ಕನ್ನಡ ವಾರ್ತೆಗಳು

ಉಡುಪಿ: ಹಿಂದೂಪರ ಸಂಘಟನೆಗಳಿಂದ ನಾಳೆ ಜಿಲ್ಲೆಯಲ್ಲಿ ರಸ್ತೆ ರೊಕೋ; ಹಿಂ.ಜಾ.ವೇ. ಸಾಥ್| ಪೊಲೀಸ್ ಬಿಗು ಬಂದೋಬಸ್ತ್

Pinterest LinkedIn Tumblr

Bajarangadala_Protest kndpr_Tippu jayanthi (4)

(ಸಾಂದರ್ಭಿಕ ಚಿತ್ರ)

ಉಡುಪಿ: ಮಡಿಕೇರಿಯಲ್ಲಿ ಟಿಪ್ಪು ಜಯಂತಿ ದಿನದಂದು ನಡೆದ ಗುಂಪು ಘರ್ಷಣೆಯಲ್ಲಿ ವಿ.ಎಚ್.ಪಿ. ಮುಖಂಡ ಕುಟ್ಟಪ್ಪ ಸಾವನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಶುಕ್ರವಾರ ಮಧ್ಯಾಹ್ನ11 ಗಂಟೆಗೆ ರಸ್ತೆ ರೊಕೋ (ಹೆದ್ದಾರಿ ತಡೆ) ನಡೆಸಿ ಪ್ರತಿಭಟನೆ ನಡೆಸಲಿದೆ.

ಶುಕ್ರವಾರ 11 ಗಂಟೆಗೆ ಉಡುಪಿಯಲ್ಲಿ, ಕುಂದಾಪುರ ಶಾಸ್ತ್ರೀ ವ್ರತ್ತ ಹಾಗೂ ಬೈಂದೂರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಸಂಘಟನೆಗಳು ಪ್ರತಿಭಟನೆ ನಡೆಸಲಿದೆ. ಈ ವೇಳೆ ಯವುದೇ ಬಂದ್ ನಡೆಯುವುದಿಲ್ಲ ಎಂದು ಸಂಘಟಟನೆ ಮುಖಂಡರು ತಿಳಿಸಿದ್ದಾರೆ.

ಬಿಗು ಬಂದೋಬಸ್ತ್, ಪೊಲೀಸರು ಸಜ್ಜು:
ರಸ್ತೆ ತಡೆಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಸಜ್ಜಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ನಾಕಾಬಂದಿ ಹಾಕುವ ವ್ಯವಸ್ಥೆ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಅಲ್ಲದೇ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಹಿಂದೂಜಾಗರಣ ವೇದಿಕೆ ಪ್ರತಿಭಟನೆಗೆ ಸಾಥ್:
ಕೊಡಗಿನಲ್ಲಿ ಟಿಪ್ಪು ಜಯಂತಿಯ ಹೆಸರಿನಲ್ಲಿ ನಡೆದ ಕಾರ್ಯಕ್ರಮದ ನಂತರ ಜನರಲ್ ತಿಮ್ಮಯ್ಯ ಸರ್ಕಲ್ಲಿನಲ್ಲಿ ಶಾಂತವಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಏಕಾಏಕಿ ಆಕ್ರಮಣ ನಡೆಸಿ ವಿ.ಹಿಂ.ಪ.ದ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪನವರನ್ನು ಕೊಲೆ ಮಾಡಲಾಗಿದೆ ಎಂದು ಹಿಂದೂಜಾಗರಣ ವೇದಿಕೆ ಆರೋಪಿಸಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿದ್ದ ವಾಹನಗಳಲ್ಲಿ ರಾಡು, ದೊಣ್ಣೆ, ಕಲ್ಲುಗಳಿವೆ ಎಂಬ ಮಾಹಿತಿ ಇಲಾಖೆಗೆ ಕೊಟ್ಟರೂ ಏನೂ ಕ್ರಮ ಕೈಗೊಳ್ಳದ ಬಗ್ಗೆ, ಮೆರವಣಿಗೆಗೆ ಅವಕಾಶ ಇಲ್ಲದಿದ್ದರೂ ಭಿನ್ನಕೋಮಿನವರಿಗೆ ಮೆರವಣಿಗೆಗೆ ಅನುಮತಿ ಕೊಟ್ಟ ಬಗ್ಗೆ, ಪೋಲಿಸ್, ಗುಪ್ತಚರ ಇಲಾಖೆ ವೈಫಲ್ಯದ ಬಗ್ಗೆ, ಜಿಲ್ಲಾಧಿಕಾರಿಯವರ ರಜೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿಂ.ಜಾ.ವೇ. ಕುಟ್ಟಪ್ಪನವರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದೆ.

ಪ್ರತಿಭಟನೆಗಳಿಗೆ ಬೆಂಬಲ: ಘಟನೆಯನ್ನು ಖಂಡಿಸಿದ ಹಿಂ.ಜಾ.ವೇ. ಕುಟ್ಟಪ್ಪನವರ ಕೊಲೆ ವಿರೋಧಿಸಿ ನಡೆಯುವ ಎಲ್ಲಾ ರೀತಿಯ ಪ್ರತಿಭಟನೆಗಳಿಗೆ ಹಿಂದು ಜಾಗರಣ ವೇದಿಕೆ ಬೆಂಬಲ ನೀಡಲಿದೆ. ಈ ಘಟನೆಯಲ್ಲಿ ಮೃತರಾದವರೆಲ್ಲರಿಗೂ ಸರ್ಕಾರ ದೊಡ್ಡಮೊತ್ತದ ಪರಿಹಾರ ನೀಡಬೇಕೆಂದು ಮತ್ತು ಈ ಘಟನೆಯನ್ನು ನ್ಯಾಯಾಂಗ ಅಥವಾ ಸಿ.ಬಿ.ಐ.ತನಿಖೆಗೆ ಒಪ್ಪಿಸಬೇಕೆಂದು ಹಿಂದು ಜಾಗರಣ ವೇದಿಕೆ, ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಹಿಂದೂಜಾಗರಣ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಅಚ್ಚುತ್ ಕಲ್ಮಾಡಿ, ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Write A Comment