ಕನ್ನಡ ವಾರ್ತೆಗಳು

ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ

Pinterest LinkedIn Tumblr

Sudesh_Shivann_Sathish3

ಮಂಗಳೂರು,ನವೆಂಬರ್.21 : ಕರ್ನಾಟಕ ಪತ್ರಕರ್ತರ ಸಂಘ(ರಿ) (ಕರ್ನಾಟಕ ಜರ್ನಲಿಸ್ಟ್ ಯೂನಿಯನ್) ಇದರ ಜಿಲ್ಲಾ ಸಮಿತಿಯನ್ನು ಪುನರ್ರಚಿಸಲಾಗಿದೆ. ಇದರ ಜಿಲ್ಲಾದ್ಯಕ್ಷರನ್ನಾಗಿ ಶ್ರೀ ಸುದೇಶ್ ಕುಮಾರ್‌ರವರನ್ನು ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಮುರುಗೇಶ್ ಬಿ ಶಿವಪೂಜಿಯವರು ಇನ್ನೊಂದು ಅವಧಿಗೆ ಮರುನೇಮಕ ಮಾಡಿರುತ್ತಾರೆ.

ಜಿಲ್ಲಾಧ್ಯಕ್ಷರಾಗಿ ಪುನರಾಯ್ಕೆಯಾದ ಸುದೇಶ್ ಕುಮಾರ್‌ರವರು ಜಿಲ್ಲಾ ಕಾರ್ಯಕಾರಿ ಸಮಿತಿಯಯನ್ನು ಪುನರ್ರಚಿಸಿದ್ದು, ಉಪಾಧ್ಯಕ್ಷರನ್ನಾಗಿ ಡಾ.ಶಿವಶರಣ್‌ ಶೆಟ್ಟಿಯವರನ್ನು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಸತೀಶ್ ಕಾಪಿಕಾಡ್‌ರವರನ್ನು, ಜೊತೆ ಕಾರ್ಯದರ್ಶಿಯಾಗಿ ಶ್ರೀ ಐಸಕ್ ರಿಚರ್ಡ್‌ರವರನ್ನು ಹಾಗೂ ಖಜಾಂಚಿಯಾಗಿ ಶ್ರೀ ಹಕೀಮ್‌ರವರನ್ನು ನಿಯುಕ್ತಗೊಳಿಸಿದ್ದಾರೆ.

ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಬಾವಾ ಪದರಂಗಿ, ವೈಲೆಟ್ ಪಿರೇರಾ, ಸದಾಶಿವದಾಸ್, ಅಶ್ವಿತ, ಮೊಹಮ್ಮದ್ ನಿಸಾರ್, ವೆಂಕಟೇಶ್ ಬೆಂಡೆ ಹಾಗೂ ವಿಶ್ವನಾಥ್ ಬಂಟ್ವಾಳ್‌ರವರು ಆಯ್ಕೆಯಾಗಿರುತ್ತಾರೆ.

Write A Comment