ಕನ್ನಡ ವಾರ್ತೆಗಳು

ಮಂಗಳೂರಿನಿಂದ ಉಡುಪಿಗೆ ಪರ್ಯಾಯ ಹೊರೆ ದಿಬ್ಬಣ

Pinterest LinkedIn Tumblr

HoreKanike_Pryaya_1

ಮಂಗಳೂರು: ಉಡುಪಿ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾಂದಗಳವರ ಪರ್ಯಾಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಹೊರೆಕಾಣಿಕೆ ಹೊರೆ ದಿಬ್ಬಣವು ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರರವರ ನೇತೃತ್ವದಲ್ಲಿ ಶನಿವಾರ ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಟಿತು.

ಶರವುರಾಘವೇಂದ್ರ ಶಾಸ್ತ್ರಿ, ವಾಮನ ಶೆಣೈ, ಎಂ.ಬಿ. ಪುರಾಣಿಕ್, ಎ.ಜೆ. ಶೆಟ್ಟಿ, ನಾಗೇಶ್ ಬಪ್ಪನಾಡು, ಪ್ರತಾಪ್ ಸಿಂಹ ನಾಯಕ್, ಸುರೇಶ್ ಶೆಟ್ಟಿ ಮುಂಬೈ, ಡಾ. ದಯಾಕರ್‌ಉಜಿರೆ, ರೂಪಾ ಡಿ. ಬಂಗೇರ, ಎಂ.ಎಸ್. ಗುರುರಾಜ್, ಕೆ. ಎಸ್. ಕಲ್ಲೂರಾಯ, ಸುಧಾಕರರಾವ್ ಪೇಜಾವರ, ಶ್ರೀನಾಥ್ ಉಜಿರೆ, ರತ್ನಾಕರಜೈನ್, ದಯಾನಂದಕಟೀಲು, ಶರವುಗಣೇಶ್‌ಮೊದಲಾದವರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿಶ್ರೀ ಕ್ಷೇತ್ರಕದ್ರಿ, ಶರವುದೇವಸ್ಥಾನ, ಜನಾರ್ದನದೇವಸ್ಥಾನ‌ಉಜಿರೆ, ಶ್ರೀರಾಮ ಮಂದಿರ‌ಉಜಿರೆ, ಕಣ್ವತೀರ್ಥ, ಸಮತಾ ಬಳಗ, ಶಾರದಾ ವಿದ್ಯಾಲಯ, ದಿಯಾಕಂಪ್ಯೂಟರ್ಸ್, ನಮ್ಮವರು ಮೊದಲಾದ ಸಂಘಸಂಸ್ಥೆಗಳು ಪಾಲ್ಗೊಂಡಿದ್ದವು.

40ಕ್ಕೂ ಅಧಿಕ ವಾಹನಗಳಲ್ಲಿ ಅಕ್ಕಿ, ಸಕ್ಕರೆ, ತೆಂಗಿನ ಕಾಯಿ, ಅವಲಕ್ಕಿ, ಸಿಯಾಳ, ತರಕಾರಿ‌ಇತ್ಯಾದಿ ಸಾಮಾಗ್ರಿಗಳನ್ನೊಳಗೊಂಡ ಮೆರವಣಿಗೆಯು ಮಂಗಳೂರಿನಿಂದ ಮೂಲ್ಕಿಗೆ ತೆರಳಿ, ಕಟೀಲಿನಿಂದ ಬರುವ ಮೆರವಣಿಗೆಯೊಂದಿಗೆಜೊತೆಗೂಡಿ‌ಉಡುಪಿಗೆಸಾಗಿತು.

Write A Comment