ಕನ್ನಡ ವಾರ್ತೆಗಳು

ಕೋಮು ಶಕ್ತಿಗಳನ್ನು ಮಟ್ಟಹಾಕಲು ಸಿದ್ದರಿದ್ದೇವೆ: ಉಡುಪಿಯಲ್ಲಿ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್

Pinterest LinkedIn Tumblr

ಉಡುಪಿ: ಶಾಂತಿ ಸಹಬಾಳ್ವೆಯಿಂದ ಬಾಳುತ್ತಿದ್ದ ಕರಾವಳಿಗರು ಇಂದು ಕೊಂಚ ಸಮಸ್ಯೆ ಅನುಭವಿಸುವಂತಾಗಿದೆ. ವಿದ್ಯಾವಂತರ ಈ ಜಿಲ್ಲೆಯಲ್ಲಿ ಧರ್ಮಧರ್ಮದ ನಡುವೆ ಹೊಡೆದಾಟ ಆರಂಭವಾಗಿದೆ. ಕೋಮುವಾದಿ ಶಕ್ತಿಗಳಿಗೆ ಕಾನೂನು ಕೈಗೆತ್ತಿಕೊಳ್ಳುವ ಹಕ್ಕನ್ನು ಕೊಟ್ಟವರ್ಯಾರು ಎಂಬ ಪ್ರಷ್ನೆ ಕಾಡುತ್ತಿದೆ. ಕೋಮುವಾದಿ ಶಕ್ತಿಗಳು ಇತ್ತೀಚೆಗಿನ ದಿನಗಳಲ್ಲಿ ಜನರಲ್ಲಿ ಹೆಚ್ಚು ಹೆಚ್ಚು ಆತಂಕ ಸೃಷ್ಟಿಸುವ ಕಾರ್ಯ ಮಾಡುತ್ತಿದೆ. ಕೋಮುವಾದಿ ಶಕ್ತಿಗಳನ್ನು ಸಮಾಜದಲ್ಲಿ ಶಾಂತಿ ನೆಲೆ ಸುವಂತೆ ಮಾಡುವುದು ಕಾಂಗ್ರೆಸ್ ನ ಕರ್ತವ್ಯವಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಅವರು ಉಡುಪಿಯ ಸಾಲಿಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಕೋಟ ಬ್ಲಾಕ್ ಕಾಂಗ್ರೆಸ್ ಕಛೇರಿ ‘ಇಂದಿರಾ ಭವನ’ನ್ನು ಉದ್ಘಾಟಿಸಿ ಮಾತನಾಡಿದರು.

Homeminister_Da Parameshwar_Saligrama block congress (6) Homeminister_Da Parameshwar_Saligrama block congress (7) Homeminister_Da Parameshwar_Saligrama block congress (3) Homeminister_Da Parameshwar_Saligrama block congress (5) Homeminister_Da Parameshwar_Saligrama block congress (1) Homeminister_Da Parameshwar_Saligrama block congress (16) Homeminister_Da Parameshwar_Saligrama block congress (15) Homeminister_Da Parameshwar_Saligrama block congress (11) Homeminister_Da Parameshwar_Saligrama block congress (12) Homeminister_Da Parameshwar_Saligrama block congress (13) Homeminister_Da Parameshwar_Saligrama block congress (18) Homeminister_Da Parameshwar_Saligrama block congress (17) Homeminister_Da Parameshwar_Saligrama block congress (10) Homeminister_Da Parameshwar_Saligrama block congress (9) Homeminister_Da Parameshwar_Saligrama block congress (8) Homeminister_Da Parameshwar_Saligrama block congress (4) Homeminister_Da Parameshwar_Saligrama block congress (2) Homeminister_Da Parameshwar_Saligrama block congress (14)

