ಕನ್ನಡ ವಾರ್ತೆಗಳು

ನವದೆಹಲಿ ಮೂಲದ ICSI ಪರೀಕ್ಷೆಯಲ್ಲಿ ರಾಷ್ಟ್ರ ಹಾಗೂ ಜಿಲ್ಲಾ ಮಟ್ಟದ ರ್‍ಯಾಂಕ್ ವಿಜೇತರು.

Pinterest LinkedIn Tumblr

rank_student_photo

ಮಂಗಳೂರು,ಜುಲೈ.24:  ಉಡುಪಿ ಮೂಲದ ಮತ್ತು ಎಂ.ಜಿ.ಎಂ ಕಾಲೇಜಿನ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿ ಯವರಾದ ಅರ್ಜುನ್ ಶೆಟ್ಟಿಯವರು ನವದೆಹಲಿ ಮೂಲದ ICSI ಸಂಸ್ಥೆಯವರು ಜೂನ್ 2015 ರಲ್ಲಿ ಜರಗಿಸಿದ ಫೌಂಡೇಷನ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 24ನೇ ರ್‍ಯಾಂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.

ಕು. ಲೆನಿತಾ ಮಥಾಯಸ್ ಅವರು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ. ಅವರು ಎಸ್.ಡಿ.ಎಮ್ ಕಾನೂನು ಶಿಕ್ಷಣ ಮಹಾ ವಿದ್ಯಾಲಯದ 2ನೇ ವರ್ಷದ ಕಾನೂನು ಶಿಕ್ಷಣ ವಿದ್ಯಾರ್ಥಿನಿಯಾಗಿದ್ದಾರೆ.

ಕು. ಮೇಘ ಎಂ ಅವರು ಜಿಲ್ಲಾ ಮಟ್ಟದಲ್ಲಿ ತೃತೀಯ ರ್‍ಯಾಂಕ್ ಗಳಿಸಿದ್ದಾರೆ. ಅವರು ಬೆಸೆಂಟ್ ಸಂಧ್ಯಾ ಕಾಲೇಜಿನ 2ನೇ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದಾರೆ

ಮೂವರು ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣದ ಜೊತೆಗೆ ವೃತ್ತಿಪರ ಶಿಕ್ಷಣವನ್ನು ಪೂರೈಸುತ್ತಿದ್ದಾರೆ. ICSI ಅವಿಭಜಿತ ದ.ಕ. ಜಿಲ್ಲಾ ಶಾಖೆಯ ಅಧ್ಯಕ್ಷರಾದ ಶ್ರೀ ನರಸಿಂಹ ಪೈ ಯವರು ಮೂವರು ಶೈಕ್ಷಣಿಕ ಸಾಧಕರನ್ನು ಅಭಿನಂದಿಸಿ ತಮ್ಮ ಸಂಸ್ಥೆಯ ಜಿಲ್ಲಾ ಶಾಖೆಗೆ ಖ್ಯಾತಿ ಗಳಿಸಿದ್ದಾರೆ ಎಂದು ಹರುಷ ವ್ಯಕ್ತಪಡಿಸಿದ್ದಾರೆ.

Write A Comment