ಕನ್ನಡ ವಾರ್ತೆಗಳು

ಪಣಂಬೂರು ಬೀಚ್‌ : ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ14 ರಾಷ್ಟ್ರಗಳ ಗಾಳಿಪಟಗಳು

Pinterest LinkedIn Tumblr

Kite_Fest_Start_1

ಮಂಗಳೂರು,ಜ.17; ಟೀಮ್ ಮಂಗಳೂರು ಹಾಗೂ ರೋಟರಿ ಆಶ್ರಯದಲ್ಲಿ ಎರಡು ದಿನಗಳ ಪಣಂಬೂರು ಕಡಲ ಕಿನಾರೆಯಲ್ಲಿ ಆಯೋಜಿಸಲಾದ ಗಾಳಿಪಟ ಉತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.

`ಟೀಮ್ ಮಂಗಳೂರು’ ಹವ್ಯಾಸಿ ಗಾಳಿಪಟ ತಂಡದ ಸಹಕಾರದೊಂದಿಗೆ ರೋಟರಿ ಕ್ಲಬ್ ಈ ಉತ್ಸವ ಆಯೋಜಿಸಿದ್ದು, ರಾತ್ರಿ ಬೆಳಕಿನ ವರ್ಣ ಲೇಪದೊಂದಿಗೆ ವಿಶೇಷವಾಗಿರುವ ನೈಟ್ ಕೈಟ್‍ಫ್ಲೈಯಿಂಗ್ ಕೂಡಾ ಈ ಬಾರಿಯ ವಿಶೇಷ.

ಉತ್ಸವದಲ್ಲಿ ಭಾರತೀಯ ಸಾಂಸ್ಕೃತಿಕ ಪ್ರತೀಕಗಳ ಬೃಹತ್ ಗಾಳಿಪಟಗಳ ಜತೆಗೆ ವಿದೇಶದ ಹಲವಾರು ತಾಂತ್ರಿಕ ಪ್ರಕಾರಗಳ ಮತ್ತು ವಾಯು ತುಂಬಿ ಹಾರಲಿರುವ ಎರೋಫೋಯ್ಗ್ ಗಾಳಿಪಟಗಳು ಬಾನಿಗೇರಿ ಮನರಂಜಿಸಿತು. ಜತೆಗೆ ತುಳುನಾಡಿನ ನೇತ್ರಾವತಿ ನದಿಯ ಸಂರಕ್ಷಣೆಗಾಗಿ `ನೇತ್ರಾವತಿ ಉಳಿಸಿ’ ಎಂಬ ಪರಿಸರ ಜಾಗೃತಿಯ ಸಂದೇಶವುಳ್ಳ ಗಾಳಿಪಟವೂ ಹಾರಾಡಿತು.

Kite_Fest_Start_2 Kite_Fest_Start_3 Kite_Fest_Start_4 Kite_Fest_Start_5 Kite_Fest_Start_6 Kite_Fest_Start_7 Kite_Fest_Start_8 Kite_Fest_Start_9 Kite_Fest_Start_10 Kite_Fest_Start_11

`ಸಮಾನತೆ ಮತ್ತು ಏಕತೆ’ ಎಂಬ ದೃಷ್ಟಿಕೋನದಿಂದ `ಒಂದೇ ಆಕಾಶ, ಒಂದೇ ನೆಲ, ಒಂದೇ ಕುಟುಂಬ’ ಎಂಬ ಧ್ಯೇಯ ಘೋಷಣೆಯೊಂದಿಗೆ ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆದಿದೆ. ಜಾತಿ, ಧರ್ಮ, ಮತ, ಪಂಥ ಎಂಬ ಯಾವ ವಿಂಗಡನೆಯೂ ಇಲ್ಲದೆ ಸರ್ವರೂ ಸಂತಸ ಪಡುವಲ್ಲಿ ಸಮಾನ ಅರ್ಹರು ಎಂಬುದು ಈ ಉತ್ಸವದ ಮೂಲ ಉದ್ದೇಶವಾಗಿತ್ತು.

ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ಟರ್ಕಿ, ನೆದರ್‍ಲ್ಯಾಂಡ್, ಕಾಂಬೋಡಿಯಾ, ಉಕ್ರೇನ್, ಕುವೈಟ್, ಥಾಯ್ಲೆಂಡ್, ನೈಜೀರಿಯಾ, ಇಟಲಿ, ಭಾರತ ಸೇರಿದಂತೆ 14 ರಾಷ್ಟ್ರಗಳ ಗಾಳಿಪಟ ತಂಡಗಳು ಉತ್ಸವದಲ್ಲಿ ಭಾಗವಹಿಸಿದವು.

ಬಾನಂಗಳದಲ್ಲಿ ಹಾರಾಡುತ್ತಿರುವ ಬಣ್ಣಬಣ್ಣದ ಗಾಳಿಪಟಗಳ ಈ ದೃಶ್ಯ ವೈಭವವನ್ನು ನೋಡಲು ಚಿಣ್ಣರಿಂದ ಹಿಡಿದು ಹಿರಿಯರ ತನಕ ಜನಸ್ತೋಮವೇ ಕಡಲ ಕಿನಾರೆಯಲ್ಲಿ ಸೇರಿತ್ತು. ಪಡುವಿನಂಚಿನಲ್ಲಿ ಸೂರ್ಯ ಮುಳುಗುತ್ತಿದ್ದಂತೆಯೇ ವಿಭಿನ್ನ ಪರಿಕಲ್ಪನೆಯಲ್ಲಿ ಮೂಡಿಬಂದ ಪಟಗಳು ಬಾನಂಗಳದಲ್ಲಿ ಹಾರುತ್ತಿದ್ದುದನ್ನು ನೋಡಿ ಪ್ರೇಕ್ಷಕರು ಕೇಕೆ ಹಾಕಿ ಸಂಭ್ರಮಿಸಿದರು.

Kite_Fest_Start_12 Kite_Fest_Start_13 Kite_Fest_Start_14 Kite_Fest_Start_15 Kite_Fest_Start_16 Kite_Fest_Start_17 Kite_Fest_Start_18 Kite_Fest_Start_19 Kite_Fest_Start_20 Kite_Fest_Start_21 Kite_Fest_Start_22 Kite_Fest_Start_23 Kite_Fest_Start_24 Kite_Fest_Start_25 Kite_Fest_Start_26

ಗಾಳಿಪಟ ಹಾರಿಸುವುದರಲ್ಲಿ ವಿಶ್ವಖ್ಯಾತಿ ಪಡೆದ ಟೀಂ ಮಂಗಳೂರು ಕಳೆದ ಹದಿನೇಳು ವರ್ಷಗಳಿಂದ ವೈಶಿಷ್ಟ್ಯಪೂರ್ಣ ಗಾಳಿಪಟಗಳನ್ನು ಬಾನಂಗಳದಲ್ಲಿ ಹಾರಿಸುವ ಮೂಲಕ ಜನಮನ್ನಣೆ ಗಳಿಸಿತ್ತು. ಈ ಬಾರಿಯೂ ಕಥಕ್ ಯಕ್ಷಗಾನ ರೂಪಕ `ವಿಭೀಷಣ’ನ ಮುಖವಾಡದ ಗಾಳಿಪಟ ನೆರದವರ ಪ್ರಶಂಸೆಗೆ ಪಾತ್ರವಾಯಿತು. ಜತೆಗೆ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಹಾಗೂ ಪತ್ನಿ ಬ್ಲಾಸಂ ಶ್ರೀದೇವಿಯ ಮುಖವರ್ಣದ ಗಾಳಿಪಟವನ್ನು ಹಾರಿಸಿದರು.

ಗಾಳಿಪಟ ಉತ್ಸವಕ್ಕೆ ಮೆರುಗು ನೀಟ್ಟಿನಲ್ಲಿ ಎಬಿಸಿಡಿ ಸಂಸ್ಥೆಯಿಂದ ಇದೇ ಸಂದರ್ಭದಲ್ಲಿ ನಡೆದ `ಸಾಂಸ್ಕೃತಿಕ ವೈಭವ’ ಗಾಳಿಪಟ ಉತ್ಸವಕ್ಕೆ ಮತ್ತಷ್ಟು ಸಂಭ್ರಮ ನೀಡಿತ್ತು.

Write A Comment