ಕನ್ನಡ ವಾರ್ತೆಗಳು

ಉಡುಪಿ: ನಗ್ನ ಸ್ಥಿತಿಯಲ್ಲಿ ಮಸೀದಿಯ ಮಿನಾರ್ ಏರಿ ಕುಳಿತು ಆತಂಕ ಸ್ರಷ್ಟಿಸಿದ ಯುವಕ..!

Pinterest LinkedIn Tumblr

ಉಡುಪಿ: ಐವತ್ತು ಅಡಿ ಎತ್ತರವಿರುವ ಮಸೀದಿಯ ಮೇಲಿನ ಮೀನಾರದ ಮೇಲೆ ನಗ್ನ ಸ್ಥಿತಿಯಲ್ಲಿ ಹತ್ತಿ ಕುಳಿತು ಜನ ಬೆಚ್ಚಿ ಬೀಳಿಸಿ ಕ್ಷಣ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದ ಘಟನೆಯೊಂದು ಕಾಪು ಸಮೀಪದ ಕೊಂಬಗುಡ್ಡೆಯ ಗೌಸಿಯಾ ಜಾಮಿಯಾ ಮಸೀದಿಯಲ್ಲಿ ನಡೆದಿದೆ.

Udp_Youth_Maseed Top (5) Udp_Youth_Maseed Top (1) Udp_Youth_Maseed Top (4) Udp_Youth_Maseed Top (3) Udp_Youth_Maseed Top (2)

ಭಾನುವಾರ ಸಾಯಂಕಾಲ ಯಾರು ಇಲ್ಲದ ಸಮಯದಲ್ಲಿ ಏಣಿಯ ಸಹಾಯವಿಲ್ಲದೆ ಹತ್ತಲು ಅಸಾಧ್ಯವಾದಂತಹ ಮಸೀದಿಯ ಮಹಡಿಯಿಂದ ಸುಮಾರು ಮೂವತ್ತು ಅಡಿ ಎತ್ತರದಲ್ಲಿರುವ ಮಿನಾರದ ನಗ್ನ ಸ್ಥಿತಿಯಲ್ಲಿ ಹತ್ತಿ ಕುಳಿತಿರುವುದು ಸ್ಥಳೀಯರ ಗಮನಕ್ಕೆ ಬಂತು ತಕ್ಷಣ ಸ್ಥಳದಲ್ಲಿ ನೂರಾರು ಜನ ಜಮಾವನೆಗೊಂಡು ಅಗ್ನಿಶಾಮಕಧಳವನ್ನು ಕರೆಸಿದರು.ಅಗ್ನಿಶಾಮಕಧಳದ ಸಿಬ್ಬಂದಿಗಳು ಏಣಿಯನ್ನಿಟ್ಟು ಮಿನಾರದ ಮೇಲೆ ಹತ್ತಿ ಆತನಿಗೆ ವಸ್ರವನ್ನು ಕೊಟ್ಟು ಹಗ್ಗವನ್ನು ಕಟ್ಟಿ ಆತನನ್ನು ಕೆಳಗಿಳಿಸಲು ಎಷ್ಟೇ ಪ್ರಯತ್ನಿಸಿದರೂ ಕೂಡ ಆತ ನಿರಾಕರಿಸಿದ ಸುಮಾರು ಒಂದು ತಾಸು ಅಗ್ನಿಶಾಮಕಧಳ ಮತ್ತು ಸ್ಥಳೀಯ ಯುವಕರು ಮಾತು ಕೇಳಲಿಲ್ಲ.

ಕೊನೆಗೆ ಯುವಕರ ತಂಡವೊಂದು ಕೆಳಗಡೆಯಿಂದ ಮುಂಜಾಗೃತವಾಗಿ ಹಿಡಿದು ಕಾಯುತ್ತಿದ್ದ ಬಟ್ಟೆಗೆ ಅಲ್ಲಾಹನ ನಾಮವನ್ನು ಉಚ್ಚರಿಸುತ್ತಾ ಹಾರಿದ. ಈತ ಮೂಲತ ಬಿಹಾರದವನಾಗಿದ್ದು ಮಜೂರು ಪರಿಸರದಲ್ಲಿ ಸುತ್ತಾಡುತ್ತಿದ್ದ ಈತನ ಹೆಸರು ಆಲಂ ಎಂದು ತಿಳಿದು ಬಂದಿದೆ. ತಕ್ಷಣ ಕಾಪುವಿನ ಸೂರಿ ಎಂಬವರು ಆಂಬುಲೆನ್ಸ್ ನಲ್ಲಿ ಆತನನ್ನು ಆಸ್ಪತ್ರೆಗೆಗಾಗಿ ಕರೆದೊಯ್ದಾಗ ಆತ ರಸ್ತೆ ಮಧ್ಯೆ ವಾಹನದಿಂದ ಹಾರಿ ಓಡಿದಾತನನ್ನು ಹಿಡಿದು ತಂದು ಕೊನೆಗೆ ಕಾಪು ಪೊಲೀಸರಿಗೆ ಒಪ್ಪಿಸಿದ್ದಾರೆ.

Write A Comment