ಭಾರತ ದೇಶವು ಉತ್ತಮ ಸಂವಿಧಾನ ವ್ಯವಸ್ಥೆ ಹೊಂದಿದ್ದು ಇತ್ತೀಚೆಗೆ ಕೆಲವು ಕೋಮು ಶಕ್ತಿಗಳು ಶಾಂತಿಭಂಗಕ್ಕೆ ಮುಂದಗಿದೆ. ಶಾಂತಿ ಕದಡುವರ ವಿರುದ್ಧ ಸಂಘಟಿತರಾಗಿ ಹೋರಾಡಿ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುವಂತೆ ಮಾಡಬೇಕಿದೆ. ಕೋಟ ಬ್ಲಾಕ್ ಕಾಂಗ್ರೆಸ್ ಕಟ್ಟಡ ನಿರ್ಮಾಣದಲ್ಲಿ ಹಲವರು ತನುಮನ ಧನ ಸಹಕಾರ ನೀಡಿದ್ದು ಅವರಿಗೆ ಅಭಿನಂದನೆ ಸಲ್ಲಿಸಿದ ಗೃಹ ಸಚಿವರು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ವತಿಯಿಂದ ಐದು ಲಕ್ಷ ನೀಡುವುದಾಗಿಯೂ ತಿಳಿಸಿದರು.

ಬಿಜೆಪಿ ಹಾಗೂ ಅದರ ನಾಯಕರ ನಿಜ ಬಣ್ಣ ಬಿಹಾರ ಚುನಾವಣೆ ಫಲಿತಾಂಶದ ಮೂಲಕ ಬಯಲಾಗಿದೆ. ಕೇಂದ್ರ ಸರಕಾರದ ಮೇಲಿದ್ದ ನಂಬಿಕೆ ಯನ್ನು ಜನ ಕಳೆದುಕೊಂಡಿದ್ದಾರೆ. ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು ಎಂದು ಅವರು ತಿಳಿಸಿದರು. ಸೋಶಿಯಾಲ್ ಮೀಡಿಯಾ ಮೂಲಕ ಶಾಂತಿ ಕದಡುವವರ ವಿರುದ್ಧ ಹಾಗೂ ಅನೈತಿಕ ಪೊಲೀಸ್ ಗಿರಿ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಬಗ್ಗೆ ಕೇಂದ್ರ ಸರಕಾರ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದು ಇದರ ಪರಿಣಾಮವೇ ಬಿಹಾರ ಚುನಾವಣೆಯಲ್ಲಿ ಸಿಕ್ಕಿದ ಪಲಿತಾಂಶ ಎಂದರು.

ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ, ಚುನಾವಣೆಗಳಲ್ಲಿ ಕಾಂಗ್ರೆಸ್ ಕೈಯನ್ನು ಜನರು ಹಿಡಿಯುತ್ತಿದ್ದಾರೆನ್ನುವುದಕ್ಕೆ ಬಿಹಾರ್ ಚುನಾವಣೆಯ ಪಲಿತಾಂಶ ಸಾಕ್ಷಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಪ್ರತಾಪ್‍ಚಂದ್ರ ಶೆಟ್ಟಿ,ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಭ್ಲೋಸಮ್ ಫೆರ್ನಾಂಡಿಸ್, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ಎ. ಗಫೂರ್, ಮಾಜಿ ಶಾಸಕ ಗೋಪಾಲ್ ಭಂಡಾರಿ, ಕರ್ನಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯಾ, ಕೆ.ಎಫ್.ಡಿ.ಸಿ. ಅಧ್ಯಕ್ಷ ಹಿರಿಯಣ್ಣ ಮೊದಲಾದವರಿದ್ದರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇದೇ ಸಂದರ್ಭ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಕಟ್ಟಡ ನಿರ್ಮಾಡಲ್ಲಿ ಸಹಕಾರವಿತ್ತವರನ್ನು ಮತ್ತು ಇತ್ತೀಚೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೇದ ಇಬ್ರಾಹಿಂ ಸಾಹೇಬ್ ಅವರನ್ನು ಗೌರವಿಸಲಾಯಿತು.

Write A Comment