
ಕುಂದಾಪುರ: ತಾಲೂಕಿನ ಶಂಕರನಾರಾಯಣ ಜಾತ್ರೆಯಲ್ಲಿ ಸರಗಳ್ಳತನಕ್ಕೆ ಯತ್ನಿಸಿದ ತಮಿಳುನಾಡು ಮೂಲದ ಇಬ್ಬರು ಖತರ್ನಾಕ್ ಕಳ್ಳಿಯರನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ತಮಿಳುನಾಡು ಮೂಲದ ಮಾರಿಮುತ್ತು ಹಾಗೂ ಲಲಿತಾ ಎನ್ನುವವರೇ ಬಂಧಿತ ಆರೋಪಿಗಳು.

ಜಾತ್ರೆಯ ಸಂದರ್ಭ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ಕಳ್ಳಿಯರು ಸರಗಳ್ಳತನ ನಡೆಸಲು ಸ್ಕೆಚ್ ರೂಪಿಸಿದ್ದರು. ಜಾತ್ರೆಯ ಸಂದರ್ಭ ಬಂದೋಬಸ್ತಿನಲ್ಲಿದ್ದ ಪೊಲೀಸರು ಇಬ್ಬರು ಕಳ್ಳಿಯರ ಚಲನವಲನಗಳನ್ನು ಗಮನಿಸಿದ್ದು ಇವರ ಚಟುವಟಿಕೆಗಳು ಮಿತಿಮೀರಿದಾಗ ಇಬ್ಬರನ್ನು ವಿಚಾರಣೆ ನಡೆಸಿದ್ದು ಅವರು ಹಾರಿಕೆಯ ಉತ್ತರ ನೀಡಿದ್ದಾರೆನ್ನಲಾಗಿದೆ, ಇಬ್ಬರು ತಮಿಳುನಾಡು ಮೂಲದ ಸರಗಳ್ಳರೆಂಬ ಬಗ್ಗೆ ಪೊಲೀಸರಿಗೆ ತಿಳಿದುಬಂದಿದ್ದು ಇಬ್ಬರನ್ನು ಬಂಧಿಸಿದ್ದಾರೆ.
ಜಾತ್ರೆಗಳಿಗೆ ಬರುವ ಈ ತಮಿಳುನಾಡು ಮೂಲದ ಕಳ್ಳಿಯರು ಅಲ್ಲಿ ಮಹಿಳೆಯರ ಚಿನ್ನಾಭರಣಗಳನ್ನು ಎಗರಿಸುವ ಕಾಯಕ ಮಾಡುತ್ತಾರೆ.
ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.