ಕನ್ನಡ ವಾರ್ತೆಗಳು

ಡಿ.21: ಕೆಎನ್‌ಎನ್‌ಎಲ್ ವಿರುದ್ಧ ಹಸಿರು ನ್ಯಾಯಾಧೀಕರಣದಲ್ಲಿ ನಿಂದನೆ ಅರ್ಜಿ ಸಲ್ಲಿಕೆ.

Pinterest LinkedIn Tumblr

som_shekar_meet_1

ಮಂಗಳೂರು, ಡಿ.12: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಎತ್ತಿನಹೊಳೆ ಯೋಜನೆ ಕಾಮಗಾರಿ ಮುಂದುವರಿಸಿರುವ ಕರ್ನಾಟಕ ರಾಜ್ಯ ನೀರಾವರಿ ನಿಗಮ(ಕೆಎನ್‌ಎನ್‌ಎಲ್) ವಿರುದ್ಧ ಪಶ್ಚಿಮ ಘಟ್ಟ ಸಂರಕ್ಷಣಾ ಹೋರಾಟ ವೇದಿಕೆಯು ಡಿ.21ರಂದು ಚೆನ್ನೈಯ ಹಸಿರು ನ್ಯಾಯಾಧೀಕರಣದಲ್ಲಿ ನಿಂದನೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಕೆಎನ್‌ಎನ್‌ಎಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯೋಜನೆ ವಿರೋಧಿ ಕಾನೂನು ಹೋರಾಟಗಾರ ಕೆ.ಎನ್.ಸೋಮಶೇಖರ್, ಈ ಹಿಂದೆ ಕಾಮಗಾರಿ ನಡೆಸುವುದಿಲ್ಲ ಎಂದು ಕೆಎನ್‌ಎನ್‌ಎಲ್ ಪರ ವಕೀಲರು ನ್ಯಾಯಾಲಯಕ್ಕೆ ವೌಖಿಕ ಹೇಳಿಕೆ ನೀಡಿದ್ದರು. ಆದರೆ ಕಾಮಗಾರಿ ಮುಂದುವರಿಸಲಾಗಿತ್ತು. ಸರಕಾರ ಮತ್ತು ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸದೆ ನ್ಯಾಯಾಂಗಕ್ಕೆ ತಪ್ಪು ಮಾಹಿತಿ ನೀಡುತ್ತಿರುವುದರಿಂದ ಕೆಎನ್‌ಎನ್‌ಎಲ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದರು.

som_shekar_meet_2

ಯೋಜನೆಯ ಆರಂಭದಿಂದಲೂ ಕೆಎನ್‌ಎನ್‌ಎಲ್ ನ್ಯಾಯಾಲಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಲೇ ಬಂದಿದೆ. ಡಿಪಿಆರ್‌ನಲ್ಲಿ ಯೋಜನೆಯ ರೂಪುರೇಷೆಯೇ ಇಲ್ಲ. ಯಾವುದೇ ಅಧ್ಯಯನ ಮಾಡದೆ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದೊಂದು ಹಣ ಮಾಡುವ ಯೋಜನೆ. ಇದರ ವಿರುದ್ಧ ನಿರಂತರ ಹೋರಾಟ ಮುಂದುವರಿಯಲಿದೆ ಎಂದರು.

ಯೋಜನೆ ಮೊದಲ ಹಂತದ ಅನುಮತಿ ಪಡೆಯಲು ಅರಣ್ಯ ಭೂಮಿ ಪರಿವರ್ತನೆ, ಅರಣ್ಯ ಹಕ್ಕು, ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಹಾಸನ ಜಿಲ್ಲಾಧಿಕಾರಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಮಗ್ರ ವರದಿ ನೀಡಬೇಕಿದೆ. ಆದರೆ, ಇದುವರೆಗೆ ವರದಿ ಸಲ್ಲಿಸಿಲ್ಲ. ಇನ್ನೊಂದೆಡೆ ಸರಕಾರ ಅಧಿಕಾರಿಗಳನ್ನು ಬಲವಂತವಾಗಿ ಈ ಯೋಜನೆಯಲ್ಲಿ ತೊಡಗಿಸಿಕೊಂಡು ಯೋಜನೆ ಜಾರಿಗೆ ಪ್ರಯತ್ನಿಸುತ್ತಿದೆ. ಆದರೆ ಪಶ್ಚಿಮ ಘಟ್ಟ ಸಂರಕ್ಷಣಾ ವೇದಿಕೆ ಹೋರಾಟ ತೀವ್ರ ಗೊಳಿಸಲಿದೆ ಎಂದು ಸೋಮಶೇಖರ್ ತಿಳಿಸಿದರು.

ಸಾವಿರಾರು ಲಕ್ಷ ಕೋಟಿ ವ್ಯಯಿಸಿ ಆರಂಭಿಸಲಾದ 1,713ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳು ಕರ್ನಾಟಕದಲ್ಲಿ ವಿಲಗೊಂಡಿವೆ ಎಂಬುದನ್ನು 2011ರ ಜನವರಿ 14ರ ಸರಕಾರದ ವರದಿಯೇ ಹೇಳುತ್ತಿದೆ. ಕೇಂದ್ರ ಸರಕಾರ ರೂಪಿಸಿರುವ ಜಲನೀತಿ 2012ನ್ನೂ ಕೂಡ ಉಲ್ಲಂಸಲಾಗಿದೆ. ಎತ್ತಿನ ಹೊಳೆ ಯೋಜನೆ ಕೂಡ ಇದೇ ರೀತಿ ವಿಲಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದವರು ಹೇಳಿದರು. ಕಾನೂನು ಹೋರಾಟಗಾರ ಸಿ.ಯತಿರಾಜು ಮಾತನಾಡಿ, ಅರಣ್ಯ ಸಂರಕ್ಷಣೆ ಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ವಿಲವಾಗಿವೆೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಕ್ಲಿಯರೆನ್ಸ್ ನೀಡದೆ ಯೋಜನೆ ರದ್ದುಗೊಳಿಸಬೇಕು ಎಂದರು.

ತಪ್ಪು ಮಾಹಿತಿ ನೀಡುವ ಮೂಲಕ ಕೆಎನ್‌ಎನ್‌ಎಲ್ ಸರಕಾರ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ. ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೊಳಿಸ ಬೇಕಾದ ಅರಣ್ಯ ಸಚಿವ ರಮಾನಾಥ ರೈ ಈ ವಿಷಯದಲ್ಲಿ ವೌನ ವಹಿಸಿರುವುದು ಖೇದಕರ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾನೂನು ಸಲಹೆಗಾರ ಪ್ರಿನ್ಸ್ ಐಸಾಕ್, ಪಶ್ಚಿಮ ಘಟ್ಟ ಸಂರಕ್ಷಣಾ ಹೋರಾಟ ವೇದಿಕೆಯ ನಾಗೇಶ್ ಅಂಗೀರಸ ಉಪಸ್ಥಿತರಿದ್ದರು.

Write A Comment