ಕುಂದಾಪುರ: ನಿಷ್ಕರುಣಿ ಕಾರು ಚಾಲಕನೋರ್ವ ಟಿವಿಎಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಆತ ಸಾವನ್ನಪ್ಪಿದ ಬಗ್ಗೆ ತಿಳೀಯುತ್ತಲೇ ಪರರಿಯಾದ ಮನಕಲಕುವ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಬುಧವಾರ ನಡೆದಿದೆ.
ಹಿಟ್ & ರನ್ ಅವಘಡದಲ್ಲಿ ಸಾವನ್ನಪ್ಪಿದವರು ಗೋಪಾಡಿಯ ನಿವಾಸಿ ಗಣಪಯ್ಯ ಗಾಣಿಗ (56).
ಗಣಪಯ್ಯ ಗಾಣಿಗ ಅವರು ಕುಂದಾಪುರ ಕಡೆಯಿಂದ ಮನೆಯತ್ತ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕೇರಳಾ ಮೂಲದ ಕಾರು ಡಿಕ್ಕಿಯಾಗಿದ್ದು ರಸ್ತೆಗೆ ಬಿದ್ದ ಗಣಪಯ್ಯ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಣಪಯ್ಯ ಅವರು ಸಾವನ್ನಪ್ಪಿದ್ದು ತಿಳಿಯುತ್ತಿದ್ದಂತೆ ಅಪಘಾತ ನಡೆಸಿದ ಕೇರಳಾ ಮೂಲದ ಕಾರು ಅಲ್ಲಿಂದ ತೆರಳಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರಿಂದ ಮಾಹಿತಿ ಪಡೆದು ಅಪಘಾತ ನಡೆಸಿದ ಕಾರನ್ನು ಪಡುಬಿದ್ರಿಯಲ್ಲಿ ಪತ್ತೆಹಚ್ಚಿದ್ದಾರೆ.
ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




