ಕುಂದಾಪುರ: ನಾಲ್ಕು ವರ್ಷಗಳ ಹಿಂದೆ ಸಾವಿಗೀಡಾದ ತನ್ನ ತಾಯಿ ಕನಸ್ಸಿನಲ್ಲಿ ಬಂದು ತನ್ನ ಬಳಿ ಬಾ ಎನ್ನುವ ಬಗ್ಗೆ ಡೆತ್ ನೋಟ್ ಬರೆದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ತನ್ನ ಕಾಲೇಜು ಸಮೀಪದ ಹಾಸ್ಟೇಲು ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಸಂಜೆ ಈ ಘಟನೆ ನಡೆದಿದೆ.
ಮೂಲತಃ ತುಮಕೂರಿನ ತುರುವೆಕೆರೆ ನಿವಾಸಿ ಶಶಾಂಕ್(20) ನೇಣಿಗೆ ಶರಣಾದ ವಿದ್ಯಾರ್ಥಿ.
ನಾಲ್ಕು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡ ಶಶಾಂಕ್ ಡಿಪ್ಲೋಮಾ ಕೋರ್ಸ್ ತನ್ನದೇ ಊರಿನಲ್ಲಿ ಮುಗಿಸಿ ಬಳಿಕ ಉನ್ನತ ವ್ಯಾಸಂಗಕ್ಕೆ ದ್ವಿತೀಯ ವರ್ಷದ ಮೆಕಾನಿಕಲ್ ಇಂಜಿನಿಯರ್ ಓದಲೆಂದು ಕುಂದಾಪುರದ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಗೆ ಸೇರಿದ್ದ. ಆದರೇ ಕೆಲ ದಿನಗಳಿಂದ ರಾತ್ರಿ ವೇಳೆ ತನ್ನ ತಾಯಿ ಕನಸ್ಸಿನಲ್ಲಿ ಬಂದು ಸತ್ತಿರುವ ನನ್ನ ಬಳಿ ಬಾ ಎನ್ನುವ ಬಗ್ಗೆ ಕೆಟ್ಟ ಕನಸ್ಸು ಬಿದ್ದ ಬಗ್ಗೆ ಕುಗ್ಗಿದ ಈತ ಅದನ್ನೇ ಮಾನಸಿಕವಾಗಿ ಪರಿಗಣಿಸಿ ದಿಕ್ಕು ತೋಚದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬುಧವಾರ ಬೆಳಿಗ್ಗೆ ಇಂಟರ್ನಲ್ ಎಕ್ಸಾಮ್ ಬರೆದ ಈತ ಮಧ್ಯಾಹ್ನ ನಡೆಯುವ ಪರೀಕ್ಷೆಗೆ ತೆರಳದೇ ತನ್ನ ಹಾಸ್ಟೇಲ್ ಕೊಠಡಿಯಲ್ಲಿ ಉಳಿದಿದ್ದು ತನ್ನ ಸಹಪಾಠಿಗಳು ತೆರಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





