ಮಂಗಳೂರು,ಅ.12: ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ 40 ವಾರಗಳ ಸ್ವಚ್ಛ ಮಂಗಳೂರು ಅಭಿಯಾನದ 22ನೇ ಭಾನುವಾರದ ಸ್ವಚ್ಚತಾ ಕಾರ್ಯವನ್ನು ಭಾನುವಾರ ನಗರದ ಜ್ಯೋತಿ, ಬಲ್ಮಠ ಹಾಗೂ ಕಲೆಕ್ಟರ್ಸ್‌ಗೇಟ್ ಸುತ್ತಮುತ್ತಲಿನ ಪರಿಸರದಲ್ಲಿ ಕೈಗೊಳ್ಳಲಾಯಿತು. ಸ್ವಾಮಿಜಿತ ಕಾಮಾನಂದಜಿ ಹಾಗೂ ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತಿಯಲ್ಲಿ ಸ್ಥಳಿಯ ಮನಪಾ ಸದಸ್ಯ ಶ್ರೀ ಎ ಸಿ ವಿನಯರಾಜ್ ಹಾಗೂ ಬಲ್ಮಠ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪ್ರೋ. ರಮಾನಾಥ ಬಿ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.
ಸುಮಾರು 450 ಕ್ಕೂ ಅಧಿಕ ಸ್ವಯಂ ಸೇವಕರು ಭಾಗವಹಿಸಿದ್ದರು. ಸುಮಾರು ಹತ್ತು ತಂಡಗಳಂತೆ ವಿಭಾಗಿಸಿ ಅತ್ಯಂತ ಶಿಸ್ತಿನಿಂದ ಸ್ವಚ್ಚತಾ ಅಭಿಯಾನಜರುಗಿತು. ಸ್ವಾಮಿಜಿತ ಕಾಮಾನಂದಜಿ ಹಾಗೂ ಮನಪಾ ಸದಸ್ಯ ಎ ಸಿ ವಿನಯರಾಜ್ ಬಲ್ಮಠ ರಸ್ತೆಯಲ್ಲಿ ಸ್ವಚ್ಚತಾ ಕೈಂಕರ್ಯದ ಮುಂಚುಣಿಯಲ್ಲಿದ್ದರು.
ಬಲ್ಮಠ ಮಹಿಳಾ ಕಾಲೇಜು ಆವರಣ, ಜ್ಯೋತಿ ವೃತ್ತ, ಕೆಎಂಸಿ ಆಸ್ಪತ್ರೆಯ ಆಸುಪಾಸು, ಬಲ್ಮಠ ರಸ್ತೆ, ಕಲೆಕ್ಟರ್ಸ್‌ಗೇಟ್ ಸುತ್ತಮುತ್ತ ಹಾಗೂ ಆರ್ಯ ಸಮಾಜ ರಸ್ತೆಗಳಲ್ಲಿ ಸ್ವಯಂ ಸೇವಕರು ಹಾರೆ ಪೊರಕೆ ಬುಟ್ಟಿ, ಬ್ರಷ್ ಬಣ್ಣ ಇತ್ಯಾದಿ ಸಲಕರಣೆಗಳನ್ನು ಹಿಡಿದು ಕೆಲಸ ಮಾಡುತ್ತಿದ್ದು ದಾರಿಹೋಕರಿಗೆ ಅಪರೂಪದ ದೃಶ್ಯವಾಗಿತ್ತು.
ಪೋಸ್ಟರ್‌ತೆರವು: ನಗರದ ಅಂದ ಗೆಡಿಸುತ್ತಿರುವ ಪೋಸ್ಟರ್ ಹಾವಳಿ ಬಲ್ಮಠ ಕಾಲೇಜಿನ ಆವರಣ ಗೋಡೆಗಳನ್ನೂ ಬಿಟ್ಟಿಲ್ಲ. ಪ್ರತಿಷ್ಟಿತ ವಿದ್ಯಾರ್ಥಿ ಸಂಘಟನೆಯೊಂದು ಇತ್ತೀಚಿಗೆ ಆವರಣ ಗೋಡೆಗಳಿಗೆ ಹಾಗೂ ವಿದ್ಯಾಲಯದ ಮುಖ್ಯದ್ವಾರಕ್ಕೆ ಪೋಸ್ಟರ್ ಗಳನ್ನು ಅಂಟಿಸಿ ವಿರೂಪಗೊಳಿಸಿದ್ದರು. ಇಂದು ಅವುಗಳನ್ನೆಲ್ಲ ನೀರು ಹಾಕಿ ತೊಳೆದು ಬಣ್ಣ ಬಳಿದು ಸುಂದರಗೊಳಿಸಲಾಗಿದೆ. ಅಲ್ಲದೆ ಬಹಳ ಕಾಲದಿಂದ ಬಣ್ಣಕಾಣದಿದ್ದ ಕಾಲೇಜಿನ ಮುಖ್ಯದ್ವಾರದ ಗ್ರಿಲ್‌ಗಳನ್ನು ಸ್ವಚ್ಛಗೊಳಿಸಿ ಉತ್ತಮವಾಗಿ ಬಣ್ಣ ನೀಡಿ ಸುಂದರಗೊಳಿಸಲಾಗಿದೆ.
