ಮಂಗಳೂರು. ಅ.14: ಅಡಿಕೆ ಕೊಳೆರೋಗ ತಡೆಗಟ್ಟಲು ಮೈಲುತುತ್ತು ಹಾಗೂ ಸುಣ್ಣವನ್ನು ಬೆರೆಸಿ ಬೋರ್ಡೋ ದ್ರಾವಣ ತಯಾರಿಸಲಾಗುತ್ತಿದ್ದು ಎಲ್ಲಾ ರೈತರಿಗೂ ತಿಳಿದಿರುವ ವಿಷಯವಾಗಿದೆ, ಆದರೆ ಬೋರ್ಡೋ ದ್ರಾವಣ ತಯಾರಿಕೆಯಲ್ಲಿ ದ್ರಾವಣದ ಆಮ್ಲೀಯತೆಯನ್ನು ಗುರುತಿಸುವುದು ಅತೀ ಮಹತ್ವವಾದ ಘಟ್ಟ. ಪ್ರಸ್ತುತ ಹರಿತವಾದ ಚಾಕು/ ಬ್ಲೇಡನ್ನು ಬಳಸಿ ಇದನ್ನು ಪರೀಕ್ಷಿಸಲಾಗುತ್ತಿದ್ದರೂ ಇದು ತಾಂತ್ರಿಕತೆಯಲ್ಲಿ ಸ್ವಲ್ಪ ಹಿಂದುಳಿದ ವಿಧಾನವಾಗಿದೆ. ಟಿಶೂ ಪೇಪರನ್ನು ಬಳಸಿ ದ್ರಾವಣದ ಟಿಶೂನ್ನು ಅತ್ಯಂತ ನಿಖರವಾಗಿ ಗುರುತಿಸಬಹುದಾಗಿದೆ.
ಟಿಶೂ ಪೇಪರನ್ನು ದ್ರಾವಣದಲ್ಲಿ ಅದ್ದಿದಾಗ ಉಂಟಾಗುವ ಬಣ್ಣ ಬದಲಾವಣೆಯನ್ನು ಇದರೊಂದಿಗೆ ನೀಡಲಾಗುವ ಸ್ಕೇಲ್‌ನಲ್ಲಿ ಹೊಂದಾಣಿಕೆ ಮಾಡಿ ದ್ರಾವಣದ ಟಿಶೂನ್ನು ನಿಖರವಾಗಿ ಅಂದಾಜಿಸಬಹುದು.
ಅಡಿಕೆ ಬೆಳೆಗಾರರು ಮೈಲುತ್ತುತ್ತ, ಸುಣ್ಣ ಖರೀದಿಸುವಾಗ ಅದೇ ಅಂಗಡಿಗಳಿಂದ ಟಿಶೂ ಪೇಪರನ್ನು ಕೂಡ ಕೇಳಿ ಪಡೆದುಕೊಳ್ಳಲು ಎಲ್ಲಾ ಬೆಳೆಗಾರರ ಗಮನವನ್ನು ಸೆಳೆಯಲಾಗಿದೆ. ಈಗಾಗಲೇ ಇಲಾಖೆ ವತಿಯಿಂದ ಎಲ್ಲಾ ಪೀಡೆನಾಶಕ / ರಸಗೊಬ್ಬರ ಮಾರಾಟಗಾರರಿಗೆ ಟಿಶೂ ಪೇಪರನ್ನು ಮೈಲುತ್ತುತ್ತದೊಂದಿಗೆ ರೈತರಿಗೆ ಸರಬರಾಜು ಮಾಡಲು ಕೊರಲಾಗಿರುತ್ತದೆ.
ಈ ತಾಂತ್ರಿಕತೆಯಿಂದ ಕೃಷಿಕ ಸಮುದಾಯ ಹೆಚ್ಚು ನಿಖರತೆಯಿಂದ ವಿವಿಧ ಶಿಲೀಂದ್ರ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಬಹುದು ಎಂದು ತೋಟಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.
