ಕನ್ನಡ ವಾರ್ತೆಗಳು

ತುಳುನಾಡ ರಕ್ಷಣಾ ವೇದಿಕೆ ಪುತ್ತೂರು ಕಾರ್ಯಕರ್ತರ ಸಮಾವೇಶ

Pinterest LinkedIn Tumblr

tulu_nada_vedike_1

ಮಂಗಳೂರು,ಜುಲೈ.06 : ತುಳುನಾಡ ರಕ್ಷಣಾ ವೇದಿಕೆ ಪುತ್ತೂರು ಕಾರ್ಯಕರ್ತರ ಸಮಾವೇಶ ತುಳುನಾಡ ರಕ್ಷಣಾ ವೇದಿಕೆ ಪುತ್ತೂರು ಘಟಕ ಕಾರ್ಯಕರ್ತರ ಸಮಾವೇಶ ನಡೆಯಿತು. ಕಾರ್ಯಕ್ರಮವನ್ನು ಸ್ಥಾಪಕರು, ಕೇಂದ್ರೀಯ ಅಧ್ಯಕ್ಷ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಉದ್ಗಾಟಿಸಿ ಸ್ಥಳೀಯ ಯುವಕರಿಗೆ ಕರಾವಳಿಯನ್ನು ಸಮಗ್ರ ಅಬಿವ್ರದ್ದಿಗೊಳಿಸುವ ನಿಟ್ಟಿನಲ್ಲಿ. ಸರ್ಕಾರ ಚಿಂತನೆ ನಡೆಸಬೇಕಾಗಿದೆ. ಎಲ್ಲಾ ವಿಚಾರದಲ್ಲೂ ತುಳು ಜನಾಂಗದ ಸಂಸ್ಕ್ರತಿಯ ನೆಲೆಬೀಡಾದ ಕರಾವಳಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಇದಕ್ಕಾಗಿ ‘ತುಳುವರು’ ಒಂದಾಗಿ ಹೋರಾಟ ಮಾಡಬೇಕಾಗಿದೆ ‌ಎಂದರು.

ತುಳುನಾಡ ರಕ್ಷಣಾ ವೇದಿಕೆ ಸಲಹೆಗಾರ ಎಂ. ಜೆ. ಹೆಗಡೆ ಮಾತನಾಡಿ ನೇತ್ರಾವತಿ ನದಿಯ ರಕ್ಷಣೆ ತುಳುವರ ಸಂಕಲ್ಪವಾಗಬೇಕು. ಜೀವನದಿಯೊಂದು ಬತ್ತಿ ಹೋದರೆ ಇಡೀ ತುಳು ಜನಾಂಗವೇ ನಾಶವಾಗುತ್ತದೆ. ಶ್ರೀಮಂತ ಸಂಸ್ಕ್ರತಿಯೊಂದು ಅವಸಾನವಾಗಿ ಬಿಡುತ್ತದೆ. ಕರಾವಳಿಯ ಇತಿಹಾಸ ಸೌಹಾರ್ದ ಬದುಕಿನ ಬೆಳಕಾಗಿತ್ತು. ಅದೇ ಸೌಹಾರ್ದತೆ ಇಂದು ನಾಶವಾಗುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ಗೌರವದ ಮೂಲಕ ನಾವು ಬದುಕಿ ನಾಡಿನ ನೆಲ ಜಲ ಭಾಷೆ ರಕ್ಷಿಸಿಕೊಳ್ಳಬೇಕು’ ಎಂದರು ಅಧ್ಯಕ್ಷತೆಯನ್ನು ಫೂತ್ತೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಮನೋಹರ್ ರೈ ಮೇಲ್‌ಮಜಲ್ ವಹಿಸಿದ್ದರು.

tulu_nada_vedike_2

ಈ ಸಂಧರ್ಬದಲ್ಲಿ ಕಳೆದ 40 ವರ್ಷ ಕೌಂಪೌಂಡರ ವ್ರತ್ತಿ ಮೂಲಕ ಯಾವುದೇ ಪಲಾಪೇಕ್ಷೆ ಇಲ್ಲದೇ ಜನ ಸೇವೆ ಮಾಡುತ್ತಿರುವ ನರಸಿಂಹ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನq ಜಿಲ್ಲಾ ಅಧ್ಯಕ್ಷರಾದ ಡಾ ಕೆ. ಎ. ಮುನೀರ್ ಬಾವಾ, ತುಳು ಆಕಾಡೆಮಿ ಸದಸ್ಯ ದುರ್ಗಾಪ್ರಸಾದ ಕುಂಬ್ರ, ಮಾಜಿ ಸದಸ್ಯೆ ಪ್ರೇಮಲತಾ ಬೊಳ್ವಾರ್, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಮೆಹೇಂದ್ರನಾಥ ಸಾಲೆತ್ತೂರು ಕಾರ್ಯಕರ್ತರಿಗೆ ತುಳುನಾಡಿನ ಮಹತ್ವದ ಬಗ್ಗೆ ಮಾತನಾಡಿದರು.ವೇದಿಕೆಯನ್ನು ಕೇಂದ್ರ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿಕಾ ಜೈನ್, ವಕೀಲರ ಘಟಕ ರಾಜ್ಯ ಅಧ್ಯಕ್ಷ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

ಆನಂದ ಅಮೀನ ಅಡ್ಯಾರ್ ಸ್ವಾಗತಿಸಿ, ಶ್ರೀಕಾಂತ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿ, ಗಣೇಶ ಪುತ್ತೂರು ವಂದನಾರ್ಪಣಿ ಮಾಡಿದರು. ಈ ಸಂದರ್ಭದಲ್ಲಿ ಪುತ್ತೂರು ಘಟಕದ ಪದಾಧಿಕಾರಿಗಳಾಗಿ ಆಯ್ಕೆಗೊಂಡ ಕಾರ್ಮಿಕ ಘಟಕದ ಅಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ ಮುಂಡೋಡಿ ಗುತ್ತು, ಯುವ ಘಟಕದ ಅಧ್ಯಕ್ಷರಾದ ಮನೀಷ್ ನಾಯರ್, ಕಾರ್ಯಾಧ್ಯಕ್ಷರಾದ ಧನು ಪಟ್ಲ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಪವನ್ ಶೆಟ್ಟಿ, ಇವರ ತಂಡಕ್ಕೆ ಶಾಲು ಹಾಗೂ ತಾಂಬೂಲ ವೀಳ್ಯದೆಲೆ ನೀಡಿ ಗೌರವಿಸಲಾಯಿತು.

Write A Comment