ಕನ್ನಡ ವಾರ್ತೆಗಳು

‘ಮಹಿಳಾ ಸುರಕ್ಷತೆ’ಗೆ ಬಂದಿದೆ ಮಂಗಳೂರು ಸಿಟಿ ಪೊಲೀಸ್ ಆ್ಯಪ್‌

Pinterest LinkedIn Tumblr

Fm_police_app1

ಮಂಗಳೂರು, ಜು. 13: ನಗರ ಪೊಲೀಸ್ ಇಲಾಖೆಯು ಅಭಿವೃದ್ಧಿಪಡಿಸಿರುವ ಮಂಗಳೂರು ಸಿಟಿ ಪೊಲೀಸ್ ಆ್ಯಪ್‌ನಲ್ಲಿನ ‘ಮಹಿಳಾ ಸುರಕ್ಷತೆ’ ಕುರಿತಂತೆ ಕಂಕನಾಡಿಯ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾಲೇಜಿನ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ (ಪಾಶ್)ಯು ನಗರ ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಕಾಲೇಜಿನ ಡೆಸಿನಿಯಲ್ ಸಭಾಂಗಣದ ನಾಲೆಡ್ಜ್ ಸೆಂಟರ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಎಸ್. ಮುರುಗನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಅವರು, ಈ ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರಿಂದ ಹಲವಾರು ದೂರುಗಳು ಸ್ವೀಕಾರವಾಗುತ್ತಿವೆ. ಇದು ಮಹಿಳೆಯರು ಮಾತ್ರವಲ್ಲದೆ, ಮಕ್ಕಳು, ಹಿರಿಯರಿಗೆ ಕೂಡ ಅಪಾಯ ಕಾರಿಹಾಗೂ ತುರ್ತು ಸಂದರ್ಭಗಳಲ್ಲಿ ನೆರವಿಗಾಗಿ ಬಳಸುವ ಅತ್ಯುತ್ತಮ ಸಾಧನವಾಗಿದೆ ಎಂದು ಅವರು ಹೇಳಿದರು. ಈ ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿ ಪಡಿಸುವಲ್ಲಿ ಸಹಕರಿಸಿರುವ ಎಡಿಸನ್ ರಾಯ್ ಅವರು ಅಪ್ಲಿಕೇಶನ್ ಬಗ್ಗೆ ಮಾಹಿತಿ ನೀಡುತ್ತಾ, ತಮ್ಮ ಕೈಯಲ್ಲಿರುವ ಸ್ಮಾರ್ಟ್ ಮೊಬೈಲ್‌ಗಳಲ್ಲಿ ಈ ಮಂಗಳೂರು ಸಿಟಿ ಪೊಲೀಸ್ ಆ್ಯಪನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರು ಇದನ್ನು ನಾನಾ ರೀತಿಯಲ್ಲಿ ಸದ್ಬಳಕೆ ಮಾಡಲು ಸಾಧ್ಯವಿದೆ ಎಂದರು.

Fm_police_app2 Fm_police_app3 Fm_police_app4 Fm_police_app5 Fm_police_app6 Fm_police_app7

ಡೌನ್‌ಲೋಡ್ ಮಾಡಿಕೊಂಡ ಆ್ಯಪ್‌ನಲ್ಲಿ 10 ಮಂದಿ ಆಪ್ತರ ಸಂಖ್ಯೆಗಳನ್ನು ನಮೂದಿಸಿಕೊಳ್ಳಲು ಅವಕಾಶವಿರುತ್ತದೆ. ಯಾವುದೇ ತುರ್ತು ಅಥವಾ ಅಪಾಯದ ಸಂದರ್ಭಗಳಲ್ಲಿ ವಿಶೇಷವಾಗಿ ಮಹಿಳೆಯರು ಈ ಆ್ಯಪ್‌ಗೆ ಐದು ಬಾರಿ ‘ಪ್ರೆಸ್’ ಮಾಡುವ ಅಥವಾ ಮೊಬೈಲ್‌ನ್ನು ಮೆತ್ತಗೆ ಶೇಕ್ ಮಾಡುವ ಮೂಲಕವೂ ಆಪ್ತರಿಗೆ ಸಹಾಯದ ಸಂದೇಶವನ್ನು ರವಾನಿಸಬಹುದಾಗಿದೆ. ಆಪ್ತರು ಸಂಬಂಧಪಟ್ಟ ಪೊಲೀಸರ ನೆರವಿನೊಂದಿಗೆ ಅಪಾಯವನ್ನು ತಪ್ಪಿಸಬಹುದಾಗಿದೆ.

ಮನೆಗಳಲ್ಲಿ ಏಕಾಂಗಿಯಾಗಿರುವ ವಯೋ ವೃದ್ಧರು ಅಥವಾ ಇತರರಿಗೆ ಹೃದಯಾಘಾತ ಮೊದಲಾದ ತುರ್ತು ಸಂದರ್ಭಗಳಲ್ಲಿಯೂ ಆಪ್ತರಿಗೆ ಸಂದೇಶ ರವಾನಿಸಿ ತುರ್ತು ನೆರವು ಪಡೆದುಕೊಳ್ಳುವಲ್ಲಿಯೂ ಈ ಆ್ಯಪ್ ಸಹಕಾರಿ. ಮಾತ್ರವಲ್ಲದೆ ಆ್ಯಪ್‌ನಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳ ಮಾಹಿತಿ, ಟ್ರಾಫಿಕ್ ವ್ಯವಸ್ಥೆ, ದಿನನಿತ್ಯದ ಅಪರಾಧ ಸುದ್ದಿಗಳು, ತುರ್ತು ಸಂಪರ್ಕ ಸಂಖ್ಯೆಗಳನ್ನು ಸರಳ ಹಾಗೂ ಸುಲಭವಾಗಿ ಪಡೆಯಲು ಸಾಧ್ಯ ಎಂದು ಅವರು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಫಾ. ಪ್ಯಾಟ್ರಿಕ್ ರಾಡ್ರಿಗಸ್, ಈ ಸದುಪಯೋಗಿ ಆ್ಯಪ್‌ನ ಮೂಲಕ ಪೊಲೀಸರು ಸಾರ್ವ ಜನಿಕರಿಗೆ ಮತ್ತಷ್ಟು ನಿಕಟವರ್ತಿಗಳಾಗಿದ್ದಾರೆ ಎಂದರು. ವೇದಿಕೆಯಲ್ಲಿ ಆಡಳಿತಾಧಿಕಾರಿ ಫಾ. ರುಡಾಲ್ಫ್ ರವಿ ಡೇಸಾ, ಡೀನ್ ಡಾ. ಜೆ.ಪಿ. ಆಳ್ವ ಉಪಸ್ಥಿತರಿದ್ದರು. ಡಾ. ಪದ್ಮಜಾ ಉದಯ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅರುಣಾ ವಂದಿಸಿದರು.

Write A Comment