ಕನ್ನಡ ವಾರ್ತೆಗಳು

ರೆಡ್‌ಕ್ರಾಸ್: ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಹೊಸ ತಂಡ.

Pinterest LinkedIn Tumblr

Red_cross_photo

ಮಂಗಳೂರು,ನ.05: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆದಿದ್ದು 10 ಮಂದಿ ಆಯ್ಕೆಯಾಗಿದ್ದಾರೆ.

ಕೆಲವರು ಪ್ರತ್ಯೇಕವಾಗಿ ಮತ್ತು ಇನ್ನು ಕೆಲವರು ತಂಡವನ್ನು ರಚಿಸಿಕೊಂಡು ಚುನಾವಣಾ ಕಣಕ್ಕಿಳಿದಿದ್ದರು. ಅಂತಿಮವಾಗಿ ಸಿ.ಎ. ಶಾಂತಾರಾಮ ಶೆಟ್ಟಿ ಹಾಗೂ ಪ್ರಭಾಕರ ಶ್ರೀಯಾನ್ ನೇತೃತ್ವದ ತಂಡದ ಸದಸ್ಯರು ಜಯ ಗಳಿಸಿದ್ದಾರೆ.

ನ.೧ರಂದು ಬೆಳಿಗ್ಗೆ 9 ರಿಂದ ಸಂಜೆ 4 ರ ವರೆಗೆ ಮತದಾನ ನಡೆಯಿತು. ಸಂಜೆ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ತಡರಾತ್ರಿ ಫಲಿತಾಂಶ ಪ್ರಕಟಿಸಲಾಯಿತು.

ಸಿ.ಎ. ಶಾಂತಾರಾಮ ಶೆಟ್ಟಿ ೪೪೯ ಮತ, ರವೀಂದ್ರನಾಥ್ ೪೪೧, ಡಾ. ಸುಶೀಲ್ ಜತ್ತನ್ನ 427, ಬಿ. ನಿತ್ಯಾನಂದ ಶೆಟ್ಟಿ 417, ದಯಾನಂದ ಶೆಟ್ಟಿ 400, ಪ್ರಭಾಕರ ಶ್ರೀಯಾನ್ 400, ವಸಂತ ಶೆಣೈ 385,  ದಿನೇಶ್ ಬಿ.ರಾವ್ 374, ವೇಣು ಶರ್ಮಾ 374 ಹಾಗೂ ಸಚೇತ್ ಸುವರ್ಣ 359 ಮತಗಳನ್ನು ಪಡೆದುಕೊಂಡಿದ್ದಾರೆ.

ಪ್ರಭಾಕರ ಶ್ರೀಯಾನ್, ರವೀಂದ್ರನಾಥ್, ಸಿ.ಎ. ಶಾಂತಾರಾಮ ಶೆಟ್ಟಿ, ಮುಂತಾದ ಹಿರಿಯರ ಈ ತಂಡ ಎಲ್ಲಾ ೧೦ ಸ್ಥಾನಗಳನ್ನು ಗೆದಿದ್ದು ರೆಡ್‌ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕೆಲಸವನ್ನು ಇನ್ನಷ್ಟು ಕ್ರಿಯಾಶೀಲವಾಗಿ ಮುನ್ನಡೆಸಬೇಕಾಗಿದೆ.

`ರೆಡ್‌ಕ್ರಾಸ್’ ಕೇವಲ ಬ್ಲಡ್‌ಬ್ಯಾಂಕ್‌ಗೆ ಸೀಮಿತವಾಗಿರದೆ, ಸಂಸ್ಥೆಯ ಧ್ಯೇಯೋಧ್ದೇಶಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ಹೊಂದಿದೆ. ಈ ಕಾರ್ಯದಲ್ಲಿ ತಾವು ಮುನ್ನಡೆಯುವುದಾಗಿ ಅತ್ಯಧಿಕ ಮತ ಪಡೆದ ಸಿ.ಎ. ಶಾಂತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment