ಕನ್ನಡ ವಾರ್ತೆಗಳು

ತೀಯಾ ಸಮಾಜ, ವಿದ್ಯಾರ್ಥಿವೇತನ ವಿತರಣೆ

Pinterest LinkedIn Tumblr

thiya_vidythi_vetana_1

ವರದಿ : ಈಶ್ವರ ಎಂ. ಐಲ್ / ಚಿತ್ರ : ದಯಾನಂದ ಸಾಲ್ಯಾನ್

ಮುಂಬಯಿ : 1970ರಲ್ಲಿ ಕೇವಲ ರೂ. 25 ರಿಂದ ಪ್ರಾರಂಭಗೊಂಡ ಯು. ಕರ್ತಪ್ಪ ಸ್ಮಾರಕ ವಿದ್ಯಾರ್ಥಿವೇತನ ಇಂದು ಇತರ ವಿವಿಧ ಸ್ಮಾರಕ ವಿದ್ಯಾರ್ಥಿವೇತನ ಗಳೊಂದಿಗೆ ಹೆಮ್ಮರವಾಗಿ ಬೆಳೆದು ಸಮಾಜದ ನೂರಾರು ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ.ಶೈಕ್ಷಣಿಕ ಕ್ಷೇತ್ರದಲ್ಲಿ ನಮ್ಮ ಸಮಾಜದ ಮಕ್ಕಳು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಸಾದಿಸುತ್ತಿದ್ದು, ಇಂದು ಹಲವಾರು ಹೊಸಮುಖಗಳನ್ನು ಇಲ್ಲಿ ಕಾಣಬಹುದಾಗಿದ್ದು, ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದು ಮುಂದೆ ಇವರು ತೀಯಾ ಸಮಾಜದ ಎಲ್ಲಾಕಾರ್ಯಕ್ರಮಗಳಲ್ಲಿ ಕ್ರೀಯಾಶೀಲರಾಗುದರೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣುವಂತಾಗಲಿ ಎಂದು ತೀಯಾ ಸಮಾಜಮುಂಬಯಿಯ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ಅಭಿಪ್ರಾಯಪಟ್ಟರು.

ತೀಯಾ ಸಮಾಜದ ಬೋರ್ಡ್ ಆಪ್ ಟ್ರಸ್ಟನ ಕಾರ್ಯಧ್ಯಕ್ಷ, ಕೊಡುಗೈ ದಾನಿ ರೋಹಿದಾಸ ಬಂಗೇರ ಇವರ ಉಪಸ್ಥಿತಿಯಲ್ಲಿ ಜುಲೈ5 ರಂದು ಘಾಟ್ಕೋಪರಿನ ತೀಯಾ ಸಮಾಜದ ಕಾರ್ಯಾಲಯದಲ್ಲಿ ಜರಗಿದ, ತೀಯಾ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆವಿದ್ಯಾರ್ಥಿವೇನದವನ್ನು ವಿತರಿಸಿ ಮಾತನಾಡಿದ ಚಂದ್ರಶೇಖರ ಬೆಳ್ಚಡ ಅವರು ತೀಯಾ ಸಮಾಜದ ವಿದ್ಯಾನಿಧಿ ಹಾಗೂ ಆರೋಗ್ಯನಿಧಿಗೆ ರೋಹಿದಾಸ ಬಂಗೇರರಂತಹ ದಾನಿಗಳ ಕೊಡುಗೆಯನ್ನು ಸ್ಮರಿಸಿದರು. ಮುಂದೆಯು ಸಮಾಜದ ಗಣ್ಯರು,ದಾನಿಗಳು ಈ ನಿಧಿಗಳಿಗೆ ಸಹಾಯಹಸ್ತವನ್ನಿತ್ತು ಪ್ರೋತ್ಸಾಹಿಸಬೇಕಾಗಿ ವಿನಂತಿಸಿದರು.

thiya_vidythi_vetana_2 thiya_vidythi_vetana_3 thiya_vidythi_vetana_4 thiya_vidythi_vetana_5 thiya_vidythi_vetana_6 thiya_vidythi_vetana_7 thiya_vidythi_vetana_8

ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಹೃದಯ ತಜ್ನ ಡಾ. ದಯಾನಂದ ಕುಂಬ್ಳೆ ಯವರು ವಿದ್ಯಾರ್ಥಿಗಳಿಗೆ ಅಭಿನಂದನೆಸಲ್ಲಿಸುತ್ತಾ ವಿದ್ಯಾರ್ಥಿವೇತನವು ಸಮಾಜದ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಲಿ ಎಂದರು. ತೀಯಾ ಸಮಾಜದಮಾಜಿ ಉಪಾಧ್ಯಕ್ಷ ವಿಶ್ವನಾಥ ಯು.ಕೆ. ಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಶೈಕ್ಷಣಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿವರಸಮಾಜದ ವಿದ್ಯಾರ್ಥಿಗಳಿಗೆ ಸಮಾಜವು ಪ್ರೋತ್ಸಾಹಿಸುದಲ್ಲದೆ ನಮ್ಮ ಸಮಾಜದಲ್ಲಿ ಒಂದಾದರು ಐ.ಪಿ.ಎಸ್. ಯಾ ಐ.ಎ.ಎಸ್.ಪದವೀದರನ್ನು ಸದ್ಯದಲ್ಲಿ ಕಾಣುವಂತಾಗಲಿ ಎಂದರು.

thiya_vidythi_vetana_9 thiya_vidythi_vetana_10 thiya_vidythi_vetana_11 thiya_vidythi_vetana_12 thiya_vidythi_vetana_13 thiya_vidythi_vetana_14 thiya_vidythi_vetana_15 thiya_vidythi_vetana_16 thiya_vidythi_vetana_17

ಮಾಜಿ ಅಧ್ಯಕ್ಷ ಕೆ. ಪಿ. ಅರವಿಂದ, ಟ್ರಸ್ಟಿಗಳಾದ ರವಿ ಮಂಜೇಶ್ವರ್, ಶಂಕರ ಸಾಲ್ಯಾನ್, ಉಪಾಧ್ಯಕ್ಷ ಬಾಬು ಟಿ. ಬಂಗೇರ,ಕೋಶಾಧಿಕಾರಿ ರಮೇಶ್ ಎನ್. ಉಳ್ಳಾಲ್, ಮೋಹನ ಬಿ. ಎಂ., ಸುಂದರ್ ಬಿ. ಐಲ್, ಆರೋಗ್ಯ ನಿಧಿ ಯ ಕಾರ್ಯಾಧ್ಯಕ್ಷತಿಮ್ಮಪ್ಪ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಶರುಗಳಾದ ದಿವ್ಯಾ ಆರ್. ಕೋಟ್ಯಾನ್ ಮತ್ತು ಉಜ್ವಲ ಚಂದ್ರಶೇಖರ್,ವಲಯ ಸಮಿತಿಯ ಕಾರ್ಯಧ್ಯಕ್ಷರುಗಳಾದ ಗಂಗಾಧರ ಕಲ್ಲಾಡಿ ಮತ್ತು ಬಾಬು ಬೆಳ್ಚಡ, ಮಾಜಿ ಉಪಾಧ್ಯಕ್ಷ ಸುಧಾಕರ ಉಚ್ಚಿಲ್,ಶಶಿಧರ ಬಿ. ಎಂ., ಮಾಜಿ ಕಾರ್ಯದರ್ಶಿ ಈಶ್ವರ ಎಂ. ಐಲ್, ಎಡ್ವಕೇಟ್ ಬಿ. ಕೆ. ಸದಾಶಿವ, ಎಡ್ವಕೇಟ್ ನಾರಾಯಣ ಸುವರ್ಣ,ಪುರಂದರ ಸಾಲ್ಯಾನ್, ವೆಂಕಪ್ಪ ಉಳ್ಳಾಲ್, ಶ್ರೀಧರ ಬಂಗೇರ, ವೃಂದಾ ದಿನೇಶ್, ಪ್ರಜ್ವಲ್ ಉಳ್ಳಾಲ್, ದಯಾನಂದ್ ಸಾಲ್ಯಾನ್, ಟಿ. ಸುಂದರ, ಆನಂದ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿವೇತನ ನಿಧಿಗೆ ಧಾನಿಗಳಾಗಿ ಸಹಕರಿಸಿದ ಎಲ್ಲರೂಸೀನಿಯರ್ ಕೆ.ಜಿ. ಯಿಂದ ಕಾಲೇಜು ಮಟ್ಟದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿವೇತನವನ್ನು ವಿತರಿಸಿದರು.

ಪ್ರಧಾನ ಕಾರ್ಯದರ್ಶಿ ಐಲ್ ಬಾಬು ಅವರು ವಂದನಾರ್ಪಣೆ ಮಾಡಿದರು. ತೀಯಾ ಬೆಳಕು ಮಾಸಿಕದ ಸಂಪಾದಕ ಶ್ರೀಧರಸುವರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.

Write A Comment