ಕನ್ನಡ ವಾರ್ತೆಗಳು

ನಿವೇಶನ ರಹಿತರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಉಡುಪಿ ನಗರಸಭೆ ಕಛೇರಿ ಎದುರು ಪ್ರತಿಭಟನೆ

Pinterest LinkedIn Tumblr

ಉಡುಪಿ: ಅಧಿಕಾರಿ ವರ್ಗದವರು ಬಡವರ ಮೇಲೆ ದೌಜನ್ಯ ಮಾಡುವುದನ್ನು ಬಿಟ್ಟು, ಸರರ್ಕಾರದ ನಗರ ಸಭಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸುಮಾರು 369 ಎಕ್ರೆ ಜಮೀನಿನ ಸ್ಧಳವನ್ನು ಅನಧಿಕೃತವಾಗಿ ಅತಿಕ್ರಮಿಸಿರುವವರ ಮೇಲೆ ಕಾನೂನಿನ ಕ್ರಮತೆಗೆದುಕೊಳಬೇಕು, ಹಾಗೂ ಆ ಪ್ರದೇಶವನ್ನು ಕೂಡಲೇ ತೆರವು ಗೊಳಿಸಿ ಬಡನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಾಡಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಆಗ್ರಹಿಸಿದ್ದಾರೆ.

Udupi_Protest_Nagarasabhe (1) Udupi_Protest_Nagarasabhe (3) Udupi_Protest_Nagarasabhe (2) Udupi_Protest_Nagarasabhe (5) Udupi_Protest_Nagarasabhe (4) Udupi_Protest_Nagarasabhe (6)

ಕೃಷಿ ಕೂಲಿಕಾರರ ಸಂಘದ ನೇತ್ರತ್ವದಲ್ಲಿ ಉಡುಪಿ ನಗರ ಸಭಾ ವ್ಯಾಪ್ತಿಯ ಬಡ ನಿವೇಶನ ರಹಿತರಿಗೆ ನಿವೇಶದ ಹಕ್ಕು ಪತ್ರಕ್ಕೆ ಒತ್ತಾಯಿಸಿ, ಶುಕ್ರವಾರ ರಂದು ಉಡುಪಿ ನಗರ ಸಭೆ ಕಛೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. 1999ರಲ್ಲಿ ನಗರ ಸಭಾ ವ್ಯಾಪ್ತಿಯ ನಿವೇಶನ ರಹಿತರಿಂದ ಸುಮಾರು 500 ರಂತೆ ನಗದನ್ನು ಶುಲ್ಕದ ರೂಪದಲ್ಲಿ ಸಂಗ್ರಹಿಸಿ ಅರ್ಜಿ ಸ್ವೀಕರಿಸಿದ್ದು ಆದರೆ ಈತನಕ ಬಡ ನಿವೇಶನ ರಹಿತರಿಗೆ ಯಾವುದೇ ಹಕ್ಕು ಪತ್ರ ನೀಡದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನ ರಹಿತರಿಗೆ ಅನ್ಯಾಯವೆಸಗಿದೆ ಎಂದು ಆರೋಪಿಸಿದ್ದರು.

ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿ ಗ್ರಾಮವಾರು ಅರ್ಜಿಗಳನ್ನು ಗ್ರಾಮದ ಲೆಕ್ಕಾಧಿಕಾರಿಗಳ ಮೂಲಕ ತನಿಖೆ ನಡೆಸಿ ಅರ್ಹ ನಿವೇಶನ ರಹಿತರ ಒಟ್ಟು 2461 ಅರ್ಜೀಯನ್ನು ಉಡುಪಿ ತಹಶೀಲ್ದಾರರಿಗೆ ಕಳುಹಿಸಲಾಗಿದ್ದರೂ ಇದುವರೆಗೂ ಅಂತಿಮಾ ಹಂತದ ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಿಲ್ಲ. ಕೂಡಲೇ ಅಂತಿಮಾ ಪಟ್ಟಿ ಸಿದ್ಧಪಡಿಸಲು ಸೂಕ್ತ ಕ್ರಮ ವಹಿಸಬೇಕು ಎಂದರು.

ನಗರ ಸಭಾ ವ್ಯಾಪ್ತಿಯಲ್ಲಿ ಗುರುತಿಸಿರುವ 457 ನಿವೇಶನ ರಹಿತ ಅರ್ಜಿದಾರರಿಗೆ ಪ್ರಥಮ ಹಂತದ ’ಎ ಪಟ್ಟಿಯ ಆಧಾರದಲ್ಲಿ ಮನೆ ನಿವೇಶನ ರಹಿತರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಫ್ಲ್ಯಾಟ್ ನಿರ್ಮಾಣ ಮಾಡಿ ಹಂಚಲು ಕೂಡಲೇ ಕ್ರಮವಹಿಸಬೇಕು ಹಾಗೂ ಉಡುಪಿ ತಹಶೀಲ್ದಾರ್ ಕಛೇರಿಯಿಂದ ಗುರುತಿಸಿರುವ ಉಡುಪಿ ಹೋಬಳಿ ವ್ಯಾಪ್ತಿಯಲಿನ 25 ಗ್ರಾಮಗಳಲ್ಲಿ ೯೮೫ ಮಂದಿ 280.67 ಎಕ್ರೆ ಸರಕಾರಿ ಸಳ್ಧವನ್ನು ಅನಧಿಕೃತವಾಗಿ ಅಕ್ರಮಿಸಿಕೊಂಡಿರುವುದನ್ನು ಕೂಡಲೇ ತೆರವುಗೊಳಿಸಿ ಉಡುಪಿ ಪ್ಯಾಪ್ತಿಯಾ ನಿವೇಶನ ರಹಿತರಿಗೆ ನೀಡುವಂತೆ ಆಗ್ರಹಿಸಿದ್ದಾರೆ.

ಇದೇ ವೇಳೆ ಪ್ರತಿಭಟನಾಕಾರರು ಮತ್ತು ಪೌರಯುಕ್ತ ಅಧಿಕಾರಿಗಳ ನುಡುವೆ ಮಾತಿನ ಚಕಮಕ್ಕಿ ನಡೆಯಿತ್ತು,ಪೋಲಿಸರ್ ಮಧ್ಯ ಪ್ರವೇಶದರೊಂದಿಗೆ ಬಿಗುವಿನ ವಾತವರಣ ಶಾಂತವಾಯಿತ್ತು. ಪ್ರತಿಭಟನಾಕಾರರು ಉಡುಪಿ ಪೌರಯುಕ್ತರು ಮಂಜುನಾಧ ಅಯ್ಯ ಅವರಿಗೆ ಮನವಿ ಸಲ್ಲಿಸಿದ್ದರು,ಅಧಿಕಾರಿಯವರು ಸೂಕ್ತ ಕ್ರಮ ತೆಗೆದು ಕೊಳ್ಳುದಾಗಿ ತಿಳಿಸಿದ್ದರು.
ಒಂದು ವೇಳೆ ೨೦ದಿನದಲ್ಲಿ ಅಧಿಕಾರಿಗಳು ನಿವೇಶನ ಪಟ್ಟಿ ನೀಡುವಲಿ ಸೋತರೆ ೨೩೪೦ ನಿವೇಶನ ರಹಿತರು ಅನಿಧಿಷ್ಟಾವಧಿ ಸತ್ಯಗ್ರಹ ಮಾಡುದಾಗಿ ಪ್ರತಿಭಟ್ಟನಕಾರರು ತಿಳಿಸಿದ್ದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷರು ವಿಠಲ ಪೂಜಾರಿ,ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ಕೆ.ಲಕ್ಷಣ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕೋಶಾಧಿಕಾರಿಯಾದ ಉಮೇಶ್ ಕುಂದರ್,ರಾಜ್ಯ ಸಮಿತಿ ಸದಸ್ಯರಾದ ಕವಿರಾಜ್ ಉಪಸ್ಧಿತರು
ತಾಲ್ಲೂಕು ಮತ್ತು ತಹಶೀಲ್ದಾರ್ ಕಚೇರಿ ಬಿಟ್ಟರೇ ಬೇರೆಯಾವುದೇ ಸರರ್ಕಾರದ ಕಛೇರಿಯ ಮುಂದೆ ಪ್ರತಿಭಟನೆ ಮಾಡುವಂತೆ ಇಲ್ಲದ ಕಾರಣ ಉಡುಪಿ ಪೌರಯುಕ್ತರು ಐ.ಪಿ.ಸಿ ೧೭೧ ರ ಅನ್ವಯ ೬ ಮಂದಿ ಪ್ರತಿಭಟನಕಾರರ ಮೇಲೆ ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Write A Comment