ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ವಿಕಲಚೇತನರಿಗೆ ಸ್ಫೂರ್ತಿ ನೀಡುವ ’ಸ್ವಾಭಿಮಾನ್’ ಉದ್ಘಾಟನೆ

Pinterest LinkedIn Tumblr

Talent_ Research_photo_1

ಮಂಗಳೂರು,ಜ.17: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವಿಕಲಚೇತನಿಗೆ ಸ್ಪೂರ್ತಿ ನೀಡಲು ನಗರದ ಪುರಭವನದಲ್ಲಿ ಆಯೋಜಿಸಿದ ‘ಸ್ವಾಭಿಮಾನ್’ ಕಾರ್ಯಕ್ರಮವನ್ನು ರಾಜ್ಯ ವಿಕಲಚೇತನ ಇಲಾಖೆಯ ಆಯುಕ್ತ ಕೆ. ಎಸ್. ರಾಜಣ್ಣ ಅವರು ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವಿಕಲಚೇತನ, ಮಂಗಳಮುಖಿ ಮತ್ತು ಹಿರಿಯ ನಾಗರಿಕರನ್ನು ಸೇರಿಸಿದರೆ ರಾಜ್ಯದಲ್ಲಿ ಸುಮಾರು ಒಂದು ಕೋಟಿ ಜನರಿದ್ದು ಇವರ ಕಲ್ಯಾಣಕ್ಕಾಗಿ ಸಚಿವಾಲಯದ ಅಗತ್ಯವಿದೆ. ವಿಕಲಚೇತನ, ಮಂಗಳಮುಖಿ ಮತ್ತು ಹಿರಿಯರ ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

Talent_ Research_photo_2 Talent_ Research_photo_3 Talent_ Research_photo_4 Talent_ Research_photo_5

ಸಮಾರಂಭದಲ್ಲಿ ಚರ್ಮರೋಗ ತಜ್ಞೆ ಡಾ.ಮಹಾಜಬೀನ್ ಮದರ್ಕರ್, ರಾಜ್ಯ ವಿಕಲಚೇತನ ಇಲಾಖೆಯ ಸಹಾಯಕ ಆಯುಕ್ತ ಪದ್ಮನಾಭ, ಮಕ್ಕಳ ಮತ್ತು ಮಹಿಳಾ ಅಭಿವೃದ್ದಿ ಅಧಿಕಾರಿ ಎ.ಉಸ್ಮಾನ್ , ದ.ಕ ಮತ್ತು ಉಡುಪಿ ಜಿಲ್ಲಾ ವಿಕಲಚೇತನರ ಅಸೋಸಿಯೇಶನ್ ಅಧ್ಯಕ್ಷ ಡಾ.ಮುರಳೀಧರ ನಾಕ್, ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಸಬಿತಾ ಮೋನಿಸ್, ಕೆಪಿಸಿ ಕಾರ್ಮಿಕ ಸಂಘಟನೆ ಚೇರ್‌ಮೆನ್ ಹೊಂಬೆಗೌಡ, ಫಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ,ಉದ್ಯಮಿ ಜಿ. ಕೆ ಶರೀಫ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಸುಲೈಮಾನ್ ಶೇಕ್ ಬೆಳುವಾಯಿ, ಶೇಕ್ ಅಬ್ದುಲ್ ಮಜೀದ್, ದಿನೇಶ್ ಶೆಟ್ಟಿ, ಫತೆ ಮುಹಮ್ಮದ್, ನೂರುನ್ನಿಸಾ ಮುಂತಾದವರು ಉಪಸ್ಥಿತರಿದ್ದರು.

Write A Comment