ಕನ್ನಡ ವಾರ್ತೆಗಳು

ಅರಣ್ಯ ಸಂಚಾರಿ ದಳದ ಪೊಲೀಸರ ಕಾರ್ಯಾಚರಣೆ : ಕೃಷ್ಣ ಮೃಗದ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ, 4-ಕೃಷ್ಣ ಮೃಗ ಚರ್ಮ ವಶ

Pinterest LinkedIn Tumblr

Krishna_Mruga_arest_1

ಮಂಗಳೂರೂರು : ನಗರದ ಸ್ಟೇಟ್ ಬ್ಯಾಂಕ್ ಬಳಿಯ ಸ್ವಾಗತ ಹೊಟೇಲ್ ಕಟ್ಟಡದ ಎದುರು ಭಾಗದಲ್ಲಿ ಅಕ್ರಮವಾಗಿ 4 -ಕೃಷ್ಣ ಮೃಗದ ಚರ್ಮಗಳನ್ನು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಆರೋಪಿಗಳನ್ನು ಶುಕ್ರವಾರ ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿ, ಅರೋಪಿಗಳಿಂದ 4- ಕೃಷ್ಣ ಮೃಗ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಗದಗ ಜಿಲ್ಲೆ, ಶಿರಹಟ್ಟಿ ತಾಲೂಕು ನಿವಾಸಿಗಳಾದ ಮಾನಪ್ಪ @ ಮಲ್ಲಪ್ಪ (40,) ನಾಗಪ್ಪ ಹನುಮಂತಪ್ಪ ತಳವಾರ (31) ಎಂದು ಗುರುತಿಸಲಾಗಿದೆ.

ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪಿ‌ಎಸ್‌ಐ ಶ್ರೀ ಸಂತೋಷ ಶೆಟ್ಟಿ ರವರು ಖಚಿತ ವರ್ತಮಾನದ ಮೇರೆಗೆ ವನ್ಯ ಜೀವಿಯಾದ ೪-ಕೃಷ್ಣ ಮೃಗದ ಚರ್ಮಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿಗಳಾದ ಮಾನಪ್ಪ @ ಮಲ್ಲಪ್ಪ(೪೦) ಮತ್ತು ನಾಗಪ್ಪ ಹನುಮಂತಪ್ಪ ತಳವಾರ(೩೧) ಎಂಬವರನ್ನು ಸೊತ್ತು ಸಮೇತ ದಸ್ತಗಿರಿ ಮಾಡಿದ್ದು ಅವರ ವಶದಿಂದ ಸ್ವಾಧೀನ ಪಡಿಸಿಕೊಂಡ ೪-ಕೃಷ್ಣ ಮೃಗ ಚರ್ಮ ಸಮೇತ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಮುಂದಿನ ಕ್ರಮದ ಬಗ್ಗೆ ಹಸ್ತಾಂತರಿಸಿದ್ದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ಅರಣ್ಯ ಘಟಕದ ಮಾನ್ಯ ಪೊಲೀಸ್ ಮಹಾನಿರೀಕ್ಷಕರಾದ ಶ್ರೀ ಹೇಮಂತ್ ನಿಂಬಾಳ್ಕರ್ ಐಪಿ‌ಎಸ್., ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ವೆಂಕಟ್ ನಾಯ್ಕ್ ರವರ ನಿರ್ಧೇಶನದಂತೆ ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪಿ‌ಎಸ್‌ಐ ಶ್ರೀ ಸಂತೋಷ ಶೆಟ್ಟಿ ಮತ್ತು ಸಿಬ್ಬಂದಿಗಳಾದ ಜಯರಾಮ ರೈ, ಹೊನ್ನಪ್ಪ ಗೌಡ, ರಾಮಚಂದ್ರ ಮಣಿಯಾಣಿ, ನಾರಾಯಣ್, ಸುಂದರ ರಾಜ್, ಬಶೀರ್ ಹಾಗೂ ಜೀಪು ಚಾಲಕ ಸುಂದರ ಶೆಟ್ಟಿ ರವರು ನಡೆಸಿರುತ್ತಾರೆ.

Write A Comment