ಕುಂದಾಪುರ: ಚಿತ್ರೀಕರಣದ ವೇಳೆ ಹೆಜ್ಜೇನು ದಾಳಿಗೊಳಗಾಗಿ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಗುರುವಾರ ಬೆಳಿಗ್ಗೆ ಆಸ್ಪತ್ರೆಯಿಂದ ಡಿಶ್ಚಾರ್ಜ್ (ಬಿಡುಗಡೆ) ಆಗಿದ್ದಾರೆ.
ನಾಗತಿಹಳ್ಳಿಯವರ ನಿರ್ದೇಶನದ ‘ಇಷ್ಟಕಾಮ್ಯ’ ಚಿತ್ರದ ಚಿತ್ರೀಕರಣಕ್ಕೆ ಅಣಿಯಾಗುವ ವೇಳೆ ವೇಳೆ ಶಿವಮೊಗ್ಗ ಸಮೀಪದ ನಗರದ ನಿಟ್ಟೂರು ಸಮೀಪದ ಬರ್ವೆ ಎಂಬಲ್ಲಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿತ್ತು. ಈ ವೇಳೆ ತಾಂತ್ರಿಕ ವಿಭಾಗದ ಕ್ರಷ್ಣ ಎನ್ನುವವರಿಗೆ ಜೇನುಕಡಿತದಿಂದ ಗಾಯಗಳಾಗಿದ್ದು ಇಬ್ಬರನ್ನೂ ಕೊಲ್ಲೂರಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ತೀವ್ರಾ ನಿಗಾ ವಿಭಾಗದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಬುಧವಾರ ಸಂಜೆ ವೇಳೆಗೆ ಚೇತರಿಸಿಕೊಂಡಿದ್ದ ‘ಮೇಸ್ಟ್ರು’ ಚಿತ್ರೀಕರಣ ತಂಡದ ಜೊತೆ ಮಾತನಾಡಿದ್ದರು. ಗುರುವಾರ ಬೆಳಿಗ್ಗೆ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿ ತೆರಳಿದ್ದು ಚಿತ್ರೀಕರಣಕ್ಕೆ ತೆರಳಿದ್ದಾರೆಂದು ಮೂಲಗಳು ತಿಳಿಸಿದೆ.
ಅಗ್ನಿಸಾಕ್ಷಿ ಖ್ಯಾತಿ ನಟ ವಿಜಯಸೂರ್ಯ ಹಾಗೂ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಅಭಿನಯದ ಇಷ್ಟಕಾಮ್ಯ ಚಿತ್ರ ಇದಾಗಿದ್ದು ಮಲೆನಾಡು ಭಾಗದಲ್ಲಿ ಶೂಟಿಂಗ್ ನಡೀತಾ ಇತ್ತು.
ವರದಿ- ಯೋಗೀಶ್ ಕುಂಭಾಸಿ
ನಾಗತಿಹಳ್ಳಿಗೆ ಹೆಜ್ಜೇನು ಕಡಿತ: ‘ಇಷ್ಟಕಾಮ್ಯ’ ಚಿತ್ರೀಕರಣದ ವೇಳೆ ನಿಟ್ಟೂರು ಸಮೀಪ ಘಟನೆ

