಎಸ್.ವೈ ಹಾಗೂ ಶೋಭಾ ಭೇಟಿ

Pinterest LinkedIn Tumblr

ಕುಂದಾಪುರ: ತಲ್ಲೂರಿನಲ್ಲಿ ಜ.2ರಂದು ನಡೆಯಲಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿ ಎನ್ನುವಂತೆ ಡಿ.29ರಂದು ರಾತ್ರಿ ಬ್ಯಾನರ್ ಹಾಗೂ ಬಂಟಿಂಗ್ಸ್ ಕಟ್ಟುವ ವೇಳೆ ವಿದ್ಯುತ್ ಶಾಕಿಗೆ ಬಲಿಯಾಗಿದ್ದ ತಲ್ಲೂರಿನ ಮನೋಜ್ ದೇವಾಡಿಗ (29)ಸುನಿಲ್ ಮೊಗವೀರ (22) ಮನೆಗಳಿಗೆ ಸಂಸದರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

Yadiyurappa_ Visit_Talluru (10) Yadiyurappa_ Visit_Talluru (4) Yadiyurappa_ Visit_Talluru (11) Yadiyurappa_ Visit_Talluru (6) Yadiyurappa_ Visit_Talluru (8) Yadiyurappa_ Visit_Talluru (3) Yadiyurappa_ Visit_Talluru (7) Yadiyurappa_ Visit_Talluru (2) Yadiyurappa_ Visit_Talluru (1) Yadiyurappa_ Visit_Talluru (9) Yadiyurappa_ Visit_Talluru (5)

ಈ ಸಂದರ್ಭ ಕುಟುಂಬಿಕರ ಸಮಸ್ಯೆಗಳನ್ನು ಆಲಿಸಿದ ಬಿ.ಎಸ್.ವೈ. ಅವರು ತಲಾ 25 ಸಾವಿರ ವೈಯಕ್ತಿಕ ಪರಿಹಾರವನ್ನು ಎರಡು ಕುಟುಂಬಗಳಿಗೆ ನೀಡುವ ಭರವಸೆಯನ್ನು ನೀಡಿದರು.

ಈ ಸಂದರ್ಭ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ , ಸಂಜೀವ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿರಿ:

ಜೀವಕ್ಕೆ ಕುತ್ತು ತಂದ ಬಂಟಿಂಗ್ಸ್: ಹೈ ಟೆನ್ಷನ್ ವಿದ್ಯುತ್ ತಂತಿ ಶಾಕ್; ಇಬ್ಬರು ದಾರುಣ ಸಾವು

Write A Comment