ಕನ್ನಡ ವಾರ್ತೆಗಳು

ಕುಂದಾಪುರ ಮಹಿಳಾ ಠಾಣೆ ಉಡುಪಿಗೆ ಸ್ಥಳಾಂತರ ಮಾಡುವುದು ಸರಿಯಲ್ಲ: ಎಚ್.ನರಸಿಂಹ

Pinterest LinkedIn Tumblr

ಕುಂದಾಪುರ: ಕುಂದಾಪುರದಲ್ಲಿರುವ ಮಹಿಳಾ ಠಾಣೆಯನ್ನು ಉಡುಪಿಗೆ ವರ್ಗಾಯಿಸುವ ಜನರಿಗೆ ಸಮಸ್ಯೆ ಮಾಡುವ ಬಹುದೊಡ್ಡ ಹುನ್ನಾರ ನಡೆಯುತ್ತಿದೆ. ಇದರಿಂದ ಈ ಭಾಗದ ಮಹಿಳೆಯರಿಗೆ ಅನಾನುಕೂಲವಾಗುವುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು, ಕುಂದಾಪುರ ಮಹಿಳಾ ಠಾಣೆ ಸ್ಥಳಾಂತರ ಮಾಡಬಾರದು ಎಂದು ಸಿಪಿಐಎಂನ ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ ಆಗ್ರಹಿಸಿದರು.

ಕುಂದಾಪುರ ಶಾಸ್ತ್ರಿವೃತ್ತದಲ್ಲಿ ನಡೆದ ಸಿಪಿಐಎಂ ಬೈಂದೂರು ಹಾಗೂ ಕುಂದಾಪುರ ವಲಯ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

Kndpr_CPIM_Protest (1) Kndpr_CPIM_Protest (6) Kndpr_CPIM_Protest (3) Kndpr_CPIM_Protest (8) Kndpr_CPIM_Protest (7) Kndpr_CPIM_Protest (2) Kndpr_CPIM_Protest (4) Kndpr_CPIM_Protest (5)

ರೈತರ ಆತ್ಮಹತ್ಯೆಗೆ ಸೂಕ್ತ ಪರಿಹಾರವನ್ನು ಕೊಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ರಾಜ್ಯದಲ್ಲಿ ಜನಸಾಮಾನ್ಯರನ್ನು ಕಾಡುವ ಅನೇಕ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ರಾಜ್ಯ ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಸರ್ಕಾರವೇ ವಿದ್ಯುತ್ ದರ ಹೆಚ್ಚಿಸಿಕೊಂಡು, ಇದೀಗ ವಿದ್ಯುತ್ ಬಿಲ್ ಆಧರಿಸಿ ಬಿಪಿಎಲ್ ಕಾರ್ಡ್ ರದ್ದುಮಾಡುವುದು ಸರ್ಕಾರದ ಬೇಜವಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ. ಮಹತ್ವಾಕಾಂಕ್ಷಿ ಯೋಜನೆಗಳಾಗಿದ್ದ ವರಾಹಿ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದೆ ಭ್ರಷ್ಟಾಚಾರದ ಹಣೆಪಟ್ಟಿ ಕಟ್ಟಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. . ಖಾಸಗೀ ಬಸ್ಸು ಮಾಲಕರು ಜನರನ್ನು ಅವ್ಯಾಹತವಾಗಿ ಲೂಟಿ ಮಾಡುತ್ತಿದ್ದಾರೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ವಿಫರೀತ ಇಳಿಕೆಯಾಗಿದ್ದರೂ ಅದರ ಪ್ರಯೋಜನ ಜನರಿಗೆ ಲಭಿಸದ ಹಾಗೆ ಕೇಂದ್ರ ಸರಕಾರ ಪದೇ ಪದೇ ತೆರಿಗೆಗಳನ್ನು ಹೆಚ್ಚಿಸಿ ಜನರನ್ನು ವಂಚಿಸಿದೆ. ರಾಜ್ಯ ಸರಕಾರವೂ ಕೂಡ ಹಬ್ಬ ಹರಿದಿನ ಶಾಲಾ ಮಕ್ಕಳ ಬೇಸಿಗೆ ರಜಾ ವೇಳೆಯಲ್ಲಿ ಸರಕಾರ ಸ್ವಾಮ್ಯಕ್ಕೆ ಒಳಪಟ್ಟ ಬಸ್ಸುಗಳ ಪ್ರಯಾಣ ದರ ದುಪ್ಪಟ್ಟು ಹೆಚ್ಚು ಮಾಡುವುದರಿಂದ ಪ್ರಾಥಮಿಕ ಬಸ್ಸು ಮಾಲಕರು ಈ ಸಂದರ್ಭ ಉಪಯೋಗಿಸಿ, ಜನರನ್ನು ವಂಚಿಸುತ್ತಿದ್ದಾರೆ. ಆದ್ದರಿಂದ ಕಾರವಾರ-ಬೆಂಗಳೂರಿನ ರೈಲು ವೇಗ ಹೆಚ್ಚಳ ಮಾಡಿ ಜೋಡು ರೈಲು ಮಾರ್ಗ ಅಳವಡಿಸಿ ಮತ್ತೊಂದು ರೈಲು ಬೆಂಗಳೂರಿಗೆ ಆರಂಭಿಸಲು ಸರ್ಕಾರ ಮುಂದಾಗಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಮಹಾಬಲ ವಡೇರಹೋಬಳಿ, ಕೆ.ಎಮ್ ಬಾಲಕೃಷ್ಣ, ರಾಜೇಶ್ ವಡೇರಹೋಬಳಿ, ಲಕ್ಷ್ಮಣ್ ಹೆಮ್ಮಾಡಿ, ರಾಜಾ ಬಿಟಿಆರ್, ರಾಜು ದೇವಾಡಿಗ, ಗಣೇಶ್ ಕಲ್ಲಾಗರ್ ಉಪಸ್ಥಿತರಿದ್ದರು.

Write A Comment