ಮನೋರಂಜನೆ

ಕರಿಷ್ಮಾ..ಮದುವೆಯಿಂದ ಡೈವೋರ್ಸ್‌ವರೆಗೆ ಗಬ್ಬೆದ್ದ ದಾಂಪತ್ಯ

Pinterest LinkedIn Tumblr

2karishmaಮುಂಬೈ: ಬಹಳ ದಿನಗಳಿಂದ ವಿಚಾರಣೆಯಲ್ಲಿರುವ ಬಾಲಿವುಡ್ ಬೆಡಗಿ ಕರಿಷ್ಮಾ ಕಪೂರ್ ಹಾಗೂ ಪತಿ ಉದ್ಯಮಿ ಸಂಜಯ್ ಕಪೂರ್ ನಡುವಿನ ಡೈವೋರ್ಸ್‌ ಪ್ರಕರಣ ದಿನ ಹೊಂದಂತೆ ಕೆಟ್ಟ ತಿರುವು ಪಡೆಯುತ್ತಿದೆ. ಇದರ ಮತ್ತೊಂದು ಭಾಗವೆಂಬಂತೆ ಪತಿ ಸಂಜಯ್‌ ಕರಿಷ್ಮಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕರಿಷ್ಮಾ ಕಪೂರ್‌ ಹಣದಾಸೆ ಹಾಗೂ ವೈಭೋಗದ ಜೀವನ ನಡೆಸಲು ನನ್ನೊಂದಿಗೆ ವಿವಾಹವಾಗಿದ್ದಳು ಎಂದು ಡೈವೋರ್ಸ್‌ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಬಾಲಿವುಡ್‌ ನಟ ಅಭಿಷೇಕ್ ಬಚ್ಚನ್ ಜೊತೆ ಬ್ರೇಕ್‍ ಅಪ್ ಆದ ನಂತರ ಕರಿಷ್ಮಾ ಸಂಜಯ್ ಜೊತೆಗೆ 2003ರಲ್ಲಿ ವಿವಾಹವಾಗಿದ್ದರು. ಮುಂಬೈ ಮೂಲದ ಕೈಗಾರಿಕೋದ್ಯಮಿ ಸಂಜಯ್ ಕೈ ಹಿಡಿದಿದ್ದ ಕರಿಷ್ಮಾ ಕೇವಲ ಹಣಕ್ಕಾಗಿ ಮುದುವೆಯಾಗಿದ್ದಳು ಎಂದು ಅವರು ದೂರಿದ್ದಾರೆ.

ಕರಿಷ್ಮಾ ಪತ್ನಿ ಹಾಗೂ ಸೊಸೆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದಾಳೆ. ಮಕ್ಕಳ ಜೊತೆಯಲ್ಲಿಯೂ ನ್ಯಾಯವಾಗಿ ನಡೆದುಕೊಳ್ಳುತ್ತಿಲ್ಲ. ಅವರ ಕೆರಿಯರ್ ಮಾತ್ರ ಅವರಿಗೆ ಮುಖ್ಯವಾಗಿದ್ದು, ಬೇರೆ ವ್ಯಕ್ತಿಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾಳೆಂದು ದೂರಿದ್ದಾರೆ.

ಜೊತೆಗೆ ತನ್ನಿಂದ ಹೆಚ್ಚು ಹಣ ಪಡೆದುಕೊಳ್ಳುವ ಉದ್ದೇಶದಿಂದ ಅವಳು ಮಕ್ಕಳನ್ನು ತನ್ನ ಬಳಿ ಇಟ್ಟುಕೊಂಡಿದ್ದಾಳೆ ಎಂದು ಸಂಜಯ್‌ ಆರೋಪಿಸಿದ್ದಾರೆ. ಈಕೆ ಕೇವಲ ಹೆಂಡತಿಯಾಗಿ ಮಾತ್ರ ವಿಫಲವಾಗಿಲ್ಲ, ತಾಯಿ ಹಾಗೂ ಸೊಸೆಯ ಪಾತ್ರ ನಿರ್ವಹಿಸುವುದರಲ್ಲಿ ವಿಫಲವಾಗಿದ್ದಾಳೆ ಎಂದು ಸಂಜಯ್‌ ದೂರಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರಿಷ್ಮಾ ಕಪೂರ್‌ ತಂದೆ, ಕಪೂರ್‌ ಕುಟುಂಬದಲ್ಲಿ ಹಣಕ್ಕೆ ಬರಗಾಲವಿಲ್ಲ. ನನ್ನ ಮಗಳು ಸಂಜಯ್ ಮದುವೆಯಾಗುವುದು ನನಗೆ ಇಷ್ಟವಿರಲಿಲ್ಲ. ಮಗಳ ಆಸೆಗೋಸ್ಕರ ಮದುವೆ ಮಾಡಿಸಿರುವೆ. ಅವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.

Write A Comment