ಮಂಗಳೂರು,ಅ.14 : ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಆರ್ಶೀವಾದದೊಂದಿಗೆ, ಕಲ್ಕೂರ ಪ್ರತಿಷ್ಠಾನವು ಅಕ್ಟೋಬರ್ ೨೩ನೇ ಶುಕ್ರವಾರದಂದು ವಿಜಯದಶಮಿಯ ಪ್ರಯುಕ್ತ ಮಕ್ಕಳಿಗಾಗಿ ಅಕ್ಷರಾಭ್ಯಾಸ – ವಿದ್ಯಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜು ಪ್ರಾಸಾದದಲ್ಲಿನ ವಾದಿರಾಜ ಮಂಟಪದಲ್ಲಿ ಬೆಳಿಗ್ಗೆ 8 ರಿಂದ ಅಕ್ಷರಾಭ್ಯಾಸ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ, ವಾದ್ಯ ಸಂಗೀತ (ಕೊಳಲು, ವೀಣೆ, ಪಿಟೀಲು, ಚೆಂಡೆ, ಮೃದಂಗ, ತಬಲಾ ಇತ್ಯಾದಿ) ವಿದ್ಯೆಯನ್ನು ಆರಂಭಿಸುವ ಮಕ್ಕಳು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ (9845083736) ತಿಳಿಸಿದ್ದಾರೆ.
ಭಾಗವಹಿಸುವ ಮಕ್ಕಳಿಗಾಗಿ ಒಂದು ತುದಿ ಬಾಳೆ ಎಲೆ, ಒಂದು ಸೇರು ಬೆಳ್ತಿಗೆ ಅಕ್ಕಿ, ೨ ತೆಂಗಿನಕಾಯಿಗಳನ್ನು ತರಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ದಯಾನಂದ ಕಟೀಲು ಶಾರದಾ ವಿದ್ಯಾಲಯ (9448545578) ಸುಧಾಕರರಾವ್ ಪೇಜಾವರ(9448123061), ಕದ್ರಿ ನವನೀತ ಶೆಟ್ಟಿ(9448123061)ಇವರನ್ನು ಸಂಪರ್ಕಿಸಬಹುದು.