ಕಲ್ಲು ಮಣ್ಣಿನ ರಾಶಿ ಹಾಗೂ ತ್ಯಾಜ್ಯರಾಶಿಗಳಿಗೆ ತೆರವು: ಕಲೆಕ್ಟರ್ಸಗೇಟ ಬಸ್ ತಂಗುದಾಣದ ಬಳಿ ಬಿದ್ದಿದ್ದ ಅಪಾರಕಲ್ಲು ಮಣ್ಣುಗಳ ತ್ಯಾಜ್ಯವನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಮತಟ್ಟು ಮಾಡಲಾಗಿದೆ. ಅದರಂತೆ ಮಹಿಳಾ ಕಾಲೇಜಿನ ಆವರಣದಲ್ಲಿದ್ದ ನಿರುಪಯುಕ್ತ ಪಾಳು ಕಟ್ಟೆ ಹಾಗೂ ಮಣ್ಣು ರಾಶಿಯನ್ನು ತೆಗೆದು ಶುಚಿಗೊಳಿಸಲಾಗಿದೆ.
ಮಾರ್ಗಸೂಚಿ ಫಲಕ ನವೀಕರಣ- ಹಲವಾರು ವರುಷಗಳಿಂದ ನಿರ್ಲಕ್ಷಕ್ಕೊಳಗಾದ ಹಲವಾರು ಮಾರ್ಗಸೂಚಿ ಫಲಕಗಳು ನಗರದಲ್ಲಿಅಲ್ಲಲ್ಲಿ ಕಾಣಸಿಗುವುದು ಸಾಮಾನ್ಯ. ಸ್ವಚ್ಚ ಮಂಗಳೂರು ಅಭಿಯಾನದಲ್ಲಿ ಈ ಫಲಕಗಳನ್ನು ನವೀಕರಿಸುವಕಾರ್ಯ ನಡೆಯುತ್ತಿದೆ. ಅದರಂತೆಇಂದುಆರ್ಯ ಸಮಾಜರಸ್ತೆಯಲ್ಲಿದ್ದ ಸಂಪೂರ್ಣವಾಗಿ ಅಳಿಸಿಹೊಗಿದ್ದ ಬೋರ್ಡನ್ನು ಹಳದಿ ಬಣ್ಣದ ಹಚ್ಚಿಅದರ ಮೇಲೆ ಆರ್ಯ ಸಮಾಜರಸ್ತೆ ಎಂದುಕನ್ನಡ ಹಾಗೂ ಇಂಗ್ಲೀಷನಲ್ಲಿ ಬರೆಸಲಾಗಿದೆ.
ಜಾಗೃತಿಕಾರ್ಯ : ಸ್ವಯಂ ಸೇವಕರುಜ್ಯೋತಿ, ಬಲ್ಮಠ ಹಾಗೂ ಕಲೆಕ್ಟರ್ಸ್‌ಗೇಟ್ ಸುತ್ತಮುತ್ತಲಿನ ಪರಿಸರದಲ್ಲಿಮನೆಮನೆಗೆ ತೆರಳಿ ಸ್ವಚ್ಚ ಪರಿಸರಕುರಿತಜಾಗೃತಿಕರಪತ್ರ ಹಂಚಿದರು.
ಸ್ವಚ್ಛ ಮನಸ್ಸುಕಾರ್ಯಕ್ರಮ: ನಿನ್ನೆಸ್ವಚ್ಛ ಮಂಗಳೂರು ಅಭಿಯಾನದ ಮುನ್ನಾದಿ ಶನಿವಾರ ಸಂಜೆ 6.30 ರಿಂದ ಸ್ವಚ್ಚ ಮನಸ್ಸು ಎಂಬ ಕಾರ್ಯಕ್ರಮ ನಡೆಯಿತು. ಸುಮಾರು 45 ನಿಮಿಷಗಳ ಪ್ರಾರ್ಥನೆ ಹಾಗೂ ಧ್ಯಾನಗಳೊಂದಿಗೆ ಪ್ರಾರಂಭವಾದಕಾರ್ಯಕ್ರಮದಲ್ಲಿ ಸ್ವಾಮಿಜಿತ ಕಾಮಾನಂದಜಿ ಆಂತರಿಕ ಮತ್ತು ಬಾಹ್ಯ ಶುಚಿತ್ವದ ಕುರಿತು ಮಾತನಾಡಿದರು. ರಥಬೀದಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛ ಮನಸ್ಸುಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಾಧ್ಯಾಪಕರಾದ ಶ್ರೀಮಹೇಶ್ ಕೆಬಿ , ಶ್ರೀಶೇಷಪ್ಪಅಮೀನ್ ಹಾಗೂ ಬಲ್ಮಠ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್‌ಘಟಕದ ಸಂಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಕೆ ಅವರ ನೇತೃತ್ವದಲ್ಲಿ ಸುಮಾರು 450 ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದರು.
ಮನೋವೈದ್ಯ ಡಾ. ಸತೀಶ್‌ರಾವ್, ಶ್ರೀಸುರೇಶ್ ಶೆಟ್ಟಿ, ಪ್ರೋ. ರಾಧಕೃಷ್ಣ ಕೆ, ಶ್ರೀಶುಭೋದಯ ಆಳ್ವ, ಶ್ರೀಮತಿ ವಿನಿತಾರೈ, ಶ್ರೀ ಉಮಾನಾಥಕೋಟೆಕಾರ್ ಹಾಗೂ ಅಭಿಯಾನದ ಸಂಯೋಜಕ ಶ್ರೀ ದಿಲ್‌ರಾಜ ಆಳ್ವ ಮತ್ತಿತರುಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.



















