ಕನ್ನಡ ವಾರ್ತೆಗಳು

ಎಸ್ಸೆಸ್ಸೆಫ್ ಪ್ರತಿಭೋತ್ಸವ 2015: ಜಿಲ್ಲಾ ಮಟ್ಟಕ್ಕೆ ಆಯ್ಕೆ

Pinterest LinkedIn Tumblr

Rajya_Matake_Ayike

ಉಳ್ಳಾಲ. ಆ, 21:  ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ವತಿಯಿಂದ ಮಂಜನಾಡಿಯ ಅಲ್ ಮದೀನಾ ಕ್ಯಾಂಪಸ್‌ನಲ್ಲಿ ನಡೆದ  2015ನೇ ಸಾಲಿನ ಪ್ರತಿಭೋತ್ಸವದಲ್ಲಿ ಜೂನಿಯರ್ ವಿಭಾಗದ ಕನ್ನಡ ಹಾಡು ಮತ್ತು ಕನ್ನಡ ಸಮೂಹ ಹಾಡುಗಳಲ್ಲಿ ಮುಹಮ್ಮದ್ ಇಸ್ತಿಹಾಖ್, ಮುಹಮ್ಮದ್ ಹಫೀಫ್, ಮುಹಮ್ಮದ್ ನ‌ಈಮ್ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಬ್ ಜೂನಿಯರ್ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಮುಹಮ್ಮದ್ ನೌಫಾನ್, ಸೀನಿಯರ್ ವಿಭಾಗದ ಪೊಸ್ಟರ್ ಡಿಸೈನ್ ಸ್ಪರ್ಧೆಯಲ್ಲಿ ಅಬೂಬಕ್ಕರ್ ನಾಝಿಂ ಹಾಗೂ ಜನರಲ್ ವಿಭಾಗದ ಉರ್ದು ನಾ‌ಅತ್ ಮತ್ತು ಮೌಲೀದ್ ಪಾರಾಯಣ ಸ್ಪರ್ಧೆಗಳಲ್ಲಿ ಜಂಶೀರ್ ಅಳೇಕಲ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಎಸ್ಸೆಸ್ಸೆಫ಼್ ಅಳೇಕಲ ಶಾಖೆಯ ಪ್ರತಿಭೋತ್ಸವ ಕನ್‌ವೀನರ್ ಮುಹಮ್ಮದ್ ಫಾಝಿಲ್ ಅಳೇಕಲ ತಿಳಿಸಿದ್ದಾರೆ.

Write A Comment