ಕನ್ನಡ ವಾರ್ತೆಗಳು

ಶ್ರೀಮತಿ ಸುಮನ. ಬಿ ಅವರಿಗೆ ಚಾರ್ಟೆರ್ಡ್ ಅಕೌಂಟೆಂಟ್ ಪ್ರಶಸ್ತಿ ಪ್ರದಾನ.

Pinterest LinkedIn Tumblr

Charted_acount_award_sumana

ಮಂಗಳೂರು,ನ.05 : ಕಾವೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ಸುಮನ ಬಿ. ಇವರು ಸೆಂಟ್ ಆನ್ಸ್ ಕಾಲೇಜ್ ಆಫ್ ಎಜುಕೇಷನ್ (ಸ್ವಯತ್ತ) ಕಳೆದ ಸಾಲಿನಲ್ಲಿ ನಡೆಸಿದ ಬಿ.ಎಡ್. ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿದ್ದು, ಗುರುವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಕೆ. ಬೈರಪ್ಪರವರು ಸೆಂಟ್ ಆನ್ಸ್ ಶಿಕ್ಷಣ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಕೊಡಮಾಡುವ ನಗದು ಬಹುಮಾನ ಹಾಗೂ ಸಾಮಾನ್ಯ ವಿಷಯಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಹಿನ್ನಲೆಯಲ್ಲಿ ನೀಡಲಾಗುವ ಶ್ರೀ ಎಲ್.ಸಿ. ರೊಡ್ರಿಗಸ್, ಚಾರ್ಟೆರ್ಡ್ ಅಕೌಂಟೆಂಟ್ ಪ್ರಶಸ್ತಿಯನ್ನು ವಿತರಿಸಿದರು.

ಇವರು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರ ಕಾರ್ಯದರ್ಶಿ ಶ್ರೀ ಕೆ. ಸುಧಾಕರ ಇವರ ಪತ್ನಿ.

Write A Comment