ಕರಾವಳಿ

ಅಲ್ ಇಸ್ಲಾಮಿಯ್ಯ ಯೂತ್ ಪೆಡರೇಶನ್ ದುಬೈ ಇದರ ನೂತನ ಅಧ್ಯಕ್ಷರಾಗಿ ಸಾದಿಕ್ ಶಾಬಾನ್ ಆಯ್ಕೆ

Pinterest LinkedIn Tumblr

IMG-20151006-WA0037

 ದುಬೈ : ಅಲ್ ಇಸ್ಲಾಮಿಯ್ಯ ಯೂತ್ ಪೆಡರೇಶನ್ ದುಬೈ ಇದರ 9 ನೇ ವರ್ಷದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬರ್ದುಬೈಯಲ್ಲಿ ದಾರುಲ್  ಇರ್ಷಾದ್ ಮಾಣಿ ಇದರ ವಕ್ತಾರ ಅಬ್ದುಲ್ ಅಝೀಝ್ ಲತೀಫಿ ಅಧ್ಯಕ್ಷತೆಯಲ್ಲಿ ಜರಗಿತು.

ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸಾದಿಕ್ ಶಾಬಾನ್ ಪೊಲ್ಯ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಯಾಸಿನ್ ಬಾವ ವೈ.ಎಸ್., ಉಪಾಧ್ಯಕ್ಷರಾಗಿ ತನ್ವೀರ್ ಮೈಯದ್ದಿ ಹಾಗು ಅಬ್ದುಲ್ ಸಮದ್ ಇಬ್ರಾಹಿಮ್, ಪ್ರಧಾನ ಕಾರ್ಯದರ್ಶಿಯಾಗಿ ಅಲ್ತಾಫ್ ಎಂ., ಜೊತೆಕಾರ್ಯದರ್ಶಿಯಾಗಿ ಅಬ್ದುಲ್ ಹಕೀಂ ಹಸೈನಾರ್ ಮತ್ತು ನಿಸಾರ್ ಅಹ್ಮದ್, ಕೋಶಾಧಿಕಾರಿಯಾಗಿ ಮುಝಮ್ಮಿಲ್ ಮಂಗಳೂರು, ಸಂಯೋಜಕರಾಗಿ ಅಬ್ದುಲ್ ಸಮದ್  ಬಿರಾಲಿ, ಹಾಗು ಕಮಿಟಿ ಸದಸ್ಯರಾಗಿ ಅನ್ವರ್ ಕೈಕಂಬ,ಆಸಿಫ್ ಯೂಸುಫ್, ಅಬ್ದುಲ್ ಹಮೀದ್ ಉಳ್ಳಾಲ, ಅಶ್ರಫ್ ಯೂಸುಫ್, ರಿಜ್ವಾನ್ ಕೋಡಿ, ಅಶ್ರಫ್ ಬಾವ ಆತ್ರಾಡಿ, ಸುಲೈಮಾನ್ ಎಂ.ಅರಫಾ, ಇಕ಼್ಬಾಲ್ ಮುಲ್ಲಗುಡ್ಡೆ ಹಾಗು ಹುಸ್ಸೈನ್ ಸುಲೈಮಾನ್ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಹುಸೈನ್ ಸುಲೈಮಾನ್ ,ಅಬ್ದುಲ್ ಹಕೀಂ ಹಸೈನಾರ್ ಉಚ್ಚಿಲ, ಸಮದ್ ಬೀರಾಲಿ ಉಚ್ಚಿಲ, ಮುಝಮ್ಮಿಲ್ ಮಂಗಳೂರು ಮುಖ್ಯ ಅಥಿತಿಗಳಾಗಿದ್ದರು.

Write A Comment