ಕನ್ನಡ ವಾರ್ತೆಗಳು

ರಾಜ್ಯ ಸರ್ಕಾರದಿಂದ ಟಿಪ್ಪು ಸುಲ್ತಾನ ಜನ್ಮ ದಿನಾಚರಣೆ : ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ ವಿರೋಧ -ಪ್ರತಿಭಟನೆ

Pinterest LinkedIn Tumblr

Tippu_brday_protets_1

ಮಂಗಳೂರು,ನ.06: ಕರ್ನಾಟಕ ಸರಕಾರ ಸರ್ಕಾರಿ ಖರ್ಚಿನಲ್ಲಿ ಕ್ರೈಸ್ತ ವಿರೋಧಿ ಟಿಪ್ಪು ಸುಲ್ತಾನ್‌ನ ಜನ್ಮದಿನಾಚರಣೆ ಆಚರಿಸಲು ತೀರ್ಮಾನಿಸಿರುವುದನ್ನು ವಿರೋಧಿಸಿ ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ ಸದಸ್ಯರು ಶುಕ್ರವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ರೋಬಾರ್ಟ್ ರೋಸಾರಿಯೋ ಅವರು, ಭಾರತದ ಇತಿಹಾಸದಲ್ಲೇ ಅತೀ ದೊಡ್ಡ ಕ್ರೈಸ್ತ ವಿರೋಧಿ , ಚರ್ಚ್ ದ್ವಸಂಕ, ಕ್ರೈಸ್ತರ ಬೃಹತ್ ಸಾವು ನೋವಿಗಳಿಗೆ ಕಾರಣರಾದ ಟಿಪ್ಪು ಸುಲ್ತಾನನ ಜನ್ಮ ದಿನಾಚರಣೆಯನ್ನು ಕರ್ನಾಟಕ ಸರಕಾರ ಸರಕಾರಿ ಖರ್ಚಿನಲ್ಲಿ ಆಚರಿಸಲು ಸಿದ್ದತೆ ನಡೆಸುತ್ತಿರುವ ಸುದ್ದಿ ತಿಳಿದು ನಮಗೆ ದಿಗ್ಬ್ರಾಂತವಾಗಿದೆ ಹಾಗೂ ಅತೀವ ನೋವು ಸಂಕಟವಾಗಿದೆ. ಸರಕಾರ ಈ ಕೂಡಲೇ ತನ್ನ ಈ ನಿರ್ಧಾರವನ್ನು ಹಿಂತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು.

Tippu_brday_protets_2 Tippu_brday_protets_3 Tippu_brday_protets_4 Tippu_brday_protets_5

ಕರಾವಳಿ, ಮಳೆನಾಡು ಕರ್ನಾಟಕದ ಜಿಲ್ಲೆಗಳಾದ ಉತ್ತರಕನ್ನಡ ಜಿಲ್ಲೆಯ ಕ್ರೈಸ್ತರನ್ನು ಟಿಪ್ಪು ಸುಲ್ತಾನ್ ತನ್ನ ಅಧಿಕಾರಾವಧಿಯಲ್ಲಿ ಅತೀವವಾಗಿ ಪೀಡಿಸಿದ್ದನು. ಇದು ಕೆನಾರಾ ಕ್ರೈಸ್ತರ ಬಂಧನವೆಂದು ಚರಿತ್ರೆಯಲ್ಲಿ ದಾಖಲಾಗಿದೆ. ಸುಮಾರು 80 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನಮ್ಮ ಪೂರ್ವಜರನ್ನು ಟಿಪ್ಪು ಸುಲ್ತಾನನು ಬಂಧನಕ್ಕೊಳಪಡಿಸಿದ್ದನು. ಹಲವರ ಹತ್ಯೆಗೈದಿದ್ದನು. ಕರಾವಳಿಯಿಂದ ಶ್ರೀರಂಗ ಪಟ್ಟಣದವರೆಗೆ ಕಾಲ್ನಡಿಗೆಯಲ್ಲಿ ಬಂಧಿತರನ್ನು ಸಾಗಿಸುವಾಗ ಹಲವರು ದಾರಿ ಮಧ್ಯದಲ್ಲಿಯೇ ಸಾವನ್ನಪ್ಪಿದ್ದರು. ಮಕ್ಕಳು ಮಹಿಳೆಯರು ಎನ್ನದೆ ಎಲ್ಲರನ್ನು ಈ ರೀತಿ ಬಂಧಿಸಲಾಗಿತು. ಟಿಪ್ಪುವಿನ ಮರಣಾನಂತರ ಬರೀ 20 ಸಾವಿರದಷ್ಟು ಮಂದಿ ಮಾತ್ರ ಹಿಂತಿರುಗಿ ತಮ್ಮ ನೆಲೆಯನ್ನು ಮರು ಸ್ಥಾಪಿಸಿದ್ದರು, ಇನ್ನುಳಿದ 60 ಸಾವಿರದಷ್ಟು ಮಂದಿ ಹಿಂಸೆಗೆ ಬಲಿಯಾಗಿ ಸಾವನ್ನಪ್ಪಿದ್ದರು. ಇಂತಹ ಒಬ್ಬ ಮಾಹನ್ ಕ್ರೂರಿಯ ಜನ್ಮದಿನಾಚರಣೆಯನ್ನು ಸಾರ್ವಜನಿಕರ ತೆರಿಗೆ ಹಣದಲ್ಲಿ ಆಚರಿಸುವುದನ್ನು ನಾವು ವಿರೋಧಿಸುತ್ತೇವೆ ಎಂದು ರೋಬಾರ್ಟ್ ರೋಸಾರಿಯೋ ಆಕ್ರೋಷ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಇತಿಹಾಸ ಉಪನ್ಯಾಸಕ ಎಮ್.ಆರ್ ಪ್ರಭು ಅವರು ಮಾತನಾಡಿ ,ಇಂತಹ ರಕ್ತಸಿಕ್ತ ಇತಿಹಾಸವನ್ನು ಮತ್ತೆ ಕೆದಕಿ, ಸಂತ್ರಸ್ತರ ಗಾಯಗಳಿಗೆ ಉಪ್ಪು ಎರಚುವ ಕೆಲಸಕ್ಕೆ ಕರ್ನಾಟಕ ಸರಕಾರ ಕೈ ಹಾಕಿದ್ದು ತೀರಾ ದುರದೃಷ್ಟಕರ, ಸರಕಾರವು ತನ್ನ ನಿರ್ಧಾರವನ್ನು ಈ ಕೂಡಲೇ ಹಿಂಪಡೆದು , ದುರಳನೊಬ್ಬನ ವೈಭವಿಕರಣವನ್ನು ತಪ್ಪಿಸಿ ಕರ್ನಾಟಕದ ನೆಲೆಯಲ್ಲಿ ಶಾಂತಿ ಸಮೃದ್ದಿ ನೆಲೆಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ತ್ರೀವೃ ಸ್ವರೂಪದ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.

ಖ್ಯಾತ ಕೊಂಕಣಿ ಲೇಖಕ ಮರ್ಸಿ ಡೇಸಾ ಹಾಗೂ ಸಂಘದ ಇತರ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Write A Comment