ಕನ್ನಡ ವಾರ್ತೆಗಳು

ಬಜ್ಪೆ ಗ್ರಾಮ ಪಂಚಾಯತ್ ಕಿನ್ನಿಪದವು ವಾರ್ಡ್ ನೂತನ ಅಂಗನವಾಡಿ ಕಟ್ಟಡ ಉಧ್ಘಾಟನೆ

Pinterest LinkedIn Tumblr

Bajpe_angavadi_pic_2

ಮಂಗಳೂರು,ನ.14: ಬಜ್ಪೆ ಗ್ರಾಮ ಪಂಚಾಯತ್ ಕಿನ್ನಿಪದವು ವಾರ್ಡ್ ನಲ್ಲಿ ನಿರ್ಮಾಣಗೊಂಡಿರುವ ನೂತನ ನವೀಕೃತ ಅಂಗನವಾಡಿ ಕಟ್ಟಡವನ್ನು ಶನಿವಾರ ಸಾರ್ವಜನಿಕರಿಗೆ ಹಸ್ತಾಂತರಿಸಲಾಯಿತು.

ಅಂಗನವಾಡಿ ಕಟ್ಟಡದ ಕೀಲಿ ಕೈ ಕಿನ್ನಿಪದವು ವಾರ್ಡ್ ಸದಸ್ಯರಾದ ನಜ್ಹೀರ್ ಕಿನ್ನಿಪದವು ಹಸ್ತಾಂತರಿಸಿದರು , ಬಜ್ಪೆ ಗ್ರಾಮ ಪಂಚಯಾತ್ ಅಧ್ಯಕ್ಷೆ ರೋಸಿ ಮಥಾಯಸ್ ಕಟ್ಟಡವನ್ನು ಉಧ್ಘಾಟಿಸಿದರು , ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶರೀಫ್ , ಸದಸ್ಯರಾದ ಸಿರಾಜ್ , ಮಮತಾ ,ಉದ್ಯಮಿ ರಾಮಚಂದ್ರ ಹಾಗು ಇನ್ನಿತರರು ಉಪಸ್ತಿತರಿದ್ದರು .

Bajpe_angavadi_pic_3

ಈ ವೇಳೆ ಮಾತನಾಡಿದ ಉದ್ಯಮಿ ರಾಮಚಂದ್ರ ಪಂಚಯಾತ್ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವುದಾಗಿ ತಿಳಿಸಿದರು , ನಂತರ ಮಾತನಾಡಿದ ಗ್ರಾಮ ಪಂಚಯಾತ್ ಅಧ್ಯಕ್ಷೆ ರೋಸಿ ಮಥಾಯಸ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಕಾರ್ಯಗಳನ್ನು ಮಾಡಲಿಕ್ಕಿದೆ ಎಂದರು.

ಈ ವೇಳೆ ಸಾರ್ವಜನಿಕರು ಇಷ್ಟೊಂದು ಸಣ್ಣ ಅವಧಿಯಲ್ಲಿ ಹಲಾವರು ಕೆಲಸಕಾರ್ಯಗಳನ್ನು ಮಾಡಿರುವ ಕಿನ್ನಿಪದವು ವಾರ್ಡ್ ಸದಸ್ಯರಾದ ನಜ್ಹೀರ್ ಕಿನ್ನಿಪದವು ರವರನ್ನು ಶ್ಲಾಘಿಸಿದರು .

ಇರ್ಶಾದ್ ಬಜ್ಪೆಯವರು ವಂದನೆ ಸಮರ್ಪಿಸಿದರು .

Write A Comment