ಕರಾವಳಿ

ಬಹುಪಯೋಗಿ ಪುದಿನಾ

Pinterest LinkedIn Tumblr

MINT-LEASBE

ಗಾಢವಾದ ಸುವಾಸನೆ ಮತ್ತು ರುಚಿಯಿಂದ ಪುದಿನಾ ಭಾರತ ಮಾತ್ರವಲ್ಲ ಏಷ್ಯಾ ಖಂಡದ ಎಲ್ಲಾ ಆಹಾರಗಳ ಪ್ರಮುಖ ಅಂಗವಾಗಿ ಮಾರ್ಪಟ್ಟಿದೆ.
ಇದು ಒಂದು ರೀತಿ ಗಿಡಮೂಲಿಕೆ ಔಷಧವಾಗಿದ್ದು, ಚರ್ಮದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬಹುತೇಕ ಮಾಯೆಶ್ಚರೈಸರ್, ಕ್ಲೀನ್ಸರ್, ಕಂಡೀಶನರ್, ಶಾಂಪೂ, ಲಿಪ್ ಬಾಮ್ಗಳಲ್ಲಿ ಪುದಿನಾ ಇದ್ದೇ ಇರುತ್ತದೆ. ಬಹುತೇಕ ಮೊಡವೆಗಳಿಗೆ ಅತ್ಯುತ್ತಮ ನಿವಾರಕ ಔಷಧವಾಗಿ ಕೆಲಸ ಮಾಡುತ್ತದೆ.

ಮೃದು ತ್ವಚೆ:
ಉರಿಶಮನದ ಗುಣಕ್ಕೆ ಪುದಿನಾ ಹೆಸರುವಾಸಿಯಾಗಿದೆ. ಕೀಟ ಕಡಿತವಾದ ಜಾಗ ಅಥವಾ ಅಲರ್ಜಿಯಾದ
ದೇಹದ ಭಾಗಕ್ಕೆ ಒಂದಿಷ್ಟು ಪುದಿನಾ ಸೊಪ್ಪನ್ನು ಜಜ್ಜಿ ರಸವನ್ನು ಹಚ್ಚಿ. ಇದರ ಜ್ಯೂಸ್ ಒಣ ಮತ್ತು ಒಡಕು ಚರ್ಮಕ್ಕೆ ರಾಮಬಾಣ.

ಕ್ಲೀನ್ಸಿಂಗ್ ಸ್ಕ್ರಬ್:
ಪುದಿನಾ ಸೊಪ್ಪನ್ನು ಶುಚಿಕಾರಕವಾಗಿಯೂ ಬಳಸಬಹುದು. ಕೆಲವು ಚಮಚ ಓಟ್ಸ್ ಮತ್ತು ಮಿಂಟ್ ಜ್ಯೂಸ್ನ ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚಿ. ಇದು ಸತ್ತ ಚರ್ಮಕೋಶಗಳನ್ನು ನಿವಾರಿಸಿ, ನೀರಿನ ಅಂಶ ಚರ್ಮಕ್ಕೆ ಸಿಗುವಂತೆ ಮಾಡುತ್ತದೆ. ತೆಳುವಾದ ಮೊಡವೆ ಕಲೆಗಳನ್ನು ಕೂಡ ಇದರಿಂದ ನಿವಾರಿಸಿಕೊಳ್ಳಬಹುದು.

ಪಾದಗಳಿಗೆ ಮೃದುತ್ವ:
ಪಾತ್ರೆಯಲ್ಲಿ ನೀರು ಹಾಕಿ ಒಂದಿಷ್ಟು ಪುದಿನಾ ಎಲೆಯನ್ನು ಅದಕ್ಕೆ ಹಾಕಿ ಬೇಯಿಸಿ. ಬಳಿಕ ಆ ನೀರನ್ನು ಬಕೆಟ್ನಲ್ಲಿ ಹಾಕಿ ಸಾಕಷ್ಟು ತಣ್ಣೀರು ಸೇರಿಸಿ ಅದರಲ್ಲಿ ಪಾದಗಳನ್ನಿಡಿ.
ಇದರಿಂದ ಪಾದಗಳ ಒಡಕು ಗುಣವಾಗುವುದರ ಜೊತೆಗೆ ಕಾಲಿನ ವಾಸನೆ ನಿವಾರಣೆ ಮಾಡಿ ಪಾದವನ್ನು ಮೃದುವಾಗಿ ಮಾಡುತ್ತದೆ. ಜೊತೆಗೆ ಬೇಯಿಸಿದ ಪುದಿನಾ ಎಲೆಯ ಸುವಾಸನೆ ಮನಸ್ಸನ್ನು ಶಾಂತಗೊಳಿಸುತ್ತದೆ.

ಮೊಡವೆ ನಿವಾರಣೆ:
ಪನ್ನೀರಿನೊಂದಿಗೆ ಪುದಿನಾ ಎಲೆಯನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಸುಮಾರು
20 ನಿಮಿಷ ಹಾಗೆ ಬಿಡಿ. ಇದರಲ್ಲಿ ಸಾಲಿಸಿಲಿಕ್ ಆಮ್ಲ ಇದ್ದು, ಇದು ಮೊಡವೆ ನಿವಾರಣೆಗೆ ನೆರವು ನೀಡುತ್ತದೆ.
ಹಿತ್ತಲ ಮದ್ದು ಆಗಿರುವ ಪುದಿನಾ ಅಡುಗೆಗೆ ರುಚಿ ನೀಡಿದರೆ, ಅದನ್ನು ಬೇರೆ ರೀತಿಯಲ್ಲಿ ಬಳಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

Write A Comment