ಕನ್ನಡ ವಾರ್ತೆಗಳು

ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ, ಕೊಲ್ಲೂರು ಸೇರಿದಂತೆ ಅವಳಿ ಜಿಲ್ಲೆಯ ಪ್ರಸಿದ್ದ ಕ್ಷೇತ್ರಗಳಿಂದ ಕಟೀಲು ಕ್ಷೇತ್ರಕ್ಕೆ ಸರಕಾರಿ ಬಸ್ ವ್ಯವಸ್ಥೆ :

Pinterest LinkedIn Tumblr

Kteelu_minister_visit

ಮಂಗಳೂರು, ಡಿ.2: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮುಜರಾಯಿ ಸಚಿವ ಮನೋಹರ್ ತಹಶೀಲ್ದಾರ್ ಅವರು ಮಂಗಳವಾರ ಭೇಟಿ ನೀಡಿದರು. ರಾಜ್ಯದಲ್ಲಿರುವ 160 ಎ ಗ್ರೇಡ್ ಹಾಗೂ 154 ಬಿ ಗ್ರೇಡ್ ಮಟ್ಟದಲ್ಲಿರುವ ದೇವಸ್ಥಾನಗಳಿಂದ ಬರುವ ಆದಾಯಗಳನ್ನು ಎಲ್ಲ ದೇವ ಸ್ಥಾನಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲು ದೇವಳದ ಮೂಲ ಭೂತ ಸೌಲಭ್ಯಗಳನ್ನು ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು. ಮಂಗಳೂರು ಹಾಗೂ ಉಡುಪಿಯಿಂದ ಕಟೀಲು ದೇವಳಕ್ಕೆ ಸರಕಾರಿ ಬಸ್ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ, ಕೊಲ್ಲೂರು ಸೇರಿದಂತೆ ಪ್ರಸಿದ್ಧ ದೇವಸ್ಥಾನಗಳಿಂದ ಕಟೀಲು ದೇವಸ್ಥಾನ ಸಂಪರ್ಕಿಸುವಂತೆ ಸರಕಾರಿ ಬಸ್‌ಗಳ ವ್ಯವಸ್ಥೆ ಕಲ್ಪಿಸುವ ಜೊತೆಗೆ ಪ್ರವಾಸೋದ್ಯಮಕ್ಕೂ ಒತ್ತು ನೀಡಲಾಗುವುದು ಎಂದು ಹೇಳಿದರು.

ಕಟೀಲು ದೇವಳದ ರಸ್ತೆ ಕಿರಿ ದಾಗಿದ್ದು, ಭಕ್ತರಿಗಾಗುತ್ತಿರುವ ತೊಂದರೆಗಳ ಬಗ್ಗೆ ಪತ್ರಕರ್ತರು ಸಚಿವರ ಗಮನ ಸೆಳೆದಾಗ, ರಸ್ತೆಗಳ ವಿಸ್ತರಣೆ ಪಿಡಬ್ಲುಡಿ ಇಲಾಖೆಗೆ ಸೇರಿದ್ದು, ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.

ಕಟೀಲು ಸೇರಿದಂತೆ ರಾಜ್ಯ ಮುಜ ರಾಯಿ ಇಲಾಖೆಗಳಿಗೆ ಸೇರ್ಪಡೆ ಗೊಂಡಿರುವ ದೇವಸ್ಥಾನಗಳಲ್ಲಿನ ನೌಕರರನ್ನು ಖಾಯಂಗೊಳಿಸುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇವಸ್ಥಾನಗಳೆಲ್ಲವನ್ನು ರಾಜ್ಯ ದತ್ತಿ ಇಲಾಖೆಗೆ ಸೇರ್ಪಡೆಗೊಳಿಸುವ ಬಗ್ಗೆ ನ್ಯಾಯಾಲಯದಲ್ಲಿ ಕೇಸು ನಡೆ ಯುತ್ತಿದ್ದು, ಅದು ಮುಗಿದ ಬಳಿಕ ಪರಿಶೀಲನೆ ನಡೆಸಲಾಗುವುದು ಎಂದರು.

ಈ ಸಂದರ್ಭ ದೇವಳದ ಅರ್ಚಕ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಶ್ರೀ ಕ್ಷೇತ್ರ ಪೆರಾರದ ಆಡಳಿತ ಮಂಡಳಿಯ ಅಧ್ಯಕ್ಷ ಸುಧೀರ್‌ಪ್ರಸಾದ್ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ತಾಪಂ ಮಾಜಿ ಸದಸ್ಯ ತಿಮ್ಮಪ್ಪಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

Write A Comment