
ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು 35ನೇ ಸುಸ್ಥಿರ ಹೆಜ್ಜೆ ಎಂಬ ಹೆಸರಿನಲ್ಲಿ 35ನೇ ಸ್ವಚ್ಛತಾ ಅಭಿಯಾನವನ್ನು ಇಂದು (ಜನವರಿ 17) ನಗರದ ಮಾರ್ನಮಿಕಟ್ಟೆ-ಜೆಪ್ಪುಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು.
ಮಾರ್ನಮಿಕಟ್ಟೆಯಲ್ಲಿ 35ನೇ ಸುಸ್ಥಿರ ಹೆಜ್ಜೆಕಾರ್ಯಕ್ರಮಕ್ಕೆ ಚಾಲನೆ: ಮರ್ನಮಿಕಟ್ಟೆ ವೃತ್ತದ ಬಳಿ 35ನೇ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಬೆಳಿಗ್ಗೆ ೭:೩೦ ಕ್ಕೆ ಸಭಾಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಮಕೃಷ್ಣ ಮಠ ಮತ್ತು ಮಿಷನ್ನಿನ ಮುಖ್ಯಕೇಂದ್ರದಿಂದ ಸಹ ಕಾರ್ಯದರ್ಶಿಗಳಾದ ಪೂಜ್ಯ ಸ್ವಾಮಿ ಬಲಭದ್ರಾನಂದಜಿ ಮಹರಾಜ್ ಮುಖ್ಯ ಅತಿಥಿಗಳಾಗಿದ್ದರು. ದಕ್ಷಿಣಕನ್ನಡ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ವಿಶೇಷ ಆಹ್ವಾನಿತರಾಗಿದ್ದರು.
ಸ್ವಾಮಿ ಬಲಭದ್ರಾನಂದಜಿ ಮಹರಾಜ್‌ಇವರುಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬನಲ್ಲೂ ಸ್ವಚ್ಛತೆಯ ಅರಿವು ಇರಬೇಕಾದುದು ಅತ್ಯಗತ್ಯ! ಮುಖ್ಯವಾಗಿ ನಮ್ಮಯುವಜನ ಈ ಸ್ವಚ್ಛ ಭಾರತದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ತನ್ಮೂಲಕ ಸ್ವಚ್ಛತೆಯ ಮಹತ್ವವನ್ನುಅರಿತು ಪಸರಿಸುವಂತಾಗಬೇಕು. ಈ ಸ್ವಚ್ಛ ಭಾರತಕಾರ್ಯಕ್ರಮವನ್ನುರಾಮಕೃಷ್ಣ ಮಿಷನ್ ಮಂಗಳೂರಿನ ಶಾಖೆ ಇಡೀದೇಶದಲ್ಲಿಯೇ ಮಾದರಿಯಾಗುವಂತೆ ಅತ್ತ್ಯುತ್ತಮವಾಗಿ ಕಾರ್ಯರೂಪಕ್ಕಿಳಿಸಿದೆ ಎಂದು ಪ್ರಂಶಸಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಮಕೃಷ್ಣ ಮಿಷನ್ ಸನ್ಮಾನ್ಯ ಪ್ರಧಾನಿಗಳ ಕರೆಯನ್ನುಅತ್ಯಂತಗಂಭೀರವಾಗಿ ಪರಿಗಣಿಸಿ ಸ್ವಚ್ಛ ಭಾರತದಕಾರ್ಯಕ್ರಮವನ್ನು ೩೫ವಾರಗಳ ಕಾಲ ಪರಿಣಾಮಕಾರಿಯಾಗಿ ಸಂಘಟಿಸಿದೆ. ಮಂಗಳೂರಿನ ಜನರಲ್ಲಿ ಸ್ವಚ್ಛತೆಯ ಮಹತ್ವವನ್ನು ಮಣಗಾಣಿಸುವಲ್ಲಿಕಾರ್ಯಕ್ರಮ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆಎಂದುತಮ್ಮ ಭಾಷಣದಲ್ಲಿ ತಿಳಿಸಿದರು.
ಆಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್‌ಗಣೇಶ್‌ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 35 ವಾರಗಳಿಂದ ನಡೆದುಕೊಂಡು ಬರುತ್ತಿರುವಅಭಿಯಾನದ ಭಾಗವಾಗಿರುವುದಕ್ಕೆ ಹೆಮ್ಮೆಯಾಗಿದೆ. ಹೆಚ್ಚಿನ ಸಂಖ್ಯೆಯಯುವಜನಇದರಲ್ಲಿ ಭಾಗವಹಿಸುತ್ತಿರುವುದುಇದರ ಯಶಸ್ಸಿಗೆ ಸಾಕ್ಷಿ ಎಂದು ತಿಳಿಸಿದರು.
ಸ್ವಾಮಿಜಿತಕಾಮಾನಂದಜಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀವಾಸುದೇವ ಎಂ ಆರ್ ವಂದಿಸಿದರು. ಶ್ರೀ ಉಮೇಶ್ ಕೆ ಆರ್ ನಿರೂಪಿಸಿದರು. ಸಮಾರಂಭದ ನಂತರ ಸ್ವಾಮಿ ಬಲಭದ್ರಾನಂದಜಿ ಮಹರಾಜ್ ಹಾಗೂ ಸಂಸದರಾದ ಶ್ರೀ ನಳಿನ್ ಕುಮಾರ್‌ಕಟೀಲು ಇವರುಗಳು ಜಂಟಿಯಾಗಿ ಹಸಿರು ನಿಶಾನೆ ತೋರಿ ವಿಧ್ಯುಕ್ತವಾಗಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ವಚ್ಛತಾ ಅಭಿಯಾನಕ್ಕೆ ಹಸಿರು ನಿಶಾನೆ:
ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಸ್ವಾಮಿಜಿದ್ವಯರು ಹಾಗೂ ಅತಿಥಿಗಳೆಲ್ಲರೂ ಸ್ವಯಂ ಸೇವಕರೊಂದಿಗೆ ಪೊರಕೆತೆಗೆದುಕೊಂಡು ಮಾರ್ನಮಿಕಟ್ಟೆಯ ವೃತ್ತದ ಸುತ್ತಮುತ್ತಲಿನ ಜಾಗೆಗಳಲ್ಲಿ ಕಸಗೂಡಿಸಿದರು. ಬಳಿಕ ವೃತ್ತದ ನಾಲ್ಕು ರಸ್ತೆಗಳನ್ನು ಹಾಗೂ ಇಕ್ಕೆಲಗಳನ್ನು ಶುಚಿಗೊಳಿಸಲಾಯಿತು.
ಮಾರ್ನಮಿಕಟ್ಟೆಯಿಂದ ಮೋರ್ಗನ್ಸ್‌ಗೇಟ್‌ನತ್ತ ಸಾಗುವ ರಸ್ತೆಯಲ್ಲಿ ವರ್ಷಾನುಗಟ್ಟಲೆಯಿಂದ ಬಿದ್ದಿದ್ದ ಕಸದ ದೊಡ್ಡ ರಾಶಿಯನ್ನು ಜೆಸಿಬಿ ಬಳಸಿ ತೆಗೆಯಲಾಯಿತು. ಭಿತ್ತಿಚಿತ್ರಗಳಿಂದ ಅಂದಗೆಟ್ಟಿದ್ದ ಹಾಗೂ ಸರಿಯಾದ ನಿರ್ವಹಣೆ ಇಲ್ಲದೇ ಅಂದಗೆಟ್ಟಿದ್ದ ಸಾರ್ವಜನಿಕ ಶೌಚಾಲಯವನ್ನು ಶುಚಿಗೊಳಿಸಿ ಬಣ್ಣ ಬಳಿಯಲಾಗಿತ್ತು.
ವೃತ್ತದ ನವೀಕರಣ:
ಹಲವಾರು ವರ್ಷಗಳಿಂದ ಮಾರ್ನಮಿಕಟ್ಟೆ ವೃತ್ತ ಮುರಿದು ಬಿದ್ದಿದ್ದು ಆ ಪ್ರದೇಶದ ಸೌಂದರ್ಯವನ್ನು ಹಾಳು ಮಾಡಿತ್ತು. ಅಭಿಯಾನದಕಾರ್ಯಕರ್ತರು ಕಳೆದ ಎರಡು ದಿನಗಳಿಂದ ವೃತ್ತಿಪರರ ಸಹಾಯ ಪಡೆದುಇಂದುಅದರ ಸುತ್ತಕಟ್ಟೆಕಟ್ಟಿದುರಸ್ತೆ ಮಾಡಿದ್ದಾರೆ. ಅಲ್ಲದೇ ಹತ್ತು ಲಾರಿಯಷ್ಟು ಮಣ್ಣು ತುಂಬಿಸಿಲಾಗಿದೆ. ಅಲ್ಲಿ ಉತ್ತಮವಾದ ಗಾರ್ಡನ್ ನಿರ್ಮಿಸುವ ಯೋಜನೆಯಿದೆ. ಅಲ್ಲದೇ ಮುಂದಿನವಾರ ವೃತ್ತದ ಸುತ್ತಲಿನ ಗೋಡೆಗೆ ಐಸಿರಿ ಆರ್ಟ್ಸ್ ಕಲಾವಿದರಿಂದ ಉತ್ತಮ ಮಟ್ಟದಕ ಲಾಕೃತಿಯನ್ನುರ ಚಿಸಲಾಗುವುದು. ವೃತ್ತವನ್ನುರಿಪೇರಿ ಮಾಡಲಾಗಿದೆ.
ಬಸ್ ತಂಗುದಾಣಕ್ಕೆ ಬಣ್ಣ :
ಮಾರ್ನಮಿಕಟ್ಟೆ ವೃತ್ತದ ಬಳಿಯಿರುವ ಬಸ್ ತಂಗುದಾಣ ಅಲ್ಲಲ್ಲಿ ಅಂಟಿಸಿದ್ದ ಭಿತ್ತಿಚಿತ್ರಗಳಿಂದ ಅಂದಗೆಟ್ಟಿತ್ತು. ಅಭಿಯಾನದ ಸ್ವಯಂಸೇವಕರು ಬಸ್ ತಂಗುದಾಣಕ್ಕೆ ಅಂಟಿಸಲಾಗಿದ್ದ ಪೋಸ್ಟರ್‌ಗಳನ್ನು ಕಿತ್ತು ಇಡೀ ತಂಗುದಾಣವನ್ನು ನೀರಿನಿಂದ ಶುಚಿಗೊಳಿಸಿದರು. ತದನಂತರ ಬಣ್ಣ ಹಚ್ಚಿ ಅಂದಗೊಳಿಸಿದರು. ಇದೀಗ ಬಸ್ ತಂಗುದಾಣ ಶುಚಿಯಾಗಿ, ಸುಂದರವಾಗಿಕಾಣುತ್ತಿದೆ.
ಮಠದ ಸಭಾಭವನದಲ್ಲಿ೩೫ನೇ ಸುಸ್ಥಿರ ಹೆಜ್ಜೆಸಮಾರೋಪ 35ನೇ ಕಾರ್ಯಕ್ರಮದಸಮಾರೋಪ ಸಮಾರಂಭವನ್ನು ಮಠದ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಸ್ವಚ್ಛ ಮಂಗಳೂರು ಅಭಿಯಾನದ ಪ್ರಾಯೋಜಕತ್ವವನ್ನು ವಹಿಸಿಕೊಂಡ ಎಂ ಆರ್ ಪಿಎಲ್ ಸಂಸ್ಥೆಯ ಎಂ ಡಿ ಶ್ರೀ ಎಚ್‌ಕುಮಾರ ಹಾಗೂ ಜಿ ಜಿ ಎಂ ಶ್ರೀ ಲಕ್ಷ್ಮೀನಾರಾಯಣ ಭಾಗವಹಿಸಿದ್ದರು.
ಸ್ವಾಮಿಜಿತ ಕಾಮಾನಂದಜಿ ಪ್ರಾಸ್ತವಿಕ ನುಡಿಗಳನ್ನಾಡಿದರು.ಸ್ವಾಮಿ ಬಲಭದ್ರಾನಂದಜಿ ಮಹರಾಜ ದೀಪಪ್ರಜ್ವಲನೆ ಮಾತನಾಡಿದರು..ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಎಚ್ ಕುಮಾರ ಸ್ವಚ್ಛ ಮಂಗಳೂರು ಅಭಿಯಾನ ಅತ್ಯಂತ ಪ್ರಭಾವ ಪೂರ್ಣವಾಗಿ ನಡೆಯುತ್ತಿದೆ. ರಾಮಕೃಷ್ಣ ಮಿಷನ್ನಿನೊಂದಿಗೆ ಎಂ ಆರ್ ಪಿ ಎಲ್ ಸಂಸ್ಥೆ ಈ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು. ಪ್ರಾಧ್ಯಾಪಕಿ ಅಂಬಿಕಾ ಮಲ್ಯಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಹಕಾರ :ರೋಟರಿಕ್ಲಬ್ ಹಿಲ್ ಸೈಡ್ ಸದಸ್ಯರು, ನಿವೇದಿತಾ ಬಳಗ, ಆರ್ಟ್‌ಆಫ್ ಲೀವಿಂಗ್‌ಸದಸ್ಯರು, ಸರಕಾರಿ ಪ್ರಥಮದರ್ಜೆಕಾಲೇಜಿನ ವಿದ್ಯಾರ್ಥಿಗಳು, ವಿವೇಕಾನಂದತರಬೇತಿಕೇಂದ್ರದ ಮಕ್ಕಳು ಭಾಗವಸಿದ್ದರು. ಪ್ರಾಚಾರ್ಯ ಶ್ರೀ ರಾಜಶೇಖರ್ ಹೆಬ್ಬಾರ್, ಡಾ. ಸತೀಶ್‌ರಾವ್, ಶ್ರೀ ಸುರೇಶ್ ಶೆಟ್ಟಿ, ಶುಭೋದಯ ಆಳ್ವ, ಅಭಿಯಾನದ ಸಂಯೋಜಕ ದಿಲ್ ರಾಜ್ ಆಳ್ವ ಹಾಗೂ ಮತ್ತಿತರರುಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